ಗೀತಾಮೃತ - 66

ಗೀತಾಮೃತ - 66

*ಅಧ್ಯಾಯ ೧೮*

     *ಯಸ್ಯ ನಾಹಂಕೃತೋ ಭಾವೋ ಬುದ್ಧರ್ಯಸ್ಯ ನ ಲಿಪ್ಯತೇ/*

*ಹತ್ವಾಪಿ ಸ ಇಮಾಂಲ್ಲೋಕಾನ್ನ ಹಂತಿ ನ ನಿಬಧ್ಯತೇ//೧೭//*

        ಯಾವ ಪುರುಷನ ಅಂತ:ಕರಣದಲ್ಲಿ 'ನಾನು ಕರ್ತಾ ಆಗಿದ್ದೇನೆ' ಎನ್ನುವ ಭಾವ ಇರುವುದಿಲ್ಲವೋ,ಹಾಗೂ ಯಾರ ಬುದ್ಧಿಯು ಸಾಂಸಾರಿಕ ಪದಾರ್ಥಗಳಲ್ಲಿ ಮತ್ತು ಕರ್ಮಗಳಲ್ಲಿ ಅಂಟಿಕೊಳ್ಳುವುದಿಲ್ಲವೋ ಆ ಪುರುಷರು ಈ ಎಲ್ಲ ಜನರನ್ನು ಕೊಂದರೂ ಸಹ,ವಾಸ್ತವವಾಗಿ ಕೊಲ್ಲುವುದೂ ಇಲ್ಲ ಮತ್ತು ಪಾಪದಿಂದ ಬಂಧಿತನಾಗುವುದೂ ಇಲ್ಲ.

*ಜ್ಞಾನಂ ಜ್ಞೇಯಂ ಪರಿಜ್ಞಾತಾ ತ್ರಿವಿಧಾ ಕರ್ಮಚೋದನಾ/*

*ಕರಣಂ ಕರ್ಮ ಕರ್ತೇಂತಿ ತ್ರಿವಿಧ: ಕರ್ಮಸಂಗ್ರಹ://೧೮//*

      ಜ್ಞಾತಾ,ಜ್ಞಾನ ಮತ್ತು ಜ್ಞೇಯ ಇವು ಮೂರು ಪ್ರಕಾರದ ಕರ್ಮಪ್ರೇರಣೆಯಾಗಿದೆ ಮತ್ತು ಕರ್ತಾ ,ಕರಣ ಹಾಗೂ ಕ್ರಿಯೆ ಇವು ಮೂರು ಪ್ರಕಾರದ ಕರ್ಮಸಂಗ್ರಹವಾಗಿದೆ.

***

*ಜ್ಞಾನಂ ಕರ್ಮ ಚ ಕರ್ತಾ ಚ ತ್ರಿಧೈವ ಗುಣಭೇದತ:/*

*ಪ್ರೋಚ್ಯತೇ ಗುಣಸಂಖ್ಯಾನೇ ಯಥಾವಚ್ಛೃಣು ತಾನ್ಯಪಿ//೧೯//*

      ‌ಗುಣಗಳ ಸಂಖ್ಯೆಯನ್ನು ತಿಳಿಸುವಂತಹ ಶಾಸ್ತ್ರ ದಲ್ಲಿ,ಜ್ಞಾನ,ಕರ್ಮ ಮತ್ತು ಕರ್ತಾ ಗುಣಗಳ ಭೇದದಿಂದ ಮೂರು ಮೂರು ಪ್ರಕಾರದಿಂದಲೇ ಹೇಳಲ್ಪಟ್ಟಿವೆ, ಅದನ್ನೂ ಸಹ ನೀನೂ ನನ್ನಿಂದ ಚೆನ್ನಾಗಿ ಕೇಳು.

*ಸರ್ವಭೂತೇಷು ಯೇನೈಕಂ ಭಾವ ಮವ್ಯಯಮೀಕ್ಷತೇ/*

*ಅವಿಭಕ್ತಂ ವಿಭಕ್ತೇಷು ತಜ್ಞ್ಜಾನಂ ವಿದ್ಧಿ ಸಾತ್ವಿಕಮ್//೨೦//*

  ಯಾವ ಜ್ಞಾನದಿಂದ ಮನುಷ್ಯನು ಬೇರೆಬೇರೆಯಾಗಿ ಎಲ್ಲಾ ಪ್ರಾಣಿಗಳಲ್ಲಿ ಒಂದೇ ಅವಿನಾಶಿಯಾದ ಪರಮಾತ್ಮ ಭಾವವನ್ನು ವಿಭಾಗರಹಿತವಾಗಿ ಸಮಭಾವದಿಂದ ಸ್ಥಿತನಾಗಿರುವಂತೆ ನೋಡುತ್ತಾನೋ ಆ ಜ್ಞಾನವನ್ನು ನೀನು ಸಾತ್ವಿಕವೆಂದು ತಿಳಿ.

***

 *ಪೃಥಕ್ತ್ವೇನ ತು ಯಜ್ಞ್ಜಾನಂ ನಾನಾಭಾವಾನ್ಪೃಥಗ್ವಿಧಾನ್/*

*ವೇತ್ತಿ ಸರ್ವೇಷು ಭೂತೇಷು ತಜ್ಞ್ಜಾನಂ ವಿದ್ಧಿರಾಜಸಮ್//೨೧//*

ಆದರೆ ಯಾವ ಜ್ಞಾನ ಅರ್ಥಾತ್ ಯಾವ ಜ್ಞಾನದ ಮೂಲಕ ಮನುಷ್ಯನು ಸಂಪೂರ್ಣ ಭೂತಗಳಲ್ಲಿ ಭಿನ್ನ _ ಭಿನ್ನ ಪ್ರಕಾರದ, ನಾನಾ ಭಾವಗಳನ್ನು ಬೇರೆಬೇರೆಯಾಗಿ ತಿಳಿಯುತ್ತಾನೋ ಆ ಜ್ಞಾನವನ್ನು ನೀನು ರಾಜಸವೆಂದು ತಿಳಿದುಕೋ

*ಯತ್ತು ಕೃತ್ಸ್ನವದೇಕಸ್ಮಿನ್ಕಾರ್ಯೇ ಸಕ್ತಮಹೈತುಕಮ್/*

*ಆತತ್ಕ್ಕಾರ್ಥವದಲ್ಪಂ ಚ ತತ್ತಾಮಸಮುದಾಹೃತಮ್//೨೨//* ಆದರೆ ಯಾವ ಜ್ಞಾನವು ಒಂದು ಕಾರ್ಯರೂಪವಾದ ಶರೀರದಲ್ಲಿಯೇ ಸಂಪೂರ್ಣದಂತೆ ಆಸಕ್ತವಾಗಿದೆಯೋ ಹಾಗೂ ಯುಕ್ತಿಯಿಲ್ಲದ,ತಾತ್ವ್ತಿಕ ಅರ್ಥರಹಿತ ಮತ್ತು ತುಚ್ಛರಾಗಿದೆಯೋ _ ಅದನ್ನು ತಾಮಸವೆಂದು ಹೇಳಲಾಗಿದೆ.

***

*ನಿಯತಂ ಸಂಗರಹಿತಮರಾಗದ್ವೇಷತ: ಕೃತಮ್/*

*ಅಫಲಪ್ರೇಪ್ಸುನಾ ಕರ್ಮ ಯತ್ತತ್ಸಾತ್ತ್ವಿಕಮುಚ್ಯತೇ//೨೩//*

ಯಾವ ಕರ್ಮವು ಶಾಸ್ತ್ರವಿಧಿಯಿಂದ ನಿಯಮಿಸಲ್ಪಟ್ಟಿದೆಯೋ , ಮತ್ತು ಕರ್ತೃತ್ವದ ಅಭಿಮಾನದಿಂದ ರಹಿತವಾಗಿದೆಯೋ ಹಾಗೂ ಫಲವನ್ನು ಬಯಸದೆ ಇರುವ ಪುರುಷರ ಮೂಲಕ ರಾಗ ದ್ವೇಷ ರಹಿತವಾಗಿ ಮಾಡಲಾಗಿದೆಯೋ ಅದು ಸಾತ್ವಿಕ ವೆಂದು ಹೇಳಲಾಗುತ್ತದೆ.

*ಯತ್ತು ಕಾಮೇಪ್ಸುನಾ ಕರ್ಮ ಸಾಹಂಕಾರೇಣ ವಾ ಪುನ: /*

*ಕ್ರಿಯತೇ ಬಹುಲಾಯಸಂ ತತ್ತಾಮಸಮುದಾಹೃತಮ್//೨೪//*  ಆದರೆ ಯಾವ ಕರ್ಮವು ಬಹಳ ಪರಿಶ್ರಮದಿಂದ ಕೂಡಿರುತ್ತದೆಯೋ ಹಾಗೂ ಭೋಗಗಳನ್ನು ಬಯಸುವ ಪುರುಷನ ಮೂಲಕ  ಅಥವಾ ಅಹಂಕಾರದಿಂದ ಕೂಡಿದ ಪುರುಷನ ಮೂಲಕ ಮಾಡಲಾಗುತ್ತದೆಯೋ ಆ ಕರ್ಮವು ರಾಜಸವೆಂದು ಹೇಳಲಾಗಿದೆ.

***

-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ