ಗೀತಾಮೃತ - 59

ಗೀತಾಮೃತ - 59

*ಅಧ್ಯಾಯ ೧೬*

        *//ಅಥತ ಷೋಡಶೋಧ್ಯಾಯ://*

*ದೈವಾಸಯರಸಂಪದ್ವಿಭಾಗಯೋಗವು*

      *ಶ್ರೀ ಭಗವಾನುವಾಚ*

*ಅಭಯಂ ಸತ್ತ್ವ ಅಂಶ ಶುದ್ಧಿರ್ಜ್ಞಾನಯೋಗವ್ಯವಸ್ಥಿತಿ:/*

*ದಾನಂ ದಮಶ್ಚ ಯಜ್ಞಶ್ಚ ಸ್ವಾಧ್ಯಾಯಸ್ತಪ ಅರ್ಜುನಮ್//೧//*

ಶ್ರೀ ಭಗವಂತನು ಹೇಳಿದನು _ 

      ಭಯದ ಸರ್ವಥಾ ಅಭಾವ ಅಂತ:ಕರಣದ ಪೂರ್ಣನಿರ್ಮಲತೆ, ತತ್ತ್ವಜ್ಞಾನಕ್ಕಾಗಿ ಧ್ಯಾನ ಯೋಗದಲ್ಲಿ ನಿರಂತರ ಧೃಢವಾದ ಸ್ಥಿತಿ ಮತ್ತು ಸಾತ್ವಿಕದಾನ ,ಇಂದ್ರಿಯಗಳ ದಮನ ,ಭಗವಂತನ ,ದೇವತೆಗಳ ಮತ್ತು ಗುರುಜನರ ಪೂಜೆ ಹಾಗೂ ಅಗ್ನಿಹೋತ್ರಾದಿ ಉತ್ತಮ ಕರ್ಮಗಳ ಆಚರಣೆ ,ವೇದ ಶಾಸ್ತ್ರಗಳ ಪಠನ ಪಾಠನ ,ಭಗವಂತನ ನಾಮ ಮತ್ತು ಗುಣಗಳ ಕೀರ್ತನೆ,ಸ್ವಧರ್ಮಪಾಲನೆಗಾಗಿ ಕಷ್ಟವನ್ನು ಸಹಿಸುವುದು ಮತ್ತು ಶರೀರ ಇಂದ್ರಿಯಗಳ ಸಹಿತವಾಗಿ ಅಂತ:ಕರಣದ ಸರಳತೆ.

*ಅಹಿಂಸಾ ಸತ್ಯಮಕ್ರೋಧಸ್ತ್ಯಾಗ:  ಶಾಂತಿರಪೈಶುನಮ್/*

*ದಯಾ ಭೂತೇಷ್ವಲೋಲುಪ್ತ್ವಂ ಮಾರ್ದವಂ ಹ್ರೀರಚಾಪಲಮ್//೨//*

ಮನಸ್ಸು ಮಾತು ಮತ್ತು ಶರೀರದಿಂದ ಯಾರಿಗೂ ಯಾವ ಪ್ರಕಾರವಾಗಿಯೂ ಕಷ್ಟಕೊಡದಿರುವುದು,ಯಥಾರ್ಥ ಮತ್ತು ಪ್ರಿಯವಾಗಿ ಮಾತಾಡುವುದು,ತನಗೆಅಪಕಾರ ಮಾಡಿದವರ ಮೇಲೆಯೂ ಕೋಪಿಸದಿರುವುದು,ಕರ್ಮ ಗಳಲ್ಲಿ ಕರ್ತೃತ್ವದ ಅಭಿಮಾನವನ್ನು ತ್ಯಜಿಸುವುದು,ಅಂತ:ಕರಣದ ಉಪರತಿ ಅರ್ಥಾತ್ ಚಿತ್ತಚಾಂಚಲ್ಯದ ಅಭಾವ ,ಯಾರನ್ನೂ  ನಿಂದಿಸದಿರುವುದು,ಎಲ್ಲ ಪ್ರಾಣಿಗಳಲ್ಲಿ ಕಾರಣರಹಿತವಾದ ದಯೆ,ಇಂದ್ರಿಯಗಳು ವಿಷಯಗಳೊಡನೆ ಸಂಯೋಗ ವಾದಾಗಲೂ ಅದರಲ್ಲಿ ಆಸಕ್ತರಾಗದಿರುವಿಕೆ,ಕೋಮಲತೆ,ಲೋಕ ಮತ್ತು ಶಾಸ್ರ್ತಕ್ಕೆ ವಿರುದ್ಧವಾದ ಆಚರಣೆಯಲ್ಲಿ ಲಜ್ಜೆ ಮತ್ತು ವ್ಯರ್ಥವಾದ ಚೇಷ್ಟಯ ಅಭಾವ _

***

  *ತೇಜ: ಕ್ಷಮಾ ಧೃತಿ: ಶೌಚಮದ್ರೋಹೋ ನಾತಿಮಾನಿತಾ/*

*ಭವಂತಿ ಸಂಪದಂ ದೈವೀಮಭಿಜಾತಸ್ಯ ಭಾರತ//೩//*

        ತೇಜಸ್ಸುಕ್ಷಮೆ,ಧೈರ್ಯ,ಬಾಹ್ಯಶುದ್ಧಿ ಹಾಗೂಯಾರಲ್ಲಿಯೂ ಶತ್ರುಭಾವವಿಲ್ಲದಿರುವುದು ಮತ್ತು ತನ್ನಲ್ಲಿ ಪೂಜ್ಯತೆಯ ಅಭಿಮಾನದ ಅಭಾವವು _ ಹೇ ಅರ್ಜುನಾ! ಇವೆಲ್ಲಾ ದೈವೀ ಸಂಪತ್ತನ್ನು ಪಡೆದು ಜನಿಸಿರುವ ಪುರುಷರ ಲಕ್ಷಣಗಳಾಗಿವೆ.

      *ದಂಭೋ ದರ್ಪೋಭಿಮಾನಶ್ಚ ಕ್ರೋಧ: ಪಾರುಪ್ಯಮೇವ ಚ /*

*ಅಜ್ಞಾನಂ ಚಾಭಿಜಾತಸ್ಯ ಪಾರ್ಥ ಸಂಪದಮಾಸುರೀಮ್//೪//*

ಹೇ ಅರ್ಜುನಾ! ದಂಭ,ಅಹಂಕಾರ,ಅಭಿಮಾನ,ಕ್ರೋಧ,ಕಠೋರತೆ ಮತ್ತು ಅಜ್ಞಾನ ಇವೆಲ್ಲಾ ಅಸುರೀ ಸಂಪತ್ತನ್ನು ಪಡೆದು ಹುಟ್ಟಿರುವ ಪುರುಷರ ಲಕ್ಷಣಗಳಾಗಿವೆ.

***

  *ತೇಜ: ಕ್ಷಮಾ ಧೃತಿ: ಶೌಚಮದ್ರೋಹೋ ನಾತಿಮಾನಿತಾ/*

*ಭವಂತಿ ಸಂಪದಂ ದೈವೀಮಭಿಜಾತಸ್ಯ ಭಾರತ//೩//*

        ತೇಜಸ್ಸುಕ್ಷಮೆ,ಧೈರ್ಯ,ಬಾಹ್ಯಶುದ್ಧಿ ಹಾಗೂಯಾರಲ್ಲಿಯೂ ಶತ್ರುಭಾವವಿಲ್ಲದಿರುವುದು ಮತ್ತು ತನ್ನಲ್ಲಿ ಪೂಜ್ಯತೆಯ ಅಭಿಮಾನದ ಅಭಾವವು _ ಹೇ ಅರ್ಜುನಾ! ಇವೆಲ್ಲಾ ದೈವೀ ಸಂಪತ್ತನ್ನು ಪಡೆದು ಜನಿಸಿರುವ ಪುರುಷರ ಲಕ್ಷಣಗಳಾಗಿವೆ.

      *ದಂಭೋ ದರ್ಪೋಭಿಮಾನಶ್ಚ ಕ್ರೋಧ: ಪಾರುಪ್ಯಮೇವ ಚ /*

*ಅಜ್ಞಾನಂ ಚಾಭಿಜಾತಸ್ಯ ಪಾರ್ಥ ಸಂಪದಮಾಸುರೀಮ್//೪//*

ಹೇ ಅರ್ಜುನಾ! ದಂಭ,ಅಹಂಕಾರ,ಅಭಿಮಾನ,ಕ್ರೋಧ,ಕಠೋರತೆ ಮತ್ತು ಅಜ್ಞಾನ ಇವೆಲ್ಲಾ ಅಸುರೀ ಸಂಪತ್ತನ್ನು ಪಡೆದು ಹುಟ್ಟಿರುವ ಪುರುಷರ ಲಕ್ಷಣಗಳಾಗಿವೆ.

***

 *ಪ್ರವೃತ್ತಿಂ ಚ ನಿವೃತ್ತಿಂ ಚ ಜನಾ ನ  ವಿದುರಾಸುರಾ:/*

*ನ ಶೌಚಂ ನಾಪಿ ಚಾಚಾರೋ ನ ಸತ್ಯಂ ತೇಷು ವಿದ್ಯತೇ//೭//*

ಅಸುರೀ ಸ್ವಭಾವದ  ಮನುಷ್ಯರು ಪ್ರವೃತ್ತಿ ಮತ್ತು ನಿವೃತ್ತಿ ಇವೆರಡನ್ನೂ ಕೂಡ ಅರಿಯರು.ಅದಕ್ಕಾಗಿ ಅವರಲ್ಲಿ ಬಾಹ್ಯ ಮತ್ತು ಆಂತರಿಕ ಶುದ್ಧಿಯಾಗಲೀ,ಶ್ರೇಷ್ಠ ವಾದ ಆಚರಣೆಯಾಗಲೀ ಮತ್ತು ಸತ್ಯಭಾಷಣವಾಗಲೀ ಇರುವುದಿಲ್ಲ.

*ಅಸತ್ಯಮಪ್ರತಿಷ್ಠಂ ತೇ ಜಗದಾಹುರನೀಶ್ವರಮ್/*

*ಅಪರಸ್ಪರಸಂಭೂತಂ ಕಿಮನ್ಯತ್ಕಾಮಹೈತುಕಮ್//೮//*

ಆ ಅಸುರೀ ಪ್ರಕೃತಿಯುಳ್ಳ ಮನುಷ್ಯರು _ ಈ ಜಗತ್ತು ಆಶ್ರಯರಹಿತವಾದುದು,ಸರ್ವಥಾ ಅಸತ್ಯ ಮತ್ತು ದೇವರಿಲ್ಲದೇ ತನ್ನಿಂದ ತಾನೇ ಕೇವಲ ಸ್ತ್ರೀ ಪುರುಷರ ಸಂಯೋಗದಿಂದ ಸೃಷ್ಠಿ ಯಾಗಿದೆ.ಆದುದರಿಂದ  ಕಾಮವೇ ಇದರ ಕಾರಣವಾಗಿದೆ.ಇದಲ್ಲದೆ ಬೇರೇನಿದೆ? ಎಂದು ಹೇಳುತ್ತಾರೆ.

***

*ಏತಾಂ ದೃಷ್ಟಿ ಮವಷ್ಟಭ್ಯ ನಷ್ಟಾತ್ಮಾನೋಲ್ಪಬುದ್ಧಯ:/*

*ಪ್ರಭವಂತ್ಯುಗ್ರ ಕರ್ಮಾಣ: ಕ್ಷಯಾಯ ಜಗತೋಹಿತಾ://೯//*

     ಈ ಮಿಥ್ಯಾಜ್ಞಾನವನ್ನವಲಂಬಿಸಿ ಯಾರ ಸ್ವಭಾವವು ನಷ್ಟವಾಗಿ ಹೋಗಿದೆಯೋ ಹಾಗೂ ಯಾರ ಬುದ್ಧಿಯು ಮಂದವಾಗಿದೆಯೋ ಅವರು ಎಲ್ಲರಿಗೂ ಅಪಕಾರಮಾಡುವ ಕ್ರೂರಕರ್ಮಿಗಳಾದ  ಮನುಷ್ಯರು; ಕೇವಲ ಜಗತ್ತಿನ ನಾಶಕ್ಕಾಗಿಯೇ ಸಮರ್ಥರಾಗುತ್ತಾರೆ.

*ಕಾಮಮಾಶ್ರತ್ಯ  ದುಷ್ಪೂರಂ ದಂಭಮಾನಮದಾನ್ವಿತಾ:/*

*ಮೋಹಾದ್ಗೃಹೀತ್ವಾಸದ್ರ್ಗಾಹಾನ್ಪ್ರವರ್ತಂತೇ ಶುಚಿವ್ರತಾ://೧೦//*

ದಂಭ,ಮಾನ ಮತ್ತು ಮದದಿಂದ ಕೂಡಿದವರಾದ ಮನುಷ್ಯರು ಯಾವ ಪ್ರಕಾರದಿಂದಲೂ ಪೂರ್ಣವಾಗದ  ಕಾಮನೆಗಳ ಆಶ್ರಯಪಡೆದು ,ಅಜ್ಞಾನದಿಂದ ಮಿಥ್ಯಾ ಸಿದ್ಧಾಂತ ಗಳನ್ನು ಗ್ರಹಿಸಿಕೊಂಡು ಮತ್ತು ಭ್ರಷ್ಟ ಆಚರಣೆಯನ್ನು ತಮ್ಮದಾಗಿಸಿಕೊಂಡು ಜಗತ್ತಿನಲ್ಲಿ ವ್ಯವಹರಿಸುತ್ತಾರೆ.

***

-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)

-ಚಿತ್ರ ಕೃಪೆ: ಇಂಟರ್ನೆಟ್ ತಾಣ