ಗೃಹದೋಷ - ಸಣ್ಕತೆ

ಕೇಶವ ಜೋಯಿಸರು ಊರಿಗೆಲ್ಲ ಪ್ರಸಿದ್ಧರು. ಗೃಹದೋಷ ಹೇಳುವುದರಲ್ಲಿ ಎತ್ತಿದ ಕೈ. ಇದ್ದ ಓರ್ವ ಮಗನಿಗೆ ಚೆನ್ನಾಗಿ ಓದಿಸಿದ್ದರು. ಬೆಳಿಗ್ಗೆ ಹಾಲು ತೆಗೆದುಕೊಂಡು ಬಂದಿದ್ದ ರಂಗಣ್ಣ ಹೇಳಿದ ಮಾತು ಕೇಳಿ, ಮಾತೇ ಹೊರಡದಾಯಿತು. ಮನೆಯೊಳಗೆ ಉಡ ಹೊಕ್ಕಿತಂತೆ, ಗೃಹದೋಷ ಪರಿಹಾರದ ಹೋಮ ಮಾಡಲು ತಯಾರಿ ನಡೆಸಿದ್ದರಂತೆ, ಜೋಯಿಸರ ಮಗ ಏನೋ ತರಲು ಪೇಟೆಗೆ ಹೋದವ, ವಾಹನ ಅಪಘಾತದಲ್ಲಿ ಸ್ಥಳದಲ್ಲೇ ತೀರಿಕೊಂಡನಂತೆ.
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ