ಗಾಂಧೀ ಎಲುಬೂ ಕರಗಿತೆ ?
ಕವನ
ಗಾಂಧೀ ಎಲುಬೂ ಕರಗಿತೆ ?
ಗಾಂಧೀ ಎಲುಬು ಕರಗಿತೆ ?
ಮತ್ತೆ ಕಾಣಲು ಸಿಗುವುದೇ ?
ದೇಶ ತತ್ತರಿಸುತ್ತ ಸೊರಗಿದೆ
ಬ್ರಷ್ಟರಾಳ್ವಿಕೆಯಾಗಿದೆ
ಕುಜನ ಸ್ವಜನರ ಲಾಭಕೋಸ್ಕರ
ಸುಜನರನು ದೂರಿರಿಸಿದೆ
ಎಲ್ಲಿ ಅಂದಿನ ಸತ್ಯವು
ಇಲ್ಲಿ ಇಂದಿನ ಮಿಥ್ಯೆಯು
ಗಾಂಧೀ ಎಲುಬೂ ಉಳಿಯಲಾರದು
ಇಂದಿನೀ ಕಲಿ ಯುಗದಲಿ
ಕಾರಗತ್ತಲೆಯಲ್ಲಿ ಮಿಂಚಿದ
ಹಾಗೆ ಕಾಣಿಸಿ ನಭದಲಿ
ಹೋದೆ ನೀನೂ ಉಳಿಯದಾದೆ
ನಮ್ಮನುಳಿಸಲು ಹೆಣಗಿದೆ
ಅಂತರಾತ್ಮವದೆಲ್ಲಿ ನೆಲಸಿದೆ ?
ಇಂದಿನೀ ಪರಿ ಕಾಣದೆ ?
ಗಾಂಧೀ ಎಲುಬೂ ಕರಗಿತೆ ?
ಮತ್ತೆ ಕಾಣಲು ಸಿಗುವುದೇ ?
- ಸದಾನಂದ (30/01 /2012 )