ಗಜಲ್

ಗಜಲ್

ಕವನ

 ಈಗೀಗ ಬರೆಯಲು ಮನಸ್ಸಾಗುತ್ತಿಲ್ಲ,

ಬದುಕಬೇಕೆನ್ನುವ ಮನಸ್ಸಾಗುತ್ತಿಲ್ಲ.....


ಬುರುಬುರನೆ ಏಳುತ್ತವೆ ಕನಸುಗಳು,

ದಾಖಲಿಸಬೇಕೆನ್ನುವ ಮನಸ್ಸಾಗುತ್ತಿಲ್ಲ....


ಉದುರಿದ ಮೊಗ್ಗುಗಳು ಸಪ್ಪೆಯೆನಿಸಿವೆ,

ಅರಳುವ ಹೂಗಳ ಬಗ್ಗೆ ಮನಸ್ಸಾಗುತ್ತಿಲ್ಲ....


ಪದಗಳೆಲ್ಲ ಬಂದು ನಿಂತಿವೆ ಒಂದೇ ಕಡೆ,

ಗಜಲ್ ವೊಂದು ಹೆಣೆಯಲು ಮನಸ್ಸಾಗುತ್ತಿಲ್ಲ...


ಹರಿದು ಚಲ್ಲಾಪಿಲ್ಲಿಯಾಗಿವೆ ಕಾಲ್ಗೆಜ್ಜೆಗಳು,

ಹೂಗಳ ದಂಡೆ ಕಟ್ಟಲು ಮನಸ್ಸಾಗುತ್ತಿಲ್ಲ......

Comments