ಗುಬ್ಬಚ್ಚಿ
ಚೀಂವ್ ಚೀಂವ್ ಗುಬ್ಬಚ್ಚಿ
ಮಾರ್ಚ್ ೨೦ "ವಿಶ್ವ ಗುಬ್ಬಚ್ಚಿ ದಿನ". ಬಹುಶಃ ಅನೇಕರಿಗೆ ಇದು ಆಶ್ಚರ್ಯ ತರಬಹುದು. ಹೀಗೆ ಪ್ರತಿ ಹಕ್ಕಿಗಳಿಗೂ ಒಂದೊಂದು ದಿನ ಎಂದು ನಿಗದಿ ಪಡಿಸಿದರೆ ವರ್ಷದ ಎಷ್ಟು ದಿನಗಳು ಬೇಕಾಗಬಹುದು ಎಂದು ಆಲೋಚಿಸಬಹುದು. ಆದರೆ ಗುಬ್ಬಚ್ಚಿ ವಿಷಯ ಹಾಗಲ್ಲ. ಗುಬ್ಬಚ್ಚಿ ಹಿಂದಿನಿಂದಲೂ ಮನುಷ್ಯರ ಒಡನಾಡಿಯಾಗಿಯೇ ಬಂದ ಹಕ್ಕಿ. ಅವುಗಳನ್ನು ಪಂಜರದಲ್ಲಿಟ್ಟು ಸಾಕುವುದಿಲ್ಲ. ಮನೆಯಲ್ಲಿರುವ ಫೊಟೋಗಳ ಹಿಂದೆ ಅಥವಾ ಮರದ ಜಂತಿಗಳ ನಡುವೆ ಮರದ ಹಲೆಗೆಗಳನ್ನು ಹೊಡೆದಿಟ್ಟರೆ ಆಜಾಗದಲ್ಲಿ ಗುಬ್ಬಚ್ಚಿಗಳು ಸಂಸಾರ ಹೂಡುತ್ತಿದ್ದವು. ಇವೆಲ್ಲವೂ ಕಳೆದ ಶತಮಾನದ ೮೦ರ ದಶಕದವರೆಗೆ ಮಾಮೂಲಿಯಾಗಿತ್ತು. ಆದರೆ ಇದ್ದಕ್ಕಿದ್ದಂತೆ ಗುಬ್ಬಚ್ಚಿಗಳು ನಮ್ಮ ನಡುವೆಯಿಂದ ಕಾಣೆಯಾಗತೊಡಗಿದವು. ಮಡಿ ಬ್ರಾಹ್ಮಣರ ಅಡುಗೆ ಮನೆಯೋಳಗೂ ಪ್ರವೇಶ ಮಾಡುವ ಹಕ್ಕು ಪಡೆದ ಗುಬ್ಬಚ್ಚಿ ಎಲ್ಲಾ ಕಡೆಗಳಿಂದಲೂ ಕಣ್ಮರೆಯಾಗುತ್ತಿರುವ ಸುದ್ದಿ ಪಕ್ಷಿ ಪ್ರಿಯರ ಆತಂಕಕ್ಕೆ ಕಾರಣವಾಯಿತು. ಆ ಬಗ್ಗೆ ಚರ್ಚೆ, ಸಂಶೋಧನೆ, ವಿಶ್ಲೇಷಣೆಗಳು ಇಂದು ನಡೆಯುತ್ತಿವೆ. ಪ್ರಮುಖ ಕಾರಣಗಳನ್ನು ಹೀಗೆ ಪಟ್ಟಿ ಮಾಡಿದ್ದಾರೆ.
೧. ಪರಿಸರ ಮಾಲಿನ್ಯದ ಏರುಗತಿ
೨. ರಾಸಾಯನಿಕ ಕೀಟನಾಶಕಗಳ ಸಿಕ್ಕಾಪಟ್ಟೆ ಬಳಕೆ
೩. ಪಾರಂಪರಿಕ ರೀತಿಯಲ್ಲಿ ಮನೆಗಳನ್ನು ಕಟ್ಟುವುದು ನಿಲ್ಲಿಸಿದ್ದು.
೪. ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು ಮನೆಗಳ ಒಳಗೆ ಜಾಗದ ಅಭಾವ
೫. ಗುಬ್ಬಚ್ಚಿಗಳಿಗೆ ಅವುಗಳ ಆಹಾರದ ಕೊರತೆ
ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಗುಬ್ಬಚ್ಚಿಗಳ ಕಣ್ಮರೆ ಹೆಚ್ಚು ವೇಗದಲ್ಲಿ ನಡೆಯುತ್ತಿವೆಯೆಂದು ಕೆಲವು ಸಮೀಕ್ಷೆಗಳು ಹೇಳುತ್ತಿವೆ. ಒಟ್ಟಿನಲ್ಲಿ ಗುಬ್ಬಚ್ಚಿಯ ಕಣ್ಮರೆಯ ವಿಷಯ ನಮಗೊಂದು ಎಚ್ಚರಿಕೆಯ ಗಂಟೆಯೇ ಅಥವಾ ಪ್ರಕೃತಿಯಲ್ಲಿ ಇವೆಲ್ಲಾ ಸಹಜವೆಂದು ತೀರ್ಮಾನಿಸುವ ಹೊತ್ತಿಗೆ ಕಾಲ ಮಿಂಚಿಹೋಗುತ್ತದೆಯೋ ಏನೋ? ಆದರೆ ಕನಿಷ್ಟ ನಮ್ಮ ಮುಂದಿನ ಪೀಳಿಗೆಗೆ ಗುಬ್ಬಚ್ಚಿ ಹಾಗೂ ಮಾನವನ ನಡುವಿನ ಸಂಬಂಧಗಳ ಬಗ್ಗೆ ಸ್ವಲ್ಪವಾದರೂ ತಿಳುವಳಿಕೆ ನೀಡುವುದು ಒಳಿತಲ್ಲವೇ? ಗುಬ್ಬಚ್ಚಿಯ ಚೀಂವ್ ಚೀಂವ್ ಸದ್ದು ಇನ್ನೆಷ್ಟು ದಿನ!?
Comments
ಗುಬ್ಬಚ್ಚಿಯನ್ನು ಬೆ0ಗಳೂರಲಿ
In reply to ಗುಬ್ಬಚ್ಚಿಯನ್ನು ಬೆ0ಗಳೂರಲಿ by venkatb83
>>>ಅವುಗಳ ಅವನತಿಗೆ ನಾವೇ ಕಾರಣ
ದಾರಿ ಕಾಣದಂತಾಗಿದೆ ನನಗೆ
In reply to ದಾರಿ ಕಾಣದಂತಾಗಿದೆ ನನಗೆ by shejwadkar
shejwadkarರೆ, ದಾರಿ ಸರಿಯಾಗಿದೆ.
In reply to shejwadkarರೆ, ದಾರಿ ಸರಿಯಾಗಿದೆ. by ಗಣೇಶ
ಖಂಡಿತ ಗಣೆಶ ರವರೆ, ನನ್ನ
In reply to shejwadkarರೆ, ದಾರಿ ಸರಿಯಾಗಿದೆ. by ಗಣೇಶ
ಗುಬ್ಬಿಯ ಬಗ್ಗೆ ನಾನು ಬರೆದ ಕವನ
In reply to shejwadkarರೆ, ದಾರಿ ಸರಿಯಾಗಿದೆ. by ಗಣೇಶ
ನಿಮ್ಮ ಪ್ರಯತ್ನ
In reply to ನಿಮ್ಮ ಪ್ರಯತ್ನ by basho aras
ಅದೆ ನೋವಿನ ಸಂಗತಿ ಶೊಭಾಅವ್ರೆ.
ಬಾಶೋ, ಗುಬ್ಬಚ್ಚಿ, ಮತ್ತಿತರ