ಗೀತಾಮೃತ - 12

ಗೀತಾಮೃತ - 12

*ಅಧ್ಯಾಯ ೪*

     *ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶ:/*

*ತಸ್ಯ  ಕರ್ತಾರಮಪಿ ಮಾಂ ವಿದ್ದ್ಯಕರ್ತಾರಮವ್ಯಯಮ್//೧೩//*

ಬ್ರಾಹ್ಮಣ,ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಈ ನಾಲ್ಕು ವರ್ಣಗಳ ಸಮೂಹವು ಗುಣ ಮತ್ತು ಕರ್ಮಗಳ  ವಿಭಾಗಪೂರ್ವಕವಾಗಿ ನನ್ನ ಮೂಲಕ   ರಚಿಸಲ್ಪಟ್ಟಿದೆ. ಈ ಪ್ರಕಾರವಾಗಿ ಆ ಸೃಷ್ಟಿರಚನಾದಿ ಕರ್ಮದ ಕರ್ತೃವಾದರೂ ಕೂಡ ,ಅವಿನಾಶೀ ಪರಮೇಶ್ವರನಾದ  ನನ್ನನ್ನು ನೀನು ವಾಸ್ತವವಾಗಿ ಕರ್ತೃ ಅಲ್ಲವೆಂದೇ ತಿಳಿ.

*ನ ಮಾಂ ಕರ್ಮಾಣಿ ಲಿಂಪತಿ ನ ಮೇ ಕರ್ಮಫಲೇ ಸ್ಪೃಹಾ/*

*ಇತಿ ಮಾಂ ಯೋಭಿಜಾನಾತಿ ಕರ್ಮಭಿರ್ನ ಸ ಬದ್ಧ್ಯತೇ//೧೪//*

  ಕರ್ಮಗಳ ಫಲದಲ್ಲಿ ನನಗೆ ಸ್ಪೃಹೆಯು ಇರುವುದಿಲ್ಲ.ಅದಕ್ಕಾಗಿ ನನಗೆ ಕರ್ಮಗಳು ಅಂಟಿಕೊಳ್ಳುವುದಿಲ್ಲ.ಈ ಪ್ರಕಾರವಾಗಿ ಯಾರು ನನ್ನನ್ನು  ತತ್ತ್ವದಿಂದ ತಿಳಿದುಕೊಳ್ಳುತ್ತಾನೋ ಅವನು ಕೂಡ ಕರ್ಮಗಳಿಂದ ಬಂಧಿತನಾಗುವುದಿಲ್ಲ.

***

*ಏವಂ ಜ್ಞಾತ್ವಾ ಕೃತಂ ಕರ್ಮ ಪೂರ್ವೈರಪಿ ಮುಮುಕ್ಷುಭಿ:/*

*ಕುರು ಕರ್ಮೈವ ತಸ್ಮಾತ್ವಂ ಪೂರ್ವೈ:  ಪೂರ್ವತರಂ ಕೃತಮ್//೧೫//*

ಪೂರ್ವಕಾಲದ ಮುಮುಕ್ಷುಗಳು ಕೂಡ ಈ ಪ್ರಕಾರವಾಗಿ ತಿಳಿದೇ ಕರ್ಮಗಳನ್ನು ಮಾಡಿದ್ದಾರೆ.ಆದ್ದರಿಂದ ನೀನೂ ಕೂಡ ಪೂರ್ವಜರ ಮೂಲಕ  ಸದಾಕಾಲ ಮಾಡಲ್ಪಡುತ್ತಾ ಬಂದಿರುವ ಕರ್ಮಗಳನ್ನೇ ಮಾಡು.

*ಕಿಂ ಕರ್ಮ ಕಿಮಕರ್ಮೇತಿ ಕವಯೋಪ್ಯತ್ರ ಮೋಹಿತಾ:/*

*ತತ್ತೇ ಕರ್ಮ ಪ್ರವಕ್ಷ್ಯಾಮಿ ಯಜ್ಞ್ಜಾತ್ವಾಮೋಕ್ಷ್ಯಸೇಶುಭಾತ್//೧೬//*

 ಕರ್ಮವು ಯಾವುದು ಮತ್ತು  ಅಕರ್ಮವು ಯಾವುದು? ಈ ಪ್ರಕಾರವಾಗಿ ಇದರ ನಿರ್ಣಯ ಮಾಡುವಲ್ಲಿ ಬುದ್ಧಿವಂತರಾದ ಪುರುಷರು ಸಹ ಮೋಹಿತರಾಗುತ್ತಾರೆ.ಆದ್ದರಿಂದ ಆ ಕರ್ಮತತ್ವವನ್ನು ನಾನು ನಿನಗೆ ಚೆನ್ನಾಗಿ ತಿಳಿಯ ಹೇಳುವೆನು.ಅದನ್ನು ತಿಳಿದುಕೊಂಡ ನೀನು ಅಶುಭದಿಂದ ಅರ್ಥಾತ್ ಕರ್ಮ ಬಂಧನದಿಂದ ಮುಕ್ತನಾಗಿಬಿಡುವೆ.

***

ಅಸ್ಥಿರಂ ಜೀವಿತಂ ಲೋಕೇ ಅಸ್ಥಿರೇ ಧನ ಯೌವನೇ/

ಅಸ್ಥಿರಾ ಪುತ್ರದಾರಾಶ್ಚ ಧರ್ಮ ಕೀರ್ತಿದ್ವಯಂ ಸ್ಥಿರಂ// 

ಈ ಪ್ರಪಂಚದಲ್ಲಿ ನಮ್ಮ ಜೀವನವೇ ಸ್ಥಿರವಿಲ್ಲದ್ದು.ಅಸ್ಥಿರವಾದ ನೆಲೆ ಬೆಲೆಯನ್ನು ಕಂಡು ಕೊಂಡವರು ನಾವುಗಳು.ಆದರೂ*ನಾನು,ನನ್ನದು*ಎಂದು ಮೌಢ್ಯದಿಂದ ಹೇಳಿಕೊಂಡು ಕಿತ್ತಾಡುತ್ತೇವೆ.ಹೋಗಲಿ ಈ ತಾರುಣ್ಯವಾದರೂ ಸ್ಥಿರವೇ?ಅಲ್ಲ ಅದೂ ಶಾಶ್ವತವಾದ್ದಲ್ಲ.ನಮ್ಮ ಜೊತೆಗೆ ,ನಮ್ಮನ್ನೇ ನಂಬಿ ಬಂದ ಹೆಂಡತಿ ಮಕ್ಕಳು,ಸಹ ಶಾಶ್ವತವಲ್ಲ.ಗಂಡನೂ ಶಾಶ್ವತನಲ್ಲ.ಯಾವುದೂ ಸ್ಥಿರವಲ್ಲ ಅಂದ ಮೇಲೆ ಬಡಿದಾಟ,ಹೊಡೆದಾಟ,ಅಹಂ ಎಲ್ಲಾ ಯಾಕೆ?ಅದನ್ನು ಬಿಟ್ಟರೆ *ನಮ್ಮ ಗುಣ ಕೀರ್ತಿ*ಗಳು ನಾವು ಹೋದ ಮೇಲೂ ಇರಬಹುದು.

ಈ ಜಗತ್ತಿನಲ್ಲಿ ಶಾಶ್ವತವಾದ್ದು *ಧರ್ಮ ಮತ್ತು ಕೀರ್ತಿ*ಮಾತ್ರ.

***

 *ಯಸ್ಯ ಸರ್ವೇ ಸಮಾರಂಭಾ: ಕಾಮಸಂಕಲ್ಪವರ್ಜಿತಾಂ/*

*ಜ್ಞಾನಾಗ್ನಿದಗ್ಧಕರ್ಮಣಂ ತಮಾಹು: ಪಂಡಿತಂ ಬುಧಾ://೧೯//*

  ಯಾರ ಸಂಪೂರ್ಣ ಶಾಸ್ತ್ರಸಮ್ಮತವಾದ ಕರ್ಮಗಳು ಕಾಮನೆ ಮತ್ತು ಸಂಕಲ್ಪವಿಲ್ಲದೆ ಇರುತ್ತವೆಯೋ ಹಾಗೂ ಯಾರ ಸಮಸ್ತಕರ್ಮಗಳು ಜ್ಞಾನರೂಪೀ ಅಗ್ನಿಯ ಮೂಲಕ ಭಸ್ಮವಾಗಿ ಹೋಗಿವೆಯೋ, ಆ ಮಹಾಪುರುಷನನ್ನು ಜ್ಞಾನಿಜನರೂ ಸಹ ಪಂಡಿತನೆಂದು ಹೇಳುತ್ತಾರೆ.

*ತ್ಯಕ್ತ್ವಾ ಕರ್ಮಫಲಾಸಂಗಂ ನಿತ್ಯತೃಪ್ತೋ ನಿರಾಶ್ರಯ:/*

*ಕರ್ಮಣ್ಯಭಿಪ್ರವೃತ್ತೋಪಿ ನೈವ ಕಿಂಚಿತ್ಕರೋತಿ ಸ://೨೦//*

     ಯಾವ ಪುರುಷನು ಸಮಸ್ತ ಕರ್ಮಗಳಲ್ಲಿ ಮತ್ತು ಅವುಗಳ ಫಲದಲ್ಲಿ ಆಸಕ್ತಿಯನ್ನು ಸರ್ವಥಾ ತ್ಯಾಗಮಾಡಿ ಜಗತ್ತಿನ ಆಶ್ರಯದಿಂದ ರಹಿತನಾಗಿದ್ದೇನೆಯೋ ಮತ್ತು ಪರಮಾತ್ಮನಲ್ಲಿ ನಿತ್ಯತೃಪ್ತನಾಗಿದ್ದಾನೆಯೋ ಅವನು ಕರ್ಮಗಳಲ್ಲಿ ಚೆನ್ನಾಗಿ ವರ್ತಿಸುತ್ತಿದ್ದರೂ ಕೂಡ ವಾಸ್ತವವಾಗಿ ಏನನ್ನೂ ಮಾಡುವುದಿಲ್ಲ.

***

(ಸಾರ ಸಂಗ್ರಹ) ವಿಜಯಾ ಶೆಟ್ಟಿ, ಸಾಲೆತ್ತೂರು