ಗೂಗಲ್ ಡಿಕ್ಷನರಿ
ಗೂಗಲ್ ಡಿಕ್ಷನರಿ ಇವತ್ತು ನನ್ನ ಕಣ್ಣಿಗೂ ಬಿತ್ತು. ಎಂದಿನಂತೆ ಮೊದಲು ಕನ್ನಡ ಕಾಣುತ್ತಿದೆಯೋ ಎಂದು ಹುಡುಕಹೋಗಿದ್ದು. ನೋಡಿದರೆ, ಅರೆರೆ! ಕನ್ನಡವೂ ಇದೆ. ಇಂಗ್ಲಿಷ್ - ಕನ್ನಡ ಡಿಕ್ಷನರಿ ಲಭ್ಯವಿದೆ!
http://google.com/dictionary
ಮೊದಲ ನೋಟಕ್ಕೆ ಚೆಂದ ಇದೆ ಅನಿಸಿತು. ಸ್ವಲ್ಪ ಗಮನಿಸಿ ನೋಡಿದಾಗ ವಿಕಿಪೀಡಿಯ ಯೋಜನೆಯ ಜೊತೆಯಾದ ಯೋಜನೆಯಾಗಿರುವ ವಿಕ್ಷನರಿ (ಕನ್ನಡ ವಿಕ್ಷನರಿ: http://kn.wiktionary.org/) ಪುಟಗಳಲ್ಲಿರುವ ಮಾಹಿತಿ ಹಾಗು ಗೂಗಲ್ ನೀಡುತ್ತಿರುವ ಮಾಹಿತಿ - ಇವೆರಡೂ ಹೆಚ್ಚು ಕಡಿಮೆ ಒಂದೇ ರೀತಿ ಇರುವುದು ಗಮನಕ್ಕೆ ಬಂತು. ಬಹುಶಃ ಗೂಗಲ್ ವಿಕ್ಷನರಿಯಿಂದ ಕೆಲವು ಮಾಹಿತಿ ಹೆಕ್ಕಿ ತೆಗೆದು ಇದನ್ನು ರೆಡಿ ಮಾಡಿರಬಹುದು. ಜೊತೆಗೆ ಮತ್ತಷ್ಟು ವರ್ಡ್ ಲಿಸ್ಟ್ ಸೇರಿಸಿದ್ದರೂ ಸೈ. ಈಗಿನಂತೆ ಈ ವಿಚಾರ ನನ್ನ ಊಹೆ ಮಾತ್ರ.
ಆದರೆ ಈ ಸೌಲಭ್ಯ ಬಹು ಉಪಯುಕ್ತವಾಗಲಿದೆ (ವಿಕ್ಷನರಿಯಲ್ಲಿಯೇ ಒಂದು ಸುಲಭ ಸರ್ಚ್ ವ್ಯವಸ್ಥೆ ಕೊಟ್ಟು ಪದಕೋಶ ಮಾಡುವಂತೆ ನಾವು ಈಗಲೂ ಮಾಡಬಹುದು. ಬಹಳ ಉಪಯೋಗದ ಸೌಕರ್ಯವಾಗಿಲಿಕ್ಕುಂಟು ಹಾಗೆ ಮಾಡಿದರೆ).
(ಜೊತೆಗೆ, ಇದನ್ನು ನನ್ನ ಗಮನಕ್ಕೆ ತಂದ ದೀಪಕ್ ಮಧ್ಯಸ್ಥರವರಿಗೆ ವಂದನೆಗಳು)