ಗಝಲ್ : ಮಹಾತ್ಮ
ಕವನ
ನಿಷ್ಠಾವಂತ ಗುಣಗಳನ್ನು ಹೊಂದಿ ಸಮಾಜಕ್ಕೆ ಮಾದರಿ ಆಗಿದೆಯಾ ಮಹಾತ್ಮ
ಶ್ರೇಷ್ಠವಂತ ನೀನೆಂದು ಸಾರಿ ಹೇಳುವುದಕ್ಕೆ ತಲೆಯ ಬಾಗಿದೆಯಾ ಮಹಾತ್ಮ
ದುರ್ಘಟನೆ ಸಂಭವಿಸದೆ ತಾಳ್ಮೆ ಸಹನೆ ಕರುಣೆಯನ್ನು ಏಕೆ ಕಲಿಸಲಿಲ್ಲ
ಸಂಘಟನೆ ಮೂಲಕ ವ್ಯಕ್ತಿಯನ್ನು ಗುರುತಿಸಿ ತಕ್ಕಡಿಯಲ್ಲಿ ತೂಗಿದೆಯಾ ಮಹಾತ್ಮ
ಜೀರ್ಣಿಸಿಕೊಳ್ಳದ ಮಾತು ಆಡದೆ ಮೌನವಾಗಿ ಇದ್ದರೆ ಒಳ್ಳೆಯದೆ ನಿನಗೆ
ಕರ್ಣನಂತೆ ದಾನ ಧರ್ಮಗಳನ್ನು ಕೂಡಿಸಿ ಸ್ವರ್ಗಕ್ಕೆ ಹೋಗಿದೆಯಾ ಮಹಾತ್ಮ
ಆಸೆ ಆಮೀಷಕ್ಕೆ ಒಳಗಾಗದೆ ಮನುಷ್ಯನಾಗಿ ಬಾಳುವುದು ತುಂಬಾನೇ ಕಷ್ಟ
ದಾಸನಾಗಿ ಶಾಂತಿ ಮಂತ್ರವನ್ನೇ ಉಪಹಾರವಾಗಿ ತಿಂದು ತೇಗಿದೆಯಾ ಮಹಾತ್ಮ
ನೋವನ್ನು ನುಂಗಿ ಸಂತಸದಿಂದಿರುವ ತಾತನನ್ನು ನೋಡಿ ಕಲಿ ಚಂದ್ರ
ಸಾವನ್ನು ಗೆದ್ದ ಧೀರನಂತೆ ನಡೆದಾಡಿ ಹುತಾತ್ಮನೆಂದು ಸಾಗಿದೆಯಾ ಮಹಾತ್ಮ.
-ಚಂದ್ರಶೇಖರ ಶ್ರೀನಿವಾಸಪುರ, ಕೋಲಾರ ಜಿಲ್ಲೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್