*ಗಡಿ* ಯಾರ
ಕವನ
ನಡೆಯುತಿದೆ ಗಡಿಯಾರ ಮುಂದು ಮುಂದಕ್ಕೆ
ನಡೆಯುತ್ತ, ನಡೆಯುತ್ತ ಕಾಲಚಕ್ರಕ್ಕೆ
ಜಾರುತ್ತ, ಜಾರುತ್ತ ಸಮಯವಾಯಿತೆಂದು
ಸಾಗುತ್ತ, ಜರಗುತ್ತಾ ನಾ ನಿಲ್ಲನೆಂದೂ
ನಡೆಯುವುದು ಗಡಿಯಾರ ಕೀಲಿ ನೆರವಿನಿಂದ
ತಿರುಗಿಸಿ, ತಿರುಗಿಸಲೇಬೇಕು ನಿಮ್ಮ ಕೈಯಿಂದ
ನಮ್ಮ ಬದುಕಿಗಿಹುದು ಉಸಿರು ಸೂತ್ರವು
ಗಡಿಯಾರದ ನಡೆಯಂತೆಯೇ ನಮ್ಮ ಬಾಳ ಪಾತ್ರವು
ಸಮಯ ಪ್ರಜ್ಞೆಯ ಪಾಠವು ಗಡಿಯಾರದಲ್ಲಿ
ಹಾಳು ಗೆಡವಿದರೆ ನಮಗೇನು ಸಿಗದು ಇಲ್ಲಿ
ಗಡಿಯಾರ ಸುತ್ತವುದು ಕೀಲಿಯ ಸಂಗವಿರುವತನಕ
ಸತ್ಸಂಗವಿರಲಿ ಬಾಳಿನಲಿ ಉಸಿರ ಕೊನೆಯತನಕ
ಮಹಾಮಹಿಮನ ಸೂತ್ರದಲಿ ನಾವು ಬಂಧಿ
ಬಾಳಿರುವತನಕ ಬರದಿರಲಿ ಎಂದೂ ಇಬ್ಬಂಧಿ
ಚಿಂತಿಸದೆ ಸಾಗೋಣ ಗಡಿಯಾರದಂತೆ
ಉಸಿರಿಗರಿವಿದೆಯಲ್ಲ ಇದು ದೊಡ್ಡ ಸಂತೆ !!
ಗಡಿಯಾರ ನಿಲ್ಲಲು ಆಯುಷ್ಯದ ನಿಲ್ದಾಣ ಬರಲು
ಅದಕಿರುವ " ಗಡಿಯಲ್ಲಿ " ಭಂಟನಂತಿರಲು
" ಕಾಲಚಕ್ರ" ದ ಮಹಿಮೆ ಗಡಿಯಿರದ ಗಡಿಯಾರದಲ್ಲಿ
ಸಮಯ, ಸಂದರ್ಭದವದು ಗಡಿ ಇರುವ ಬದುಕಲ್ಲಿ.!!
-ವೀಣಾ ಕೃಷ್ಣಮೂರ್ತಿ, ದಾವಣಗೆರೆ.
ಚಿತ್ರ್
