ಗೀತಾಮೃತ - 69
*ಅಧ್ಯಾಯ ೧೮*
*ಸ್ವೇ ಸ್ವೇ ಕರ್ಮಣ್ಯಭಿರತ: ಸಂಸಿದ್ಧಿಂ ಲಭತೇ ನರ:/*
*ಸ್ವಕರ್ಮನಿರತ: ಸಿದ್ಧಿಂ ಯಥಾ ವಿಂದತಿ ತಚ್ಛೃಣು//೪೫//*
ತಮ್ಮ ತಮ್ಮ ಸ್ವಾಭಾವಿಕವಾದ ಕರ್ಮಗಳಲ್ಲಿ ತತ್ಪರತೆಯಿಂದ ತೊಡಗಿರುವ ಮನುಷ್ಯನು ಭಗವತ್ಪ್ರಾಪ್ತಿರೂಪೀ ಪರಮ ಸಿದ್ಧಿಯನ್ನು ಪಡೆಯುತ್ತಾನಿ.ತನ್ನ ಸ್ವಾಭಾವಿಕ ಕರ್ಮದಲ್ಲಿ ತೊಡಗಿರುವ ಮನುಷ್ಯನು ಯಾವ ಪ್ರಕಾರದಿಂದ ಕರ್ಮಗೈದು ಪರಮಸಿದ್ಧಿಯನ್ನು ಪಡೆಯುತ್ತಾನೆ,ಆ ವಿಧಿ ಯನ್ನು ನೀನು ಕೇಳು.
*ಯತ: ಪ್ರವೃತ್ತಿರ್ಭೂತಾನಾಂ ಯೇನ ಸರ್ವಮಿದಂ ತತಮ್/*
*ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವ://೪೬//*
ಯಾವ ಪರಮೇಶ್ವರನಿಂದ ಸಂಪೂರ್ಣ ಪ್ರಾಣಿಗಳ ಯತ್ಪತ್ತಿಯಾಗಿದೆಯೋ ಮತ್ತು ಯಾರಿಂದ ಈ ಸಮಸ್ತ ಜಗತ್ತು ವ್ಯಾಪ್ತವಾಗಿದೆಯೋ,ಆ ಪರಮೇಶ್ವರನನ್ನು ತನ್ನ ಸ್ವಾಭಾವಿಕ ಕರ್ಮಗಳ ಮೂಲಕ ಪೂಜಿಸಿ ಮನುಷ್ಯನು ಪರಮ ಸಿದ್ಧಿಯನ್ನು ಪಡೆಯುತ್ತಾನೆ.
***
*ಶ್ರೇಯಾನ್ಸ್ವಧರ್ಮೋ ವಿಗುಣ: ಪರಧರ್ಮಾತ್ಸ್ವನುಷ್ಠಿತಾತ್/*
*ಸ್ವಭಾವನಿಯತಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಮ್//೪೭//* ಒಳ್ಳೆಯ ರೀತಿಯಲ್ಲಿ ಆಚರಿಸಲಾದ ಬೇರೆಯವರ ಧರ್ಮಕ್ಕಿಂತ ಗುಣರಹಿತವಾದರೂ ಕೂಡ ತನ್ನ ಧರ್ಮವು ಶ್ರೇಷ್ಠ ವಾಗಿದೆ.ಏಕೆಂದರೆ ಸ್ವಭಾವದಿಂದ ನಿಯಮಿಸಲ್ಪಟ್ಟಿರುವ ,ಸ್ವಧರ್ಮರೂಪೀ ಕರ್ಮವನ್ನು ಮಾಡುತ್ತಾ ಇರುವ ಮನುಷ್ಯನು ಪಾಪವನ್ನು ಪಡೆಯುವುದಿಲ್ಲ.
*ಸಹಜಂ ಕರ್ಮ ಕೌಂತೇಯ ಸದೋಷಮಪಿ ನ ತ್ಯಜೇತ್/*
*ಸರ್ವಾರಂಭಾ ಹಿ ದೋಷೇಣ ಧೂಮೇನಾಗ್ನಿರಿವಾವೃತಾ://೪೮//* ಆದ್ದರಿಂದ, ಹೇ ಕುಂತೀಪುತ್ರನೇ! ದೋಷಯುಕ್ತವಾದರೂ ಕೂಡ ಸಹಜವಾದ ಕರ್ಮವನ್ನು ತ್ಯಜಿಸಬಾರದು ; ಏಕೆಂದರೆ ಅಗ್ನಿಯು ಹೊಗೆಯಿಂದ ಯುಕ್ತವಾಗಿರುವಂತೆ ಎಲ್ಲ ಕರ್ಮಗಳೂ ಒಂದಲ್ಲ ಒಂದು ದೋಷದಿಂದ ಕೂಡಿರುತ್ತವೆ.
***
*ಆಸಕ್ತಬುದ್ಧಿ: ಸರ್ವತ್ರ ಜಿತಾತ್ಮಾ ವಿಗತಸ್ಪೃಹ/*
*ನೈಷ್ಕರ್ಮ್ಯಸಿದ್ಧಿಂ ಪರಮಾಂ ಸಂನ್ಯಾಸೇನಾಧಿಗಚ್ಛತಿ//೪೯//*
ಸರ್ವತ್ರ ಆಸಕ್ತಿರಹಿತವಾದ ಬುದ್ಧಿಯುಳ್ಳವನು,ಸ್ಪೃಹಾರಹಿತನೂ ಮತ್ತು ಗೆಲ್ಲಲ್ಪಟ್ಟ ಅಂತ:ಕರಣವುಳ್ಳ ಪುರುಷನು ಸಾಂಖ್ಯಯೋಗದ ಮೂಲಕ ಆ ಪರಮ ನೈಷ್ಕರ್ಮ್ಯಸಿದ್ಧಿಯನ್ನು ಪಡೆಯುತ್ತಾನೆ.
*ಸಿದ್ಧಿಂ ಪ್ರಾಪ್ತೋ ಯಥಾ ಬ್ರಹ್ಮತಥಾಪ್ನೋತಿ ನಿಬೋಧ ಮೇ/*
*ಸಮಾಸೇನೈವ ಕೌಂತೇಯ ನಿಷ್ಠಾ ಜ್ಞಾನಸ್ಯ ಯಾ ಪರಾ//೫೦//*
ಯಾವ ಜ್ಞಾನಯೋಗದ ಶ್ರೇಷ್ಠ ನಿಷ್ಠೆ ಯಾಗಿದೆಯೋ ಆ ನೈಷ್ಕರ್ಮ್ಯಸಿದ್ಧಿಯನ್ನು ಯಾವ ಪ್ರಕಾರವಾಗಿ ಪಡೆದುಕೊಂಡ ಮನುಷ್ಯನು ಬ್ರಹ್ಮವನ್ನೂ ಪಡೆಯುತ್ತಾನೋ ಆ ಪ್ರಕಾರವನ್ನು ಹೇ ಕುಂತೀಪುತ್ರನೇ ! ನೀನು ಸಂಕ್ಷೇಪವಾಗಿಯೇ ನನ್ನಿಂದ ತಿಳಿದು ಕೋ.
***
*ಬುದ್ದ್ಯಾ ವಿಶುದ್ಧಯಾ ಯುಕ್ತೋ ಧೃತ್ಯಾತ್ಮಾನಂ ನಿಯಮ್ಯ ಚ/*
*ಶಬ್ದಾದೀನ್ವಿಷಯಾಂಸ್ತ್ಯಕ್ತ್ವಾರಾಗದ್ವೇಷೌ ವ್ಯುದಸ್ಯ ಚ//೫೧//*
*ವಿವಿಕ್ತಸೇವೀ ಲಘ್ವಾಶೀ ಯತವಾಕ್ಕಾಯಮಾನಸ:/*
*ಧ್ಯಾನಯೋಗಪರೋ ನಿತ್ಯಂ ವೈರಾಗ್ಯಂ ಸಮುಪಾಶ್ರಿತ://೫೨//*
ವಿಶುದ್ಧವಾದ ಬುದ್ಧಿಯಿಂದ ಕೂಡಿದವನಾಗಿ ಹಾಗೂ ಹಗುರವಾದ,ಸಾತ್ವಿಕ ಮತ್ತು ನಿಯಮಿತ ಭೋಜನವನ್ನು ಮಾಡುವವನೂ,ಶಬ್ಧವೇ ಮೊದಲಾದ ವಿಷಯಗಳನ್ನು ತ್ಯಾಗಗೈದು ಏಕಾಂತ ಮತ್ತು ಶುದ್ಧವಾದ ದೇಶದಲ್ಲಿ ವಾಸ ಮಾಡುವವನೂ,ಸಾತ್ವಿಕ ಧಾರಣಶಕ್ತಿಯ ಮೂಲಕ ಅಂತ:ಕರಣ ಮತ್ತು ಇಂದ್ರಿಯಗಳನ್ನು ಸಂಯಮದಲ್ಲಿರಿಸಿಕೊಂಡು,ಮನಸ್ಸು ವಾಣಿ ಮತ್ತು ಶರೀರವನ್ನು ವಶದಲ್ಲಿರಿಸಿಕೊಳ್ಳುವವನೂ, ರಾಗ ದ್ವೇಷಗಳನ್ನು ಸರ್ವಥಾ ನಾಶಗೊಳಿಸಿ, ಚೆನ್ನಾದ ದೃಢವಾದ ವೈರಾಗ್ಯ ವನ್ನು ಆಶ್ರಯಿಸುವವನೂ ಸ್ಥಿತನಾಗಿರುತ್ತಾನೆ.
***
-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ