ಗೋದಿ ಹಿಟ್ಟಿನ ಲಾಡು

ಗೋದಿ ಹಿಟ್ಟಿನ ಲಾಡು

ಬೇಕಿರುವ ಸಾಮಗ್ರಿ

ಗೋದಿ ಹಿಟ್ಟು ೧ ಕಪ್, ಸಕ್ಕರೆ ಪುಡಿ ೧ ಕಪ್, ತುಪ್ಪ ೧/೨ ಕಪ್, ಏಲಕ್ಕಿ ಪುಡಿ ಸ್ವಲ್ಪ, ಗೋಡಂಬಿ ಚೂರು ಸ್ವಲ್ಪ.

ತಯಾರಿಸುವ ವಿಧಾನ

ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಗೋದಿ ಹಿಟ್ಟನ್ನು ಹಾಕಿ ಚೆನ್ನಾಗಿ ಪರಿಮಳ ಬರುವವರೆಗೆ ಅಂದರೆ ಸ್ವಲ್ಪ ಕಂದು ಬಣ್ಣ ಬರುವವರೆಗೆ ಸಣ್ಣ ಉರಿಯಲ್ಲಿ ಹುರಿಯಿರಿ. ಆರಿದ ನಂತರ ಸಕ್ಕರೆ ಪುಡಿ, ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ ಚೂರುಗಳನ್ನು ಸೇರಿಸಿ ಉಂಡೆಗಳನ್ನು ಮಾಡಿದರೆ ಗೋದಿ ಲಾಡು ಸವಿಯಲು ರೆಡಿ. ಈ ಲಾಡು ವಾರಗಟ್ಟಲೆ ಉಳಿಯುತ್ತದೆ. ಇದು ಮಕ್ಕಳಿಗೆ ಬಹಳ ಇಷ್ಟವಾಗುವ ಸಿಹಿತಿಂಡಿ.

-ಸಹನಾ ಕಾಂತಬೈಲು, ಮಡಿಕೇರಿ