ಗೆಳೆಯರ ಗುಂಪು
ಕವನ
ಹಗಲಿರುಳೆನ್ನದೆ ಸುರಿದಿಹ ಮಳೆಯದು
ಈದಿನ ಏತಕೊ ಸುರಿದಿಲ್ಲ
ಆಡುವ ವಯಸ್ಸಿನ ಚಿಣ್ಣರ ಮನದಲಿ
ಆಡುವ ಆಸೆಗೆ ಕೊನೆಯಿಲ್ಲ
ವಾರದ ನಂತರ ಒಟ್ಟಿಗೆ ಸೇರಿತು
ಗೆಳೆಯರ ಗುಂಪದು ಸಂತಸದಿ
ಊರಿನ ನಡುವಿನ ಬಯಲಿಗೆ ಬಂದರು
ತೊಡಗಿದರಾಟಕೆ ಖುಷಿಯಲ್ಲಿ
ಬಾನಿನ ಸೂರ್ಯನು ಪಡುವಣ ಕಡಲಿಗೆ
ಇಳಿಯಲು ತೊಡಗಿದ ಸಂಜೆಯಲಿ
ಕತ್ತಲ ಭಯದಲಿ ಆಟವ ನಿಲ್ಲಿಸಿ
ತೆರಳುವ ವೇದನೆ ಮಕ್ಕಳಲಿ
ಆಟವ ಅರ್ಧಕೆ ನಿಲ್ಲಿಸಬೇಕಿದೆ
ಮುಂದಿಹ ತಂಡವು ನೋವಿನಲಿ
ಅರ್ಧವ ನಾಳೆಗೆ ಆಡುವ ಎಂದರು
ಗೆಲ್ಲುವ ಹಂಬಲ ತಂಡದಲಿ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್