ಗೃಹಸ್ಥಾಶ್ರಮ

ಗೃಹಸ್ಥಾಶ್ರಮ

ಬರಹ

  ಗೃಹಸ್ಥಾಶ್ರಮ
 
  ಮನೆಯ ಮುಂದೆ ಎದ್ದು ನಿಂತಿದೆ ಚಪ್ಪರ
  ಹಸೆಮಣೆಯ ಏರಿ ಕುಳಿತಿಹನಿಂದು ವರ
  ಬಾಗಿಲಲಿ ಕಾಣುತಿದೆ ಹಸಿರು ತೋರಣ
  ಹುಡುಗನ ಮೈಯೆಲ್ಲಾ ಆಗಿದೆ ಅರಿಶಿಣ
 
  ಮನೆಯಲ್ಲೆಲ್ಲಾ ಸೇರಿದ್ದಾರೆ ಬಂಧುಗಳು
  ಭರದಿಂದ ಸಾಗಿದೆ ಲಗ್ನದ ಕಾರ್ಯಗಳು
  ಮನೆಯಲ್ಲಿಂದು ನಡೆದಿದೆ ದೇವರ ಕಾರ್ಯ
  ಹುಡುಗನು ಮುಗಿಸುತ್ತಿದ್ದಾನೆ ಬ್ರಹ್ಮಚರ್ಯ
 
  ನಾಲ್ಕು ದಿನದಿ ಬಂದಿತು ಮದುವೆಯ ದಿನ
  ಮನೆ ಮಂದಿಗೆಲ್ಲರಿಗಿದು ಸಂಭ್ರಮದ ದಿನ
  ಮಂಟಪವು ಅಲಂಕೃತವಾಗಿದೆ ಹೂಗಳಿಂದ
  ಶಾಸ್ತ್ರಗಳು ಆರಂಭವಾಗಿದೆ ಶಾಸ್ತ್ರಿಗಳಿಂದ
 
  ಕನ್ಯಾಧಾರೆಯ ಮಾಡಿಹರು ಮಗಳ ಹೆತ್ತವರು   
  ಮಾಂಗಲ್ಯಧಾರಣೆ ಮಾಡಿಸಿ ಆದರು ಗೆದ್ದವರು
  ಗೃಹಸ್ಥಾಶ್ರಮ ಪ್ರವೇಶಿಸಿದ ಸಪ್ತಪದಿ ತುಳಿದು
  ಹೊಸ ಜೀವನವ ಆರಂಭಿಸಿದ ಹುಡುಗನಿಂದು
 
  - ತೇಜಸ್ವಿ ಎ.ಸಿ