ಗಜಲ್

ಗಜಲ್

ಕವನ

ಹೊತ್ತಿ ಉರಿಯುತ್ತವೆ ಗುಡಿಸಲಿನಲ್ಲಿ ದೀಪಗಳು
ಹೊತ್ತಿ ಬೆಳಕಾಗುತ್ತವೆ ಮಹಲಿನಲ್ಲಿ ದೀಪಗಳು..

ಒಲೆ ಉರಿಸಲು ಹೊಯ್ದಾಡುತ್ತವೆ ನಿಜ‌
ಘಾಟು ವಾಸನೆಗೆ ಹೆದರುತ್ತವೆ ಕನಸಿನಲ್ಲಿ ದೀಪಗಳು

ನನ್ನಲ್ಲಿ ಉರಿಯುತ್ತಿರುವ‌ ಅಗ್ನಿಗೇನೂ ಹೊಸದಲ್ಲ
ಬೆ0ದು ಹೊಯ್ದಾಡುತ್ತವೆ ಮನಸಿನಲ್ಲಿ ದೀಪಗಳು

ಬಿಸಿಲಲ್ಲಿ ಬಣ್ಣಗೆಟ್ಟು ಹೊತ್ತಿಕೊಳ್ಳುತ್ತದೆ ದೇಹ‌
ಸಾವಿರಾರು ಹೀಗೂ ಬೆಳೆಸುತ್ತೇವೆ ಉಸಿರಿನಲ್ಲಿ ದೀಪಗಳು..

ತುತ್ತಿಗಾಗಿ ಚೀರಾಡಿ ಕೂಗುವ‌ ಆ ಧ್ವನಿಗೆ
ಎಣ್ಣೆಯಿಲ್ಲದೆ ಮ0ದವಾಗುತ್ತವೆ ಬದುಕಿನಲ್ಲಿ ದೀಪಗಳು....

Comments

Submitted by H A Patil Fri, 11/09/2012 - 11:21

ಮೇಡಂ ವಂಧನೆಗಳು
ತಮ್ಮ ' ಗಜಲ್ ' ತುಂಬಾ ಚೆನ್ನಾಗಿದೆ, ಅಷ್ಟೆ ಅಲ್ಲ ದೀಪಾವಳಿಯ ಆಗಮನದ ಈ ಶುಭ ಸಂಧರ್ಭದಲ್ಲಿ ಅರ್ಥಪೂರ್ಣ ಕವನ ಕೂಡ, ಆದರೆ ಗಜಲ್ ಗದ್ಯದ ಸಶಲುಗಳಂತೆ ಬಂದಿದೆ, ಇದನ್ನು ಸರಿಪಡಿಸಲು ಸಾಧ್ಯವೆ ? ಪ್ರಯತ್ನಿಸಿ, ಧನ್ಯವಾದಗಳು