ಗುರು ಎಂದರೆ ಯಾರು

ಗುರು ಎಂದರೆ ಯಾರು

ಕವನ

 

 

ಗುರು ಎಂದರೆ ಯಾರು

ದೈವ ಸ್ವರೂಪ ಗುರು
ಸರಿಸಾಟಿ ಇಲ್ಲ ನಿಮಗೆ ಯಾರು

ಗುರಿಯನ್ನು ತೋರುವವರು ಗುರು
ಶಿಸ್ತನ್ನು ಕಲಿಸುವವರು ಗುರು 
ಜ್ಞಾನವನ್ನು ನೀಡುವವರು ಗುರು 
ಅಜ್ಞಾನವನ್ನು ಅಳಿಸುವವರು ಗುರು
!!ದೈವ ಸ್ವರೂಪ ಗುರು!!

ಕತ್ತಲಿನಿಂದ ಬೆಳಕಿನೆಡೆಗೆ ಸಾಗಿಸುವವರು ಗುರು
ಮಾರ್ಗದರ್ಶನವನ್ನು ನೀಡುವವರು ಗುರು
ಮೌಢ್ಯತೆಯನ್ನು ಹೋಗಲಾಡಿಸುವವರು ಗುರು
ಆತ್ಮಾಭಿಮಾನವನ್ನು ಬೆಳೆಸುವವರು ಗುರು
!!ದೈವ ಸ್ವರೂಪ ಗುರು!!

ಸಮರ್ಪಣಾ ಭಾವಜೀವಿಗಳಿವರು ಗುರು
ಸರ್ವ ತ್ಯಾಗಮಯಿಗಳಿವರು ಗುರು 
ತಾಳ್ಮೆಯ ಪ್ರತೀಕವಾಗಿರುವವರು ಗುರು
ನಿಷ್ಠಾಗುಣ ಸಂಪನ್ನರಾಗಿರುವವರು ಗುರು
!!ದೈವ ಸ್ವರೂಪ ಗುರು!!

ಶಿಕ್ಷಿಸಿ ರಕ್ಷಿಸುವವರು ಗುರು
ಶಿಷ್ಯರ ಹಿತಚಿಂತಕರು ಗುರು
ಶಕ್ತಿ ಯುಕ್ತಿ ಭಕ್ತಿ ಮುಕ್ತಿ ಪ್ರದಾಯಕರು ಗುರು
ದೇವ ದಾನವ ಮಾನವರಿಗೆಲ್ಲರಿಗು ಬೇಕಾಗಿರುವವರು ಗುರು
!!ದೈವ ಸ್ವರೂಪ ಗುರು!!

 

ರಚನೆ:-ತುಂಬೇನಹಳ್ಳಿ ಕಿರಣ್ ರಾಜು ಎನ್