ಗಝಲ್ ಮತ್ತು ಹನಿಗಳು
ಕವನ
ಸಾಹಿತ್ಯದ ಜೊತೆಗೆ ಕವಿಯು ಸಾಗಬೇಕಾದರೆ ಛಲವು ಬೇಕು
ಜೀವಿಗಳು ಬುವಿಯಲ್ಲಿ ಬದುಕಬೇಕಾದರೆ ಜಲವು ಬೇಕು
ಜೀವನದ ದಾರಿಗಳಲಿ ಹಲವು ಕವಲುಗಳಿವೆ ಗೊತ್ತಿಲ್ಲವೆ
ಸಾಧಿಸುವ ಗುರಿಗಳಲಿ ಹೋಗಬೇಕಾದರೆ ಗೆಲುವು ಬೇಕು
ಮೌನದ ಗುಣವದು ಕೆಲವೊಮ್ಮೆ ಪ್ರಯೋಜನಕ್ಕೆ ಬಾರದು
ದ್ವೇಷದ ನುಡಿಯದುವು ನಿಲ್ಲಬೇಕಾದರೆ ಒಲವು ಬೇಕು
ಬದುಕಿನ ಮುಖಪುಟವು ಸತ್ಯವನ್ನೇ ನುಡಿಯುತ್ತಾ ಸಾಗಲಿ
ವಾಸ್ತವತೆಗಳ ನಡುವೆ ನಡೆಯಬೇಕಾದರೆ ಬಲವು ಬೇಕು
ಚಿಂತೆಯನ್ನು ಬಿಡುತಲಿ ಚಿಂತನೆಯಲ್ಲೇ ಸಾಗುತಿರು ಈಶಾ
ಬಾಳಿನ ಪಲ್ಲವಿಯಲ್ಲಿ ಮಲಗಬೇಕಾದರೆ ನೆಲವು ಬೇಕು
***
ಹನಿಗಳು
ಕಾಮನೆಗಳು
ಸರಿಯಿದ್ದರೆ ನೋಡು
ತುಂಬು ಸಂಸಾರ !
ಕಾಮಕ್ಕಾಗಿಯೇ
ಮದುವೆಯಾಗದಿರಿ
ಒಂಟಿಯಾಗಿರಿ!
ಮೋಹದ ಕಾಮ
ತುಳಿದಿಹ ಹೆಣ್ಣಿಗೆ
ಸಂಸಾರ ಹುಣ್ಣು !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್