ಗುಬ್ಬಣ್ಣನ ಸ್ವಗತಗಳು
ಕವನ
ಕಣ್ಮುಚ್ಚಿ ಕುಡಿದಾ ಹಾಲು
---------------------------------------------
ಕಣ್ಮುಚ್ಚಿ ಕುಡಿದಾ ಹಾಲು, ಬೆಕ್ಕಿಗಹುದು ಮೇಲು
ಕದ್ದು ಮುಚ್ಚಿದ ಪ್ರಣಯ, ತರುವುದೆ ಬರಿ ಗೋಳು
ಪ್ರೇಮಾಪ್ರೀತಿ ಯಾರ್ಕೇಳದ ಅಹವಾಲೆ ಗುಬ್ಬಣ್ಣ!
ಹಾದಿ ವಾಹನ
---------------------------------------------
ಹಾದಿ ವಾಹನ ಬಹಳ, ಜೀವ ತೆಗೆವ ಖೂಳ
ಯಾರು ಗುದ್ದಲೂ, ನೇರ ಸ್ವರ್ಗಕೇ ಸಲೀಸಣ್ಣ
ನಮ್ಮ ಕ್ಷೇಮ, ನಮ್ಮ ಕೈಲಿರಬೇಕಣ್ಣ, ಗುಬ್ಬಣ್ಣ!
ಬಡ್ಡಿ ಕಟ್ಟದ ಸಾಲ
-----------------------------------------------
ಬಡ್ಡಿ ಕಟ್ಟದ ಸಾಲ, ಹನುಮಂತನ ಬಾಲ
ಕಟ್ಟಿದರು ಅಷ್ಟಿಷ್ಟು, ಅಲುಗಾಡದ ಅಸಲ
ಕಡ ತಂದು ನಿ, ತಿಂದು ಕೆಡಬೇಡ, ಗುಬ್ಬಣ್ಣ!
(ನಾಗೇಶ ಮೈಸೂರು, ಸಿಂಗಪುರ)
Comments
"ಕದ್ದು ಮುಚ್ಚಿದ ಪ್ರಣಯ, ತರುವುದೆ
"ಕದ್ದು ಮುಚ್ಚಿದ ಪ್ರಣಯ, ತರುವುದೆ ಬರಿ ಗೋಳು"
http://v7b.sampada.net/blog/%E0%B2%B8%E0%B3%81%E0%B2%AC%E0%B3%8D%E0%B2%AC%E0%B2%85%E0%B2%AF%E0%B3%8D%E0%B2%AF%E0%B3%8B-%E0%B2%AA%E0%B2%BE%E0%B2%AA/7-3-2013/40260
>>ಈ ಬರಹದಲ್ಲಿ ಬಂದದ್ದು ಗೋಳೇ? ನನಗೆ ಸಂಶಯವಿದೆ ನೀವೇ ಹೇಳಿ...
ಉಳಿದಂತೆ ನಿಮ್ಮ ಸರಳ ಸಾಲುಗಳ ಆದರೆ ಅಪರಿಮಿತಾರ್ಥದ ಬರಹಗಳು ಮನ ಸೆಳೆದವು-ಇಸ್ತವಾದವು..
ಸಾಲದ ಬಗ್ಗೆ ಹೇಳಿದ್ದು ಸತ್ಯ ಅನ್ಸುತ್ತೆ....(ಆದರೆ ನಾ ಸಾಲಗಾರ ಅಲ್ಲ ಬಿಡಿ-ಮಾಡಿಯೂ ಇಲ್ಲ ಕೊಡೋದು ಇಲ್ಲ-ಕಾರಣ ಕೊಟ್ಟವ ಕೋಡಂಗಿ ಇಸ್ಕಂಡವ ಈರಭದ್ರ ಅದ್ಕೆ.!!)
ಶುಭವಾಗಲಿ..
\।
In reply to "ಕದ್ದು ಮುಚ್ಚಿದ ಪ್ರಣಯ, ತರುವುದೆ by venkatb83
ವೆಂಕಟ್ ಅವರೆ,
ವೆಂಕಟ್ ಅವರೆ,
ಧನ್ಯವಾದಗಳು. ಸಾಲದ ಬಗ್ಗೆ ನೀವು ಹೇಳಿದ್ದು ಸತ್ಯವಾದ ಮಾತು. ಯುಗಾದಿಯ ಶುಭಾಶಯಗಳು!
ನಾಗಎಶ ಮೈಸೂರು, ಸಿಂಗಾಪುರದಿಂದ