ಗಜಲ್
ಕವನ
ಯಾವ ಕಾರಣಕ್ಕಾಗಿ ಈ ರಕ್ತದ ಹರಿವು?
ಮುದ ನೀಡದು ಹೃದಯದಾಳದ ಆ ಕರಡು ಪ್ರೀತಿಗೆ
ಲೇಪನ ಹಚ್ಚುವಿರೇಕೆ? ಮಾದಗಾಯವನ್ನು ಕೆರೆದು
ಸೋರುವ ದ್ರವಕ್ಕೆ ತಡೆಯೊಡ್ಡಿ, ಬೇಸರ ಪಡೆಯುವಿರೇಕೆ?
ಹರುಷದ ತಂಪಿನಲಿ ಸಿಹಿಯಾದ ಬಾಳು ಇದ್ದು
ಸೊರಗದಿರಲಿ ಸಾರೋಟಿನ ಗಾಲೆಯ ಉರುಳಿನಂತೆ
ಊರಾಚಿನ ಹೊಲದಲ್ಲಿ ತಂಪುಗಾಳಿ ಬೀಸುವಾಗ
ಒಡಕು ಕಾಣದ ವಿಸ್ಮಯ ಅವನ ಲೀಲೆಯಲ್ಲಿ ಕಾಣುವಿರಿ.
ಕಟ್ಟ ಬೇಕು ಗೂಡು ಅವು ಮಸಣ ಆಗದಿರಲೆಂದು
ಹಚ್ಚಬೇಕು ದೀಪ ಜ್ಯೋತಿ ಬೆಳಗಿ ಬೆಳಕು ಹರಡಲೆಂದು
ವಿಷ ಹರಡಬೇಡಿ ಪರಿಸರ ಕಲಬೆರಿಕೆಯಾದೀತು
ಆಗಸವು ಹಗುರವಾಗಿ ಕೆಂಡ ಉಗಳಬಾರದು.
ಮುನೀರ್ ಅಹಮದ್.