ಗಝಲ್ ಆನಂದ
೧.
ಗತ್ತಲೇ ಹೋಗುವಾ ಕೊಂಬಿನಾ ರೀತಿಯೇ
ಬತ್ತದಾ ಮುತ್ತಲೇ ಬಾಳುವಾ ರೀತಿಯೇ
ಚೇತನಾ ಸತ್ತರೇ ಚಿಂತನೇ ಹುಟ್ಟಿತೇ
ಮಂಚವಾ ಏರಲೂ ಬಾರದಾ ರೀತಿಯೇ
ಸುಂದರಾ ಸಂತೆಯೂ ಕಂಡಿರಾ ಊರಲೀ
ಬಂಧುವೇ ಎಲ್ಲಿಹೇ ಮಲ್ಲೆಯಾ ರೀತಿಯೇ
ಡೊಂಕಿನಾ ಸಂಕವೂ ಜೀಕುತಾ ನಕ್ಕಿದೇ
ಅಂಕೆಯೂ ಇಲ್ಲದಾ ಮತ್ಸರಾ ರೀತಿಯೇ
ನೋಟವೇ ಎಲ್ಲಿಹೇ ಬಾರನೇ ಈಶನೇ
ಜೋಳಿಗೇ ಕಂಪಿಗೇ ಸಂಭ್ರಮಾ ರೀತಿಯೇ
***
೨.
ಬುವಿಯಲ್ಲಿ ಮುಂಗಾರಿನ ಸವಿಯ ಹೊಳೆ ಹರಿಯುತ್ತಿದೆ ಗೆಳತಿ
ಪ್ರೀತಿಯ ಮೂರಕ್ಷರದೊಳು ಜೇನಿನ ಹನಿ ಹೊಳೆಯುತ್ತಿದೆ ಗೆಳತಿ
ಮಧುರ ಗಾನದ ಮೋಹ ಸುತ್ತಲೆಲ್ಲವು ಚೆಲ್ಲಿ ಮರೆಯಾಗಿದೆ
ಅತಿಯೆನಿಪ ಒಡಲ ಬಯಕೆಯು ಕಾಣೆಯಾಗುತ್ತಿದೆ ಗೆಳತಿ
ನನ್ನ ಹೃದಯ ಕಮಲದ ಮಕರಂದವ ಬಗೆದು ನೋಡುತ್ತಿದ್ದೇನೆ
ಮೋಹಕ ರೂಪದ ಚೆಲುವ ರಾಶಿಯು ಮರೆಯಾಗುತ್ತಿದೆ ಗೆಳತಿ
ಹುಣ್ಣಿಮೆಯ ದಿನಗಳಲ್ಲಿ ಪ್ರೇಮಾಸರೆಯ ನಡುವೆ ತೇಲುತ್ತಿದ್ದೆ
ಮಾತೇ ಇಲ್ಲದ ಮತ್ತಿನಲ್ಲಿ ತೃಷೆಯು ಮಾಯವಾಗುತ್ತಿದೆ ಗೆಳತಿ
ಉಣಿಸುವವರ ನಡುವೆಯೇ ಗರಬಡಿದವನಂತೆ ಕುಳಿತ ಈಶಾ
ಮುತ್ತೇ ಇಲ್ಲದ ಈ ಜಗತ್ತು ಮತ್ತೊಮ್ಮೆ ಮುನಿಯುತ್ತಿದೆ ಗೆಳತಿ
ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
