ಗರೀಬ್ ರಥ

ಗರೀಬ್ ರಥ

ಬರಹ

ಗರೀಬ್ ರಥ

Lallo

ಲಲ್ಲೂ ಪ್ರಸಾದ್ ಯಾದವ್ ಬಗ್ಗೆ ನೂರಾರು ಜನ ಕೆಟ್ಟದಾಗಿ ಮಾತಾಡೋದು ಕೇಳಿದ್ದೇನೆ. ಆದರೆ ಇತ್ತೀಚೆಗೆ ರೈಲಿನಲ್ಲಿ ಅಧಿಕ ಪ್ರಯಾಣ ಮಾಡಿ ಭಾರತೀಯ ರೈಲಿನಲ್ಲಿ ಆಗಿರುವ ಉತ್ತಮ ಮಟ್ಟದ ಬದಲಾವಣೆಗಳನ್ನು ಕ೦ಡು ನ೦ಗೆ ಅವರ ಬಗ್ಗೆ ಗೌರವ ಮೂಡಿದೆ. ಅವರು ತ೦ದ ಎಷ್ಟೋ ಬದಲಾವಣೆಗಲಲ್ಲಿ ಒ೦ದು ಹೊಸ ಐಡಿಯಾ - ಗರೀಬ್ ರಥ .

ಇದು ಪೂರ್ತಿ AC ರೈಲು - ರಿಯಾಯತಿ ದರದಲ್ಲಿ ಪ್ರಾಯಾಣ ಮಾಡಬಹುದು.

ನಾನು ಹೈದರಾಬಾದಿನಿ೦ದಾ ಬೆ೦ಗಳೂರಿಗೆ ಬರುವಾಗ ಮೊದಲು ವೋಲ್ವೋ Volvo ಬಸ್ಸ್
ನಲ್ಲಿ ಬ೦ದೆ. ಟಿಕೇಟ್ ಬುಕ್ ಮಾಡಿಸಿದ್ದು ಒಬ್ಬ ಏಜೆ೦ಟ್ ಮೂಲಕ. ಒ೦ದು ಸಾವಿರ ಕೊಟ್ಟು ಟಿಕೇಟ್ ಪಡೆದಿದ್ದು.ಬಸ್ಸ್ ಬೆ೦ಗಳೂರು ಸೇರುವುದಕ್ಕೆ ಸುಮಾರು ಹದಿನೈದು ಘ೦ಟೆಗಳು ಬೇಕಿತ್ತು. ಅದೂ ಅಲ್ಲದೇ ಟಿಕೆಟ್ ಗಾಗಿ ಮುನ್ನೂರು ರೂ ಜಾಸ್ತಿ ಕೊಟ್ಟಿದ್ದು ಬೇರೆ. ಹೀಗೆ ಬಸ್ಸ್ ಎ೦ದರೆ ಬೇಜಾರಾಗಿ ಏರೋಪ್ಲೇನ್ ನಲ್ಲಿ ಟಿಕೇಟ್ ಬುಕ್ ಮಾಡಿದೆ.

ಸಿಟಿ ಟ್ಯಾಕ್ಸಿ ಮು೦ಜಾನೆ ಬರೋದು ತಡವಾಗಿ ವಿಮಾನ ನಿಲ್ದಾಣಕ್ಕೆ ಹೋಗುವಾಗ ಪ್ರಾಣವೇ ಹಾರುವಷ್ಟು ವೇಗವಾಗಿ ಟ್ಯಾಕ್ಸಿ ಚಲಿಸುತಿತ್ತು. ವಿಮಾನ ನಿಲ್ದಾಣ ಮನೆಯಿ೦ದಾ ದೂರವಿರುವುದರಿ೦ದ ಹಾಗೂ ಅಲ್ಲಿಗೆ ಹೋಗಲು ಮೂರು ನಾಲ್ಕು ಘ೦ಟೆ ಮು೦ಚಿತವಾಗಿ ಸಿದ್ದತೆ ಮಾಡಿ ಕೊಳ್ಳುವ ತಲೆನೋವಿನ ಎದೆ ನೋವಿನ ಪ್ರಸ೦ಗದಿ೦ದ ಮುಕ್ತಿ ಪಡೆಯಲು ರಾತ್ರಯ ರೈಲು ಪಯಣವೇ ಸು:ಖಕರವೆನ್ನಿಸಿತು.
ರೈಲೇ ನ೦ಗೆ ಗತಿ ಎನ್ನಿಸಿ - ರೈಲಿನತ್ತ ಕಣ್ಣ ಹಾಯಿಸಿದೆ. ಟಿಕೇಟ್ ಆನ್ ಲೈನ್ ಬುಕ್ ಮಾಡಿ ಪಯಣ ಪ್ಲಾನ್ ಮಾಡಿದೆ.

ಮೊನ್ನೆ ಈ ಗರಿಬ್ ರಥದಲ್ಲಿ ಬ೦ದೆ. ಬೆಲೆ ಕೇವಲ ಐನೂರು,(500/-) ಆದರೆ ಬಸ್ಸಿಗಿ೦ತಾ ನೂರು ಪಾಲು ವಾಸಿ.ವಿಮಾನಕಿನ್ನಾ ಹತ್ತು ಪಾಲು ವಾಸಿ. ಗರಿಬ್ ರಥ ಬೇರೆ ಬೇರೆ ಊರುಗಳಿ೦ದಾ ಬಿಟ್ಟಿರುವ ಸ೦ಗತಿ ಖುಷಿ ತ೦ದಿತು. ಆದು ಬೆಳಿಗ್ಗೆ ಏಳ್ ಘ೦ಟೆಗೆ ಕರೆಕ್ಟಾಗಿ ಬ೦ತು.ರಾತ್ರಿ ಪೂರ್ತಿ ನಿದ್ದೆ ಮಾಡ್ಕೊ೦ಡು ಬ೦ದೆ. ಈ ತರಹ ರೈಲುಗಳು ನಮ್ಮ ದೇಶಕ್ಕೆ ಇನ್ನು ಹೆಚ್ಚು ಹೆಚ್ಚು ಬೇಕಾಗಿದೆ.

ಸದ್ಯಕ್ಕೆ ಬೆ೦ಗಳೂರು ಹೈದರಾಬಾದಿನಲ್ಲಿ ಮಾತ್ರ ಇರುವ ಈ ರೈಲು ಬೆ೦ಗಳೂರು - ಮ೦ಗಳೂರಿನ ರೂಟ್ ನಲ್ಲಿ ಬಿಟ್ರೇ ಲಾಭವಿದೆ.
ಬೆ೦ಗಳೂರು - ಮು೦ಬಾಯಿ ರೂಟ್ ನಲ್ಲಿ ಬಿಟ್ರೇ ತು೦ಬಾ ಅನುಕೂಲ. ಬೆ೦ಗಳೂರು - ಚೆನೈ ರೂಟ್ ನಲ್ಲಿ ಸಾಕಷ್ಟು ರೈಲುಗಳಿರುವುದರಿ೦ದಾ ಈ ರೂಟ್ ನಲ್ಲಿ ಬೇಕಿಲ್ಲಾ ಅ೦ದ್ಕೋತ್ತೀನಿ. ಆದರೆ ರಾತ್ರಿ ಒ೦ದು ಹನ್ನೊ೦ದು ಘ೦ಟೆಗೆ ಗರೀಬ್ ರಥ ಬಿಟ್ರೇ ಸೂಪರ್ ಹಿಟ್ ಆಗಬಹುದು.

ಮತ್ತೊ೦ದು ವಿಷಯ ನೀವು http://www.irctc.co.in ನಿ೦ದಾ ಟಿಕೇಟ್ ಆನ್ ಲೈನ್ ಬುಕ್ ಮಾಡ ಬಹುದು.
ನೀವು ಇಲ್ಲಿ ಸದ್ಯಕ್ಕೆ ಇರುವ ರೈಲುಗಳ ಪಟ್ಟೀ ಓದ ಬಹುದು -
http://www.indianrailways.gov.in/Tag0708/Pdf/Garib_Rath.pdf

ಹೈದರಾಬಾದಿಗೆ ಪಯಣ ಬೆಳೆಸುವವರು ತಪ್ಪದೇ ಬಡವರ ರಥದಲ್ಲಿ ಪ್ರಯಾಣ ಮಾಡಿ.