ಗೊಲ್ಲರ ಕೋಲಾಟ :
ಕವನ
ಗೊಲ್ಲರ ಕೋಲಾಟ :
ಕೋಲಾಟ ವಾಡೋಣ ಗೆಳೆಯರೇ | ನಾವೆಲ್ಲಾ |
ಕೋಲಾಟ ವಾಡೋಣ ಬನ್ನಿರೆ ||ಪ||
ಬಣ್ಣ ಬಣ್ಣದ ಕೋಲ ತನ್ನಿರಿ |
ಚೆಲುವ ಕೃಷ್ಣನ ಬಳಿಗೆ ಬನ್ನಿರಿ | ಹೊಯ್
ನೀಲಮೇಘನಾ ಸುತ್ತ ಸೇರಿರಿ
ತಾಳ ಮೇಳದಿ ಆಟ ಆದಿರಿ ||೧||
ಹಾಲು ಮೊಸರು ಬೆಣ್ಣೆಗಳ ತನ್ನಿರಿ
ಒಳ್ಳೆ ಒಳ್ಳೆ ಬುತ್ತಿ ಕಟ್ಟಿ ಕೊಳ್ಳಿರಿ | ಹೊಯ್ |
ರಾಮಶ್ಯಾಮರನ್ನು ಕೂಡಿ ಬನ್ನಿರಿ
ಅವರ ಜೊತೆಗೆ ತಂದ ತಿನಿಸ ತಿನ್ನಿರಿ ||೨||
ನಂದ ಗೋಕುಲ ಸುಖದ ಸಾಗರ |
ಹೊಂದಿ ಬದುಕುವಂತ ಜನರ ಆಗರ | ಹೊಯ್ |
ಆನಂದ ತುಂಬಿಕೊಂಡ ಗೋಕುಲ |
ನಲಿವನುಣ್ಣುತಿದ್ದುದೆಲ್ಲ ಸಂಕುಲ ||೩||
- ಸದಾನಂದ