ಗಝಲ್ ಗಳು ಮತ್ತು ಹನಿಗಳು

ಗಝಲ್ ಗಳು ಮತ್ತು ಹನಿಗಳು

ಕವನ

ಮಾತಿನ ಹಿಡಿತಕೆ ಜೀವನ ದಾರಿಯು ಮನಸನು ಅರೆಯದೆ ಹೋಗಿದೆ

ಸೋತೆನು ಎನದಿರು ಪಾವನ ಬದುಕದು ಯಾರಿಗು ಅರಿಯದೆ ಹೋಗಿದೆ 

 

ಬೇರೆಯೆ ಲೋಕದಿ ಸಾಗುತ ಬರುವೆಯ ಸುಮಧುರ ಸಪ್ನವು ಎಲ್ಲಿದೆ

ಬಾರದೆ ಒಲವಿನ ಚೇತನ ಕಮರಿದೆ ನಿನ್ನನು ಕರೆಯದೆ ಹೋಗಿದೆ

 

ಪುಣ್ಯವು ತೀರಕೆ ಬಾರದೆ ಸೋತಿತೆ ದೂರಕೆ ಸರಿವುದು ಏತಕೆ

ಕೋಪಕೆ ಮನುಜನ ಚಿಂತನೆ ಕೊರಗಿತೆ ಹೃದಯವು ಬೆರೆಯದೆ ಹೋಗಿದೆ

 

ಕಾಡಿನ ಲೋಕದಿ ಮೋಹದಿ ವಾಸಿಪ ಜನರಲಿ ಚೆಲುವನು ಕಂಡೆಯ

ಕಾಡುವ ಚಿತ್ತಕೆ ಅಕ್ಷರ ಬೇಲಿಯ ಹಾಕುತ ಬರೆಯದೆ ಹೋಗಿದೆ

 

ಕಾಮನ ಬಿಲ್ಲಲಿ ರೂಪವ ನೋಡುತ ನಡೆಯುತ ಹೋದೆಯ ಈಶನೆ

ಕಾಮಿಯ ಕಣ್ಣಿನ ಬಾಳಿನ ಜ್ಯೋತಿಗೆ ಬದುಕದು ಜರೆಯದೆ ಹೋಗಿದೆ

***

ಗಝಲ್

ನಿಶೆಯಿದ್ದರೆ ಮನದಲಿ ಗೆಲುವು ಖಚಿತ

ಕಸುವಿದ್ದರೆ ಮನದಲಿ ಗೆಲುವು ಖಚಿತ

 

ಜೀವವಿದ್ದರೆ ಮನದಲಿ ಗೆಲುವು ಖಚಿತ

ಒಲವಿದ್ದರೆ ಮನದಲಿ ಗೆಲುವು ಖಚಿತ

 

ತನುವಿದ್ದರೆ ಮನದಲಿ ಗೆಲುವುಖಚಿತ

ಹಣವಿದ್ದರೆ ಮನದಲಿ ಗೆಲುವು ಖಚಿತ

 

ಮೌನವಿದ್ದರೆ ಮನದಲಿ ಗೆಲುವು ಖಚಿತ

ಗುಣವಿದ್ದರೆ ಮನದಲಿ ಗೆಲುವು ಖಚಿತ

 

ಎಚ್ಚರವಿದ್ದರೆ ಮನದಲಿ ಗೆಲುವು ಖಚಿತ

ಸವಿಯಿದ್ದರೆ ಮನದಲಿ ಗೆಲುವು ಖಚಿತ

***

ಮುಕ್ತಕ 

ಮದವಿರದ ಬಾಳುವೆಯು ಇರಲೆಂದು ಬುವಿಯೊಳಗೆ

ಕದವಿರದ ಮನವಿರಲಿ ನಮ್ಮೊಳಗೆವೊಳಗೆ |

ವಿಧಗಳದು ನಮಗಿರಲು ಬದುಕೊಳಗಿನಾ ನಡೆಲಿ 

ಮಧುಮೇಹ ಬರದೆಂದು -- ಛಲವಾದಿಯೆ||

***

ಹನಿಗಳು

ಮನವಿಹುದು

ತನುವೊಳಗೆ ,ನೀನು

ತಿಳಿಯಾಗಿಸು !

 

ಹಳಿಯ ಮೇಲೆ

ಸಾಗಿದಂತೆ , ನೀ ರೈಲು

ಬಿಡಬೇಡವೊ !

 

ಕಣ್ಣೀರಿನಲ್ಲಿ

ಕೈ ತೊಳೆದೆ ನಾನಿಂದು

ನೀನೆಲ್ಲಿ ಸಿಂಧೂ !

 

ಗಂಡಸು ಇಂದು

ರಮಣಿಯ ಎದುರು

ಒಣ ಕೊಂಬೆಯು !

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್