ಗೋದಿ ಹಿಟ್ಟಿನ ಕ್ಷೀರ

ಗೋದಿ ಹಿಟ್ಟಿನ ಕ್ಷೀರ

ಬೇಕಿರುವ ಸಾಮಗ್ರಿ

ಗೋದಿ ಹಿಟ್ಟು ೨ ಕಪ್, ಹಾಲು ೧ ಕಪ್, ನೀರು ೨ ಕಪ್, ಸಕ್ಕರೆ ೧ ಕಪ್, ತುಪ್ಪ ೧ ಕಪ್, ಏಲಕ್ಕಿ ಪುಡಿ, ಗೋಡಂಬಿ ಚೂರು ಮತ್ತು ದ್ರಾಕ್ಷಿ ಸ್ವಲ್ಪ.

ತಯಾರಿಸುವ ವಿಧಾನ

ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಗೋದಿ ಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಗೋಡಂಬಿ, ದ್ರಾಕ್ಷಿ ಸೇರಿಸಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಹಾಲು, ನೀರು ಹಾಗು ಸಕ್ಕರೆ ಸೇರಿಸಿ ಕುದಿಯಲು ಇಡಿ. ಕುದಿಯುವ ಈ ಹಾಲು, ನೀರಿನ ಮಿಶ್ರಣವನ್ನು ಹುರಿದ ಗೋದಿ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಗುಚಿ. ಏಲಕ್ಕಿ ಪುಡಿ ಸೇರಿಸಿ ಮತ್ತೆ ಗಂಟಿಲ್ಲದಂತೆ ಮಗುಚಿ ಇಳಿಸಿ. ಇದು ಬೇಗನೇ ಆಗುವ ಸಿಹಿತಿಂಡಿ.

- ಸಹನಾ ಕಾಂತಬೈಲು, ಮಡಿಕೇರಿ