ಗಾಳಿ ಮತ್ತು ಧ್ವಜ - ಒಂದು ಒಳ್ಳೆಯ ಝೆನ್ ಕಥೆ

ಗಾಳಿ ಮತ್ತು ಧ್ವಜ - ಒಂದು ಒಳ್ಳೆಯ ಝೆನ್ ಕಥೆ

ಬರಹ

ಗಾಳಿ ಬಲವಾಗಿ ಬೀಸುತ್ತಿತ್ತು. ದ್ವಜ ಗಾಳಿಗೆ ಪಟಪಟಿಸುತ್ತಿತ್ತು. ಅಲ್ಲಿ ಇಬ್ಬರು ಭಿಕ್ಷುಗಳು ನಿಂತಿದ್ದರು . ಒಬ್ಬ ಹೇಳಿದ. " ಚಲಿಸುತ್ತಿರುವದು ಗಾಳಿಯಲ್ಲ, ದ್ವಜ." .
ಅದನ್ನು ವಿರೋಧಿಸಿ ಇನ್ನೊಬ್ಬ ಅಂದ - " ಅಲ್ಲ, ಗಾಳಿಯೇ ಚಲಿಸುತ್ತಿರುವದು, ಧ್ವಜ ಅಲ್ಲ."

ಅಷ್ಟರಲ್ಲಿ ಅಲ್ಲಿ ಹಾದು ಹೋಗುತ್ತಿದ್ದ ಮೂರನೆಯ ಭಿಕ್ಷು ತೀರ್ಮಾನ ಹೇಳಿದ - " ಚಲಿಸುತ್ತಿರುವದು ಎರಡೂ ಅಲ್ಲ , ನಿಮ್ಮ ಬುದ್ಧಿ".