*ಗಗನ ಮಲ್ಲಿಗೆ( ಭಾವಗೀತೆ)*

*ಗಗನ ಮಲ್ಲಿಗೆ( ಭಾವಗೀತೆ)*

ಕವನ

ಚಿಗುರಿದ ಪ್ರೀತಿಯ ತೇರನು ಏರುತ

ಸಾಗುವೆಯಲ್ಲೆ ಓ ಚೆಲುವೆ

ಮೊಗದಲಿ ನಗುವಿನ ಅಲೆಯಲಿ ತೇಲಿಸಿ

ವಾಹಿನಿಯಾದೆ ಓ ಒಲವೆ

 

ಸುಮಗಳ ಲೋಕದ ಗಗನದ ಮಲ್ಲಿಗೆ

ನೂತನಭಾವ ತಂದಿರುವೆ

ಕಮಲದ ಕಂಗಳ ಕಡಲಿನ ಒಡೆಯನೆ

ಜೇನ್ಮಳೆಯನ್ನು ಸುರಿದಿರುವೆ

 

ಗಿರಿಯಲಿ ನಲಿಯುವ ಹಂಸದ ತೋಷವ

ನೋಡಿದೆ ನಾನು ನಿನ್ನೊಳಗೆ

ಧರೆಯಲಿ ಎಲೆಗಳ ಇಬ್ಬನಿ ಹನಿಯದು

ಜಾರುತಲಿರುವ ಸವಿಗಳಿಗೆ

 

ಹೃದಯವು ನಿನ್ನನೆ ಬಯಸುತ ನಿಲ್ಲಲು

ಕನಸಿನ ಲೋಕ ಕರೆದಿಹುದು

ಸುಧೆಯನು ಹರಿಸುತ ಗಾನವ ಗುನುಗುತ

ನಲ್ಲೆಯ ಬಳಿಗೆ ಸುಳಿದಿಹುದು

-*ಶಂಕರಾನಂದ ಹೆಬ್ಬಾಳ*

 

ಚಿತ್ರ್