ಗೀತಾಮೃತ - 72
*ಅಧ್ಯಾಯ ೧೮*
*ನ ಚ ತಸ್ಮಾನ್ಮನುಷ್ಯೇಷು ಕಶ್ಚಿನ್ಮೇ ಪ್ರಿಯಕೃತ್ತಮ:/*
*ಭವಿತಾ ನ ಚ ಮೇ ತಸ್ಮಾದನ್ಯ: ಪ್ರಿಯತರೋ ಭುವಿ//೬೯//*
ಅವನಿಗಿಂತ ಹೆಚ್ಚಾಗಿ ನನ್ನ ಪ್ರಿಯಕಾರ್ಯ ಮಾಡುವವನು ಮನುಷ್ಯರಲ್ಲಿ ಯಾರೂ ಇಲ್ಲ ಹಾಗೂ ಭೂಮಂಡಲದಲ್ಲಿ ಅವನಿಗಿಂತ ಮಿಗಿಲಾಗಿ ಪ್ರಿಯನಾದವನು ನನಗೆ ಬೇರೆ ಯಾರೂ ಭವಿಷ್ಯದಲ್ಲಿ ಆಗಲಾರರು.
*ಅಧ್ಯೇಷ್ಯತೇ ಚ ಯ ಇಮಂ ಧರ್ಮ್ಯಂ ಸಂವಾದಮಾವಯೋ:/* *ಜ್ಞಾನಯಜ್ಞೇನ ತೇನಾಹಮಿಷ್ಟ: ಸ್ಯಾಮಿತಿ ಮೇ ಮತ://೭೦//*
ಯಾವ ಪುರುಷನು ಈ ಧರ್ಮಮಯವಾದ ನಮ್ಮಿಬ್ಬರ ಸಂವಾದರೂಪವಾದ ಗೀತಾಶಾಸ್ತ್ರವನ್ನು ಓದುವನೋ ಅವನ ಮೂಲಕವೂ ಸಹ ನಾನು ಜ್ಞಾನಯಜ್ಞದಿಂದ ಪೂಜಿತನಾಗುವೆನು ಎಂಬುದು ನನ್ನ ಅಭಿಪ್ರಾಯವಾಗಿದೆ.
***
*ಅರ್ಜುನ ಉವಾಚ*
*ನಷ್ಟೋ ಮೋಹ: ಸ್ಮೃತಿರ್ಲಬ್ಧಾ ತ್ವತ್ಪ್ರಸಾದಾನ್ಮಯಾಚ್ಯುತ/*
*ಸ್ಥಿತೋಸ್ಮಿ ಗತಸಂದೇಹ: ಕರಿಷ್ಯೇ ವಚನಂ ತವ//೭೩//*
ಅರ್ಜುನನು ಹೇಳಿದನು _ ಹೇ ಅಚ್ಯುತಾ! ನಿನ್ನ ಕೃಪೆಯಿಂದ ನನ್ನ ಮೋಹವು ನಾಶವಾಗಿ ಹೋಯಿತು ಮತ್ತು ನಾನು ಸ್ಮೃತಿಯನ್ನು ಪಡೆದುಕೊಂಡಿದ್ದೇನೆ.ಈಗ ನಾನು ಸಂಶಯರಹಿತನಾಗಿ ಸ್ಥಿತನಾಗಿದ್ದೇನೆ.ಆದ್ದರಿಂದ ನಿನ್ನ ಆಜ್ಞೆಯನ್ನು ಪಾಲನೆ ಮಾಡುವೆನು.
*ಸಂಜಯ ಉವಾಚ*
*ಇತ್ಯಹಂ ವಾಸುದೇವಸ್ಯ ಪಾರ್ಥಸ್ಯ ಚ ಮಹಾತ್ಮನ:/*
*ಸಂವಾದಮಿಮಮಶ್ರೌಷಮದ್ಭುತಂ ರೋಮಹರ್ಷಣಮ್//೭೪//*
ಸಂಜಯನು ಹೇಳಿದನು _ ಹೇ ರಾಜಾ! ಈ ಪ್ರಕಾರವಾಗಿ ನಾನು ಶ್ರೀ ವಾಸುದೇವನ ಮತ್ತು ಮಹಾತ್ಮನಾದ ಅರ್ಜುನನ ಈ ಅದ್ಭುತ ರಹಸ್ಯಯುಕ್ತವಾದ ರೋಮಾಂಚಕ ವಾದ ಸಂವಾದವನ್ನು ಕೇಳಿದೆನು.
***
*ವ್ಯಾಸಪ್ರಸಾದಾಚ್ಛ್ರುತವಾನೇತದ್ಗುಹ್ಯಮಹಂ ಪರಮ್/*
*ಯೋಗಂ ಯೋಗೇಶ್ವರಾತ್ಕೃಷ್ಣಾತ್ಸಾಕ್ಷಾತ್ಕಥಯತ: ಸ್ವಯಮ್//೭೫//*
ಶ್ರೀ ವ್ಯಾಸರ ಕೃಪೆಯಿಂದ ದಿವ್ಯದೃಷ್ಠಿಯನ್ನು ಪಡೆದುಕೊಂಡು ನಾನು ಈ ಪರಮ ಗೋಪನೀಯವಾದ ಯೋಗವನ್ನು ಸ್ವಯಂ ಯೋಗೇಶ್ವರ ಭಗವಾನ್ ಶ್ರೀ ಕೃಷ್ಣನಿಂದ ಅರ್ಜುನನಿಗೆ ಹೇಳುತ್ತಿರುವಂತೆ ಪ್ರತ್ಯಕ್ಷವಾಗಿ ಕೇಳಿದ್ದೇನೆ.
*ರಾಜನ್ಸಂಸ್ಮೃತ್ಯ ಸಂಸ್ಮೃತ್ಯ ಸಂವಾದಮಿಮದ್ಭುತಮ್//*
*ಕೇಶವಾರ್ಜುನಯೋ: ಪುಣ್ಯಂ ಹೃಷ್ಯಾಮಿ ಚ ಮುಹರ್ಮುಹು://೭೬//*
ಹೇ ರಾಜಾ! ಭಗವಾನ್ ಶ್ರೀ ಕೃಷ್ಣ ಮತ್ತು ಅರ್ಜುನರ ಈ ರಹಸ್ಯಯುಕ್ತವಾದ,ಕಲ್ಯಾಣಕಾರಕವಾದ ಮತ್ತು ಅಧ್ಭುತವಾದ ಸಂವಾದವನ್ನು ಪುನ: ಪುನ: ಸ್ಮರಿಸಿಕೊಂಡು ನಾನು ಪದೇ ಪದೇ ಹರ್ಷಿತನಾಗುತ್ತೇನೆ.
***
*ತಚ್ಚ ಸಂಸ್ಕೃತ್ಯ ಸಂಸ್ಕೃತ್ಯ ರೂಪಮತ್ಯದ್ಭುತಂ ಹರೇ:/*
*ವಿಸ್ಮಯೋ ಮೇ ಮಹಾನ್ ರಾಜನ್ ಹೃಷ್ಯಾಮಿ ಚ ಪುನ: ಪುನ://೭೭//*
ಹೇ ರಾಜಾ! ಶ್ರೀ ಹರಿಯ ಆ ಅತ್ಯಂತ ,ವಿಲಕ್ಷಣವಾದ ರೂಪವನ್ನು ಕೂಡ ಪುನ: ಪುನ: ಸ್ಮರಿಸಿಕೊಂಡು ನನ್ನ ಚಿತ್ತದಲ್ಲಿ ಮಹಾನ್ ಆಶ್ಚರ್ಯವಾಗುತ್ತದೆ ಮತ್ತು ನಾನು ಬಾರಿಬಾರಿಗೂ ಹರ್ಷಿತನಾಗುತ್ತಿದ್ದೇನೆ.
*ಯತ್ರ ಯೋಗೇಶ್ವರ: ಕೃಷ್ಣೋ ಯತ್ರ ಪಾರ್ಥೋ ಧನುರ್ಧರ: /*
*ತತ್ರ ಶ್ರೀ ರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ//೭೮//*
ಹೇ ರಾಜಾ! ಎಲ್ಲಿ ಯೋಗೇಶ್ವರನಾದ ಭಗವಾನ್ ಶ್ರೀ ಕೃಷ್ಣನಿದ್ದಾನೋ ಮತ್ತು ಎಲ್ಲಿ ಗಾಂಢೀವ ಧನುರ್ಧಾರಿಯಾದ ಅರ್ಜುನನಿದ್ದಾನೋ ಅಲ್ಲಿಯೇ ಶ್ರೀ, ವಿಜಯ,ವಿಭೂತಿ ಮತ್ತು ಅಚಲವಾದ ನೀತಿಯು ಇದೆ _ ಎಂಬುದೇ ನನ್ನ ಮತವಾಗಿದೆ.
*ಓಂ ತತ್ಸದಿತಿ ಶ್ರೀ ಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ಮೋಕ್ಷಸಂನ್ಯಾಸಯೋಗೋ ನಾಮ ಅಷ್ಟಾದಶೋಧ್ಯಾಯ://*
*ಜಯ ಭಗವದ್ಗೀತೆ, ಜಯ ಭಗವದ್ಗೀತೆ/*
*ಹರಿ _ ಹಿಯ _ ಕಮಲ _ವಿಹಾರಿಣಿ,ಸುಂದರ ಸುಪುನೀತೆ//*
(ಬಂಧುಗಳೇ, ಪರಮ ದಯಾಮಯ ಭಗವಾನ್ ಶ್ರೀ ಕೃಷ್ಣನ ಕೃಪೆಯಿಂದ ಒಂದು ವರ್ಷ ಅವ್ಯಾಹತವಾಗಿ *ಗೀತಾಮೃತ* ದ ಜೊತೆ ಸೇರಿಕೊಂಡ ತಮಗೆಲ್ಲರಿಗೂ ವಂದನೆಗಳು)
-ಶ್ರೀಮತಿ ವಿಜಯಾ ಬಿ. ಶೆಟ್ಟಿ ಸಾಲೆತ್ತೂರು.
ಚಿತ್ರ ಕೃಪೆ: ಇಂಟರ್ನೆಟ್ ತಾಣ