ಗಜಲ್

ಗಜಲ್

ಬರಹ

ಗಜ಼ಲ್
ಎದೆಯ ಬೇಗುದಿಗೆ ಎಷ್ಟೊಂದು ರೆಕ್ಕೆಗಳು ಹಾರದೆ ಉಳಿದುವಲ್ಲ
    ಅಗಲಿಕೆಯ ನೆನಪಿಗೆ ಎಷ್ಟೊಂದು ತುಟಿಗಳು ಮುತ್ತಿಡದೆ ಉಳಿದುವಲ್ಲ
ವಿರಹದುರಿಗೆ ಉದುರಿದ ಕಂಬನಿಗಳು ಚಿಪ್ಪಿನೊಳು ಮುತ್ತುಗಳಾಗಿ
     ಹೃದಯ ಸಾಗರದ ನೋವಿನ ಕುರುಹುಗಳಾಗಿ ಬಿಡಿಸದೆ ಉಳಿದುವಲ್ಲ
      ಕೈಜಾರಿ ಹೋದ ಹೊತ್ತಿನ ಬೇಗೆಯಲಿ ನೊಂದು, ಬೆಂದು, ಬಸವಳಿದು
      ಮನದ ತೋಟದಿ ಅರಳಿದ ಕೆಂಗುಲಾಬಿಗಳು ಮುಡಿಯದೆ ಉಳಿದುವಲ್ಲ
     ತನುಮನದೊಳಗೆಲ್ಲ  ಸುಳಿದು ಹರಿದಾಡಿವೆ ಉರಿಯ ಕೆನ್ನಾಲಿಗೆಗಳು
            ತಪ್ತ ಮನದ ಒಲವಿನ ಮಾತುಗಳೆಲ್ಲ ಉಸಿರದೆ ಉಳಿದುವಲ್ಲ
            ಒಲವೆ ನೀನಿರಿದ ಕುಡಿನೋಟದ ಬಾಣ ಸಾವಿನ ಅಲಗುಗಳಾಗಿ 
       ತಿವಿಯುತಿವೆ ಸಿದ್ಧನ ನೂರು ಭಾವನೆಗಳು ಹೊರಚಿಮ್ಮದೆ ಉಳಿದುವಲ್ಲ
                                                                                                  
                                 - ಸಿದ್ಧರಾಮ ಹಿರೇಮಠ ಕೂಡ್ಲಿಗಿ