ಗೌಡಪ್ಪ ಆಸ್ ರಾಜ್

ಗೌಡಪ್ಪ ಆಸ್ ರಾಜ್

ಬರಹ

ಬೆಳಗ್ಗೆನೇ ಚಾ ಕುಡೀಯಕ್ಕೆ ಅಂತಾ ಗೌಡಪ್ಪನ ಮನೆತಾವ ಹೋದೆ. ಅಲ್ಲಿ ಗೌಡಪ್ಪ ಚೆಡ್ಡಿ ಹಾಕ್ಕೊಂಡು ಐಕ್ಳು ಜೊತೆ ಬಾಲ್ ಟಪ್ ಗೋಲಿ ಆಟ ಆಡ್ತಾ ಇದ್ದ. ಸುಬ್ಬ ನೋಡ್ದೋನು ಏ ಥೂ. ನಿಮ್ಮ ವಯಸ್ಸಿಗೆ ಆಡೋ ಆಟನೇ ಬೇರೆ ಅಂದ. ಸರಿ ಏನ್ರಲಾ ಬಂದಿದ್ದು, ಚಾ ಕುಡಿಯುವಾ ಅಂತ. ಸುಬ್ಬನ ಕೈ ಗೆ ಚೊಂಬು ಕೊಟ್ಟು ಹಾಲು ಕರೆದುಕೊಂಡು ಬಾರಲಾ ಅಂದ ಗೌಡಪ್ಪ. ಸುಬ್ಬ ಕೊಟ್ಟಿಗೆ ಹೋಗಿ ಎರಡೇ ನಿಮಸಕ್ಕೆ ಹೊರಕ್ಕೆ ಬಂದು ಬಿದ್ದಿದ್ದ. ಯಾಕಲಾ. ಹಸಾ ಒದೀತು ಕಲಾ ಅಂದ. ಕಡೆಗೆ ಬಸಮ್ಮನ ಸೀರೆ ತಲೆ ಮೇಲೆ ಹಾಕ್ಕೊಂಡು ಹೋದ್ ಮ್ಯಾಕೆ ಹಾಲು ಕೊಡ್ತು. ಸ್ವಲ್ಪ ಟೀ ಪುಡಿ ಹಾಕಿ ಗೌಡನ ಹೆಂಡರು ಚಾ ಮಾಡಿ ಕೊಟ್ಲು. ಇದಕ್ಕಿಂತ ನಿಂಗನ ಅಂಗಡಿ ಚಾನೇ ಸಂದಾಕಿರುತ್ತೆ ಅಂದ ಸುಬ್ಬ. ಸರಿ ಗೌಡರೆ ನೀವು ಯಾರತರಾ ಆಗಬೇಕು ಅಂತಾ ಇದೀರಾ. 

ನೋಡಲಾ ಅಣ್ಣನ ತರಾ ಆಗಬೇಕು ಅಂತಾ ಇದೀನಿ ಅಂದ. ಏ ಥೂ ನಿಮ್ಮ ಅಣ್ಣ ದೊಡ್ಡ ಹೆಂಡ ಕುಡುಕ ಅಲ್ವರಾ. ಆ ಅಣ್ಣ ಅಲ್ಲ ಕಲಾ. ನಮ್ಮ ರಾಜಣ್ಣೋರು. ಆಹಾ. ಹಾ ಅಂತಾ ಒಂದು ಸ್ಟೈಲ್ ಮಾಡಿದ. ಆಮ್ಯಾಕೆ ಮಂಡಿ ಹಿಡಕಂಡು ಎದ್ದ. ಯಾಕ್ರೀ. ಲೇ ದುಬೈ ಮಂಜಣ್ಣ ಗೋಮಟೇಸ್ವರನ ತೋರಿಸ್ತೀನಿ ಅಂತಾ ಮೆಟ್ಟಿಲು ಹತ್ತಿಸಿದ. ಮಂಡಿ ಸವದೈತೆ ಅದಕ್ಕೆ ಅಂತಾ ಹಮ್ಜಾ ಮುಲಾಮ್ ಹಚ್ಕಂತಾ ಇದೀನಿ ಅಂದೋನು, ಪಾರು ಪಾರು ಅಂದ. ಒಳಗಿದ್ದ ಬಸಮ್ಮ ಬಂದು ಏನಲಾ ಅಂತು. ಪಾರು ಬಿಸಿನೀರು ಕಾಯಕ್ಕೆ ಇಡು. ಮಂಡಿಗೆ ಹುಯ್ಕಬೇಕು ಅಂದೋನು ಲೇ ಎಲ್ಲಾ ನಿಂಗನ ಅಂಗಡಿ ತಾವ ಬರ್ರಿ ಅಂದು ಕಾಲು ಕೆರ್ಕಂತಾ ಒಳಿಕ್ಕೆ ಹೋದ. ಅಮ್ಮಾ ಅಂತ ಸವಂಡ್ ಬಂತು. ಮಗಾ ಬಿಸಿನೀರನ್ನ ಹಾಗೇ ಹುಯ್ಕಂಡಿದ್ದ.

 

ಸರಿ ನಿಂಗನ ಅಂಗಡಿ ತಾವ ಎಲ್ಲಾ ಸೇರಿದ್ವಿ. ರಾಜಣ್ಣಂಗೆ ಮಂಡಿ ನೋವು ಆದ್ ಮ್ಯಾಕೆ ಸಬ್ದವೇದಿ ಪಿಚ್ಚರ್ನಾಗೆ ರಾಜಣ್ಣ ಬಂದಂಗೆ ಗೌಡಪ್ಪ ಬಂದ. ರಾಜಣ್ಣನ ಸ್ಟೈಲ್ನಾಗೆ. ಏನಪ್ಪಾ ನಿಂಗ, ಹೇಗಿದ್ದೀಯಾ, ನೀವೇ ನನ್ನ ಅಭಿಮಾನಿ ದೇವರುಗಳು ಅಂದ. ನಿಂಗ ರಾಜಣ್ಣ ಸತ್ತು ಎರಡು ವರ್ಸ ಆಗೈತೆ ಅಂತಾ ಡೌಟ್ನಾಗೆ ಬಂದು ನೋಡಿದ್ರೆ ಗೌಡಪ್ಪ, ಏ ಥೂ ಅಂದೋನು ಮತ್ತೆ ಚಾ ಹುಯ್ಯಕ್ಕೆ ಹೋದ. ಅಷ್ಟೊತ್ತಿಗೆ ಯಾರೋ ಮದುವೆಗೆ ಕಷ್ಟ ಐತೆ ಅಂತ ಗೌಡನ ತಾವ ಬಂದು ಒಂದು ಸಾವಿರ ರೂಪಾಯಿ ಕೇಳಿದ್ರು. ನೀವು ನನ್ನ ಅಭಿಮಾನಿಗಳು. ನಿಮಗೆ ಇಲ್ಲಾ ಅನ್ನುತ್ತೇನೆಯೇ ತೊಗೊಳ್ಳಿ ಅಂದು ಐವತ್ತು ಸಾವಿರ ರೂಪಾಯಿ ಚೆಕ್ ಕೊಟ್ಟ. ಅವು ಗೌಡಪ್ಪಂಗೆ ನಮಸ್ಕಾರ ಮಾಡಿ ಹೋದ್ವು. ಗೌಡಪ್ಪ ನಗ್ತಾ ಇದ್ದ. ಯಾಕ್ರೀ. ಲೇ ಆ ಚೆಕ್ ನಮ್ಮಪ್ಪಂದು , ಅಕೌಂಟ್ ಕ್ಲೋಸ್ ಮಾಡಿ ವರ್ಸ ಆಗೈತೆ ಅಂದ. ಏ ಥೂ. ಸರೀ ಅಟ್ಟೊತ್ತಿಗೆ ಪಕ್ಕದೂರು ಪಾರ್ವತಮ್ಮ ಬಂದು. ಗೌಡರೆ ನಮ್ಮ ಮನೆ ಮಳೆ ಬಂದು ಬಿದ್ದೈತೆ ಸಹಾಯ ಮಾಡಿ ಅಂದ್ಲು. ಏನು ಗೋಡೆ ಕಟ್ಟಿ ಕೊಡಲಾ ಅಂದ. ಅದೆಲ್ಲಾ ಬೇಡ ಒಂದಸು ಎರಡು ಸಾವಿರ ರೂಪಾಯಿ ಕೊಡಿ ಅಂದ್ಲು. ಪಾರು,ಪಾರು ನೀ ಏನು ಯೋಸನೆ ಮಾಡಬೇಡ. ಅಂದು ಅವಳಿಗೂ ಚೆಕ್ ಕೊಟ್ಟ. ಆಮ್ಯಾಕೆ ಬ್ಯಾಂಕ್ ಮಾನೇಜರ್ ಬಂದು ಸಾನೇ ಹೊಡೆದು ಹೋಗಿದ್ರು. ಮಗಾ ಎಲ್ಲಾರಿಗೂ ಚೆಕ್ ಕೊಟ್ಟು ಸುಮ್ನೆ ನಮ್ಮ ಕೈಲಿ ಕೆಲಸ ಮಾಡಿಸ್ತಾನೆ ಅಂತ, ವರ್ಕರ್ಸ್ ಇರೋದೆ ಕಮ್ಮಿ ಇದೆ ಬೇರೆ ಅಂತಿದ್ದ ಮಾನೇಜರ್.

ಸರಿ ಟೆಂಟ್ನಾಗೆ ಜೀವನ ಚೈತ್ರ ಪಿಚ್ಚರ್ ಬಂದಿತ್ತು. ಗೌಡಪ್ಪ ರಾಜಣ್ಣನ ಸ್ಟೈಲ್ ಮಾಡಬೇಕು ಅಂತಾ ಕಾಸು ಕೊಡದೆ ಹಿಂದಿಂದ ತಟ್ಟಿ ಎತ್ಕಂಡು ಒಂದು ಹುತ್ತು ಕಿತಾ ನೋಡಿದ್ದ. ಯಾವಗಲೂ ನಾದಮಯ ಅನ್ನೋನು. ಮಗಂದು ಜುಬ್ಬ ಹಂಗೇ ಕಚ್ಚೆಪಂಚೆ. ಮಗಾ ತಲೆ ಕೂದಲಿಗೆ ಮತ್ತು ಗಡ್ಡಕ್ಕೆ ಬಿಳೀ ಬಣ್ಣ ಹಚ್ಚಿದ್ದ. ನೋಡಕ್ಕೆ ಸಾಯಿಬಾಬಾ ಕಂಡಂಗೆ ಕಾಣೋನು. ಕೆಲವರು ನಮ್ಮೂರಿಗೆ ಹೊಸಾ ಸ್ವಾಮೀಜಿ ಬಂದಿದಾರೆ ಅಂತಾ ನಮಸ್ಕಾರ ಮಾಡೋವು. ಕಾಲ್ನಾಗಿನ ಗಾಯ ನೋಡ್ತಿದ್ದಂಗೆನೇ ಏ ಥೂ ಗೌಡಪ್ಪ ಅನ್ನೋವು. ಮಗಾ ಯಾವ ಹೆಣ್ಣು ಮಕ್ಕಳಿಗೂ ಚುಡಾಯಸ್ತಾ ಇರ್ಲಿಲ್ಲ. ಕೆರೆತಾವಕ್ಕೆ ರಾತ್ರಿ ಹನ್ನೊಂದು ಆದ್ ಮ್ಯಾಕೆ ಹೋಗೋನು. ಬೀಡಿ ಸೇದಿದ್ದು ಗೊತ್ತಾದ್ರೆ ಎಲ್ಲಿ ರಾಜ್ ಕುಮಾರ್ ಅಭಿಮಾನಿ ಸಂಘದೋರು ನಾಯಿ ಹೊಡೆದಂಗೆ ಹೊಡಿತಾರೆ ಅಂತಾ. ಮಗಾ ಎಣ್ಣೆನಾ ಬಿಸಲೇರಿ ಬಾಟಲಿಗೆ ಮಿಕ್ಸ್ ಮಾಡಕಂಡು ಹುಯ್ಯಕಳೋನು. ಅಂತೂ ಬಹಿರಂಗವಾಗಿ ಗೌಡಪ್ಪ ಬದಲಾಗಿದ್ದ.

ಸರಿ ಹಳ್ಳೀಲಿ ರಾಜಣ್ಣನ ಪ್ರತಿಮೆ ಪ್ರತಿಷ್ಠಾಪನೆ ಮಾಡಬೇಕು ಅಂತಾ ಆಯ್ತು. ಊರ್ನಾಗೆ ರಾಜಣ್ಣನ ಪೋಟೋ ಮೆರವಣಿಗೆ ಮುಂದೆ ಗೌಡಪ್ಪ ರಾಜಣ್ಣನ ಸ್ಟೈಲ್ನಾಗೆ ನಿಂತಿದ್ದ. ಕೆಟ್ಟ ಬಿಸಲು ಬೇರೆ, ಮಜ್ಜಿಗೆ ನೀರು ಕೊಟ್ಟಿದ್ವಿ. ಹೊಟ್ಟೆ ಹಸೀತಾ ಐತೆ ಅಂದ. ಸರಿ ಅಂತಾ ರಾಜಮ್ಮನ ಮನೇಲಿ ಇದ್ದ ವಡೆ ಅಂಗೇ ಎರಡು ಚಕ್ಕಲಿ ಕೊಟ್ಟು ನೀರು ಕೊಟ್ವಿ. ಮಿಕ್ಸಿಂಗ್ ಸುರುವಾತು. ಒಂದು ಬೀದಿ ಮೆರವಣಿಗೆ ಆಗ್ತಿದ್ದಂಗೆನೇ ಟ್ರಾಕ್ಟರ್ ಪಕ್ಕ ಹೋಗಿ ಆಮ್ಲೇಟ್ ಹಾಕ್ದ, ನೀರು ಕುಡಿದು ಸರಿ ಆತು ಅಂದ. ಸರಿ ರಾಜಣ್ಣಂಗೆ ಜೈ. ಅಂದು ಮುಂದೆ ಹೊಂಟ್ವಿ. ಟ್ರಾಕ್ಟರ್್ಯಿಂದ ಏಕ್್ಧಮ್ ಗೌಡಪ್ಪ ಜಂಪ್ ಮಾಡ್ದೋನೆ ಕೆರೆತಾವ ಓಡಕ್ಕೆ ಸುರು ಹಚ್ಕಂಡ. ಕುಡಿಯೋಕ್ಕೆ ಅಂತಾ ನೀರಿನ ಬಾಟ್ಲಿ ಇಟ್ಟಿದ್ವಿ. ಅದನ್ನೇ ತಗೊಂಡು ಹೋಗಿದ್ದ. ಸುಬ್ಬ ಇವನು ರಾಜಣ್ಣನೋ ಇಲ್ಲಾ ಕಿಂಗ ಕಾಂಗ್ ಏನಲಾ ಅಂತಿದ್ದ. ಸರಿ ಹತ್ತು ನಿಮಿಟ್ ಆದ್ ಮ್ಯಾಕೆ ಮತ್ತೆ ಟ್ರಾಕ್ಟರ್ ಮೇಲೆ ಬಂದು ರಾಜಣ್ಣನ ಸ್ಟೈಲ್ನಾಗೆ ನಿಂತಿದ್ದ,. ಸರಿ ಸಿದ್ದೇಸನ ಗುಡಿ ಬೀದಿಗೆ ತಿರುಗಿಸ್ಲಾ. ಅಂತಿದ್ದಾಗೆನೇ ಮತ್ತೆ ಗೌಡಪ್ಪ ಟ್ರಾಕ್ಟರ್ ಇಂದ ಬಾಟಲಿ ಇಟ್ಕಂಡು ಹಾರಿ ಕೆರೆತಾವ ಓಡಿ ಹೋದ. ಸುಬ್ಬ ಏನೋ ಮಿಸ್ಟೇಕ್ ಆಗೈತೆ ಅಂದ. ಗೌಡಪ್ಪ ಹಿಂಗೆ ನಾಕು ಕಿತಾ ಹೋಗಿ ಬಂದ್ ಮ್ಯಾಕೆ ಸಕ್ತಿನೇ ಇರ್ಲಿಲ್ಲ. ಎತ್ತಿ ಟ್ರಾಕ್ಟರ್ ಮೇಲೆ ಹಾಕಿದರೆ ಸಾಕ್ಸಾತ್ಕಾರ ರಾಜಣ್ಣನ ತರಾ ಆಗಿದ್ದ. ಸರಿ ಗೌಡಪ್ಪ ಎಲ್ಲಿ ಅವ್ನೆ ಅಂತಾ ತಿರುಗಿ ನೋಡಿದ್ದೆ, ಮಗಾ ಟ್ರಾಕ್ಟರ್ ಹಿಂದಗಡೆ ಇದ್ದ ಜಮಖಾನದಾಗೆ ಕಿಸ್ಕಂಡಿದ್ದ. 

ಸರಿ ರಾಜಣ್ಣನ ಅಭಿಮಾನಿಗಳು ಬಂದು ನಾಯಿ ಹೊಡೆದಂಗೆ ಹೊಡೆದು ಹೋದ್ರು. ಯಾಕ್ರಲಾ. ಲೇ ಮೆರವಣಿಗೆ ಇನ್ನೂ ಐತೆ ಆಗಲೇ ಮಗಾ ಮಕ್ಕೊಂಡ್ಯಾನೆ ಅಂತ. ಸರಿ ಮೆರವಣಿಗೆ ಮುಗೀತು. ಗೌಡಪ್ಪನ ದೇಹದಲ್ಲಿ ಇರೋ ನೀರೆಲ್ಲಾ ಹೋಗೈತೆ ಅಂತಾ ಡ್ರೊಪ್ಸ್ ಹಾಕ್ಸಿದ್ವಿ. ಗೌಡರೆ ಯಾಕ್ರೀ ಅಷ್ಟೊಂದು ಬಾರಿ ಕೆರೆತಾವ ಹೋಗಿದ್ರಿ ಅಂದ್ರೆ. ಲೇ ರಾಜಮ್ಮ 6ತಿಂಗಳ ಹಿಂದೆ ಅವರ ಅಪ್ಪನ ತಿಥಿಗೆ ಮಾಡಿದ್ದನ್ನ ತಂದು ಕೊಟ್ಟಿದ್ಲು ಕಲಾ ಅಂದ. ಮತ್ತೆ ರಾಜಣ್ಣನ ವಾಯ್ಸ್ ಹೋಗೈತೆ. ಲೇ ಅದು ಸೀತ ಆದಾಗ ಮಾತ್ರ ಬತ್ತದೆ ಕಲಾ ಅಂದ. ಈಗ ವಜ್ರಮುನಿ ವಾಯ್ಸ್ ಬತ್ತಾ ಇದೆ. ಅಂದ ಸುಬ್ಬ. ಯಾಕಲಾ ಅವನದೊಂದು ಮೆರವಣಿಗೆ ಮಾಡಬೇಕನ್ಲಾ. ಅದನ್ನ ಮಾಡಿದರೆ ಹೆಣ್ಣು ಐಕ್ಳು ಕಲ್ನಾಗೆ ಹೊಡಿತಾರೆ. ಯಾಕಲಾ. ಬರೀ ರೇಪ್ ಆಟೆಯಾ.