ಗಝಲ್ ಮತ್ತು ಹನಿಗಳು
ತರಂಗಗಳ ದುಡಿಸು ಹುಚ್ಚುಗಳ ಹಿಡಿಸು ಮನವೆ
ದುಃಖಗಳ ಓಡಿಸು ಸುಖವನು ಸಿಡಿಸು ಮನವೆ
ತನುವುಗಳ ತೊಡಿಸು ಎನಗೆ ಹೊಸತು ಕಾಣದು
ಶಿಖರಗಳ ಜೋಡಿಸು ಸಿಕ್ಕುಗಳ ಸುಡಿಸು ಮನವೆ
ಕಾಮನೆಗಳ ಬಿಡಿಸು ನನ್ನಲ್ಲಿ ಏನನ್ನು ಕಂಡೆಯೊ
ತಾಮಸಗಳ ಆಡಿಸು ಕೊನೆಯಲ್ಲಿ ಕಾಡಿಸು ಮನವೆ
ಮುತ್ತುಗಳ ಕೂಡಿಸು ಕಡಲಿನಲ್ಲಿ ಉಬ್ಬರವಿದೆ ನಿಜವೆ
ಮತ್ತುಗಳ ನುಡಿಸು ಜೊತೆಯಾಗಿ ಬಾಡಿಸು ಮನವೆ
ಪ್ರೀತಿಗಳ ಮುಡಿಸು ಪ್ರೇಮವದು ಸಿಗುವುದೇ ಈಶಾ
ಕನಸುಗಳ ಹಾಡಿಸು ನನಸುಗಳ ಬಡಿಸು ಮನವೆ
***
ಗಝಲ್-೨
ಮೋಹವೊಂದು ಸುತ್ತಿದಾಗ ಹೃದಯದೊಳಗೆ ವೇದನೆಯೆ
ತೃಪ್ತಿಯೊಂದು ಕಾಣೆಯಾಗಿ ಮನಸ್ಸಿನೊಳಗೆ ವೇದನೆಯೆ
ಬೇಡವಾದ ಮುಳ್ಳನ್ನು ಪಾದದಿಂದ ತೆಗೆಯಬೇಕೆ ಜತನದಿಂದ
ನಡೆಯೊಳಗಿನಲ್ಲಿಯ ಒಡಲಾಳದ ತನುವಿನೊಳಗೆ ವೇದನೆಯೆ
ನೀರ ಕೊಡವ ಹೊತ್ತು ನಡೆಯೆ ಸುತ್ತಲೆಲ್ಲ ನೋಡಬೇಕು
ಜಾರಿ ಬಿದ್ದಿಹ ಕಡೆಯ ಕ್ಷಣದ ಚಿಂತೆಯೊಳಗೆ ವೇದನೆಯೆ
ಸೋಲಿನೊಳಗೆ ಸೋತ ಗಳಿಗೆ ನಡೆದೆಯಾ ವಿರಹಿಯಾಗಿ
ಜೀವದೊಳಗಿನ ಭಾವವಿರದ ಮೌನದೊಳಗೆ ವೇದನೆಯೆ
ದಯದ ಮರ್ಮ ಕಲಿಯಬೇಕು ನಿತ್ಯವು ಬಾಳಲಿಂದು ಈಶಾ
ನನಸೆನ್ನುವ ಪ್ರೀತಿಯೊಳಗಿನ ವಿಷಯದೊಳಗೆ ವೇದನೆಯೆ
***
ಹನಿಗಳು
ಹುಟ್ಟಿ
ಎರಡು ವರ್ಷಕ್ಕೆ
ಕಲಿಯಲೆಂದು
ಮಗನನ್ನು ಶಾಲೆಗೆ
ಸೇರಿಸಲು
ನನ್ನವಳು ಮುಂದು !
ಈಗ
ನೋಡಬೇಕೇ ?
ಮಗನ
ಗೂ
ನು
ಬೆನ್ನು !!
***
ಮನೆಯ ವಾಸ್ತುವೆ ಸರಿಯಿಲ್ಲಯಿಲ್ಲಿ
ಸದಾ ಜಗಳವಾಡುವ ಸತಿಪತಿಯಿಲ್ಲಿ
ಮೋಟು ಜಡೆಲೆ ಹೊಡೆವಳು
ಘಾಟು ಹೊಗೆಯ ಹಾಕುವಳು
ಅವಳು ಒಳಗೆ ನಾನು ಹೊರಗೆಯಿಲ್ಲಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ