ಗೌಡಪ್ಪ ಇನ್ ವಾದ್ಯ ಗೋಷ್ಠಿ.

ಗೌಡಪ್ಪ ಇನ್ ವಾದ್ಯ ಗೋಷ್ಠಿ.

ಸನಬ ಗ್ರಾಮದ ರಂಗಪ್ಪ ಗೌಡ ಒತ್ತಾರೆ ಎದ್ದು ಕೆರೆ ಕಡಿಕ್ಕೆ ಹೋಗಿ ತೀರ್ಥ ಪ್ರಸಾದದ ಕಾರ್ಯ ಕ್ರಮ ಮುಗಿಸಿಕೊಂಡು ಬಂದು ಮನೆಯ ಮುಂದಿನ ಜಗಲಿ ಕಟ್ಟೆ ಮೇಲೆ ಕುಂತ. ಬಲಗೈ ನಾಗೆ ಮೊಟ್ಟು ಬಿಡಿ , ಎಡಗೈ ನಾಗೆ ಕನ್ನಡ ಪೇಪರ್ ಇಟ್ಟಿಕೊಂಡು ಏನೋ ಯೋಚನೆ ಮಾಡುತ್ತಾ ಇದ್ದ. ಏನೋ ಇಲ್ಲದ ತಲೆಗೆ ಏನೋ ಹೊಳದಂಗೆ ಆಗಿ ಪಂಚೆ ಮೇಲೆ ಎತ್ತಿ ಚಡ್ಡಿ ಜೆಬ್ಬಿನಿಂದ ಮೊಬೈಲ್ ತಗೊಂಡು ಬಿಟ್ಟ. ಯಾರಗೋ ಕರೆ ಮಾಡೋಕ್ಕೆ ನಂಬರ್ ಒತ್ತಿ ಕಿವಿ ಹತ್ತಿರ ಇಟ್ಟು ಕೊಂಡ. ಅಕಡಿಕ್ಕೆ ಯಾರೋ ಕಾಲ್ ರೆಸ್ಸಿವ್ ಮಾಡಿದರು ಅನಿಸುತ್ತೆ , ಗೌಡಪ್ಪ " ಲೇ ನಿಂಗ ಬೇಗ ಹಟ್ಟಿ ತವ ಬಾರೋ , ಪೇಪರ್ದಗೆ ಏನೋ ಸುದ್ದಿ ಬಂದದೆ " ಅಂತ ಹೇಳುತ್ತಾ ಕಾಲ್ ಕಟ್ ಮಾಡಿದ.

ದೊಗಲೆ ಚಡ್ಡಿ , ಬಲಗೈ ಸೊಂಟದ ಹತ್ತಿರ ಚಡ್ಡಿ ಇಡಿದು ಕೊಂಡು ಕೊಟ್ಟೇ ಸಿಂಗ ನಿಂಗ " ನಾನು ಯಾರೆಂದು ನಿನ ಕೆಳುವೆಯಲ್ಲ" ಅಂತ ಹಾಡುತ್ತ ಗೌಡಪ್ಪನ ಮನೆ ಕಡೆ ಬಂದ. ಹೆಗಲ ಮೆಲ್ಲೆ ಟವೆಲ್ , ಮೂರು ಪಟ್ಟೇ ವಿಬುತಿ ಹಣೆ ಮೇಲೆ ಬಳಿದ್ದಿದ , ಬಜ್ಜು ಹೊಟ್ಟೆ ಇದ್ದ ವಿಚಿತ್ರ ಆಕಾರದ ಗೌಡಪ್ಪನ ದಿಟ್ಟಿಸಿ ನೋಡುತ್ತಾ " ಹೇಳಿ ಗೌಡರೆ ಏನು ಬರೇಳಿದು , ಏನೋ ಪ್ಯಪೆರ್ ದಾಗೆ ಬಂದದೆ ಅಂದ್ರಲ್ಲ , ಏನ್ ಅದು , ಯಾರಾದರು ನಿಗರಿಕೊಂಡವರ ಹೆಂಗೆ "
" ಲೇ ಬಡ್ಡಿ ಹೈದನೆ , ನೋಡೋ ಇಲ್ಲಿ , ಬ್ಯಾಂಗಲೋರ್ ಆಗೇ ಸಿಂಗಿಂಗು ಕಾಂಪಿಟಿಷನ್ಉ  ಅದೇ ಅಂತ ಬಂದದೆ , ನಾನು ಹೆಸರು ಕೊಡೋಣ ಅಂತ ಇದ್ದೀನಿ "
" ಎಂಟ್ರಿ ಪೀಸು "
" ಹತ್ತು ಸಾವಿರ ಕನಲ್ಲ , ಗೆದ್ದರೆ ಒಂದು ಲಕ್ಶ ಬತ್ತದೆ ಕನಲ್ಲ "
" ಹಣೆ ಬರಹಕೆ ಹೊಣೆ ಯಾರು , ಸರಿ ಪರ್ತಿಸಿಪತು ಮಾಡಿ ಗೌಡರೆ "

ಗೌಡಪ್ಪ ಬ್ಯಾಂಕಿಗೆ ಹೋಗಿ DD ತಗಿಸಿ , ಕಾಂಪಿಟಿಷನ್ ಗೆ ಹೆಸರು ಕೊಟ್ಟು ಬಂದು ಬಿಟ್ಟ . ಕಾಂಪಿಟಿಷನ್ ದಿನ ಕೂಡ ಗೊತ್ತು ಆಯಿತು . ಗೌಡಪ್ಪ ಪ್ರಾಕ್ಟೀಸ್ಉ ಶುರು ಮಾಡಿದ್ದ. ಒತ್ತಾರೆ ಎದ್ದು ಊರಿನ ಕೆರೆದಾಗೆ ನಿಂತು ಪ್ರಾಕ್ಟೀಸ್ಉ ಮಾಡೋಕ್ಕೆ ಡಿಸೈಡ್ ಮಾಡಿದ ಏಕೆ ಅಂದರೆ ಗೌಡತ್ತಮ್ಮ ಯುಗಾದಿ ಗೆ ಬೇಕು ಅಂತ ಹೊಸ ಹೊಲೆ ಹಂಡೆ ಆರು ಸಾವಿರ ಕೊಟ್ಟು ತಂದಿತ್ತು. ಅದರಲ್ಲಿ ನೀರು ತುಂಬಿಸಿ ಪ್ರಾಕ್ಟೀಸ್ಉ ಮಾಡೋಣ ಅಂತ ಗೌಡಪ್ಪ ವಿಚಾರ ಮಾಡಿ ಅದರ ಒಳ್ಳಗೆ ತನ್ನ ಬಜ್ಜು ಮೈ ಸಮೇತ ಹೋಗಿ ಕುಂತ. ಅಮ್ಯಕ್ಕೆ ಹಾಡೋಕ್ಕೆ ಶುರು ಮಾಡಿದ ತನ್ನ ಸುಮದುರ ಕಂಠ ದಿಂದ, ಯಾಕ ಕೇಳುತ್ತಿರ , ಅವನ ಮನೆ ಹಿತ್ತಲಲ್ಲಿ ಕಟ್ಟಿ ಹಾಕಿದ ಕತೆ ಕೂಡ ಓಡಿ ಹೋಗಿತ್ತು , ಅರ್ಥಾಥ ಅಷ್ಟು ಭಯಂಕರ ವಾಗಿ ಇತ್ತು ಅವನ ಕಂಠ. ಗೌಡರಮ್ಮ ಬರಲು ತಗೊಂಡು ಬಂತು. ಗೌಡಪ್ಪನಿಗೆ ಆ ಕಾಳಿ ಅವತಾರ ನೋಡಿ ಕುಂತಲ್ಲೇ ಎಲ್ಲ ಆದ ಹಾಗೆ ಅನಿಸಿತು, ಮೇಲೆ ಹೇಳೋಕ್ಕೆ ಹೋದ ಹೊಟ್ಟೆ ಸಿಕ್ಕಿ ಹಾಕಿ ಕೊಂಡು ಬಿಟ್ಟಿತು. ಗೌಡಪ್ಪ ಸತ್ನಪ್ಪೋ ಅಂತ ಕೂಗಿ ಕೊಂಡ, ಗೌಡರಮ್ಮನ ಬರಲು ಎಟ್ಟು ಬೇರೆ , ಮೇಲೆ ಹೇಳೋಕ್ಕೆ ಆಗದ ಸ್ಥಿತ್ತಿ ಬೇರೆ. ಕೊನೆಗೆ ನಿಂಗ ಹೋಗಿ ವೆಂಡಿಂಗ್ ಮಷೀನ್ ತಂದು ಹಂಡೆ ಕಟ್ಟು ಮಾಡಿ ಗೌಡಪ್ಪ ಮೇಲೆ ಬಾರೋ ಹಾಗೆ ಮಾಡಿದ. ಗೌಡರಮ್ಮ ಹಂಡೆ ಹೋಗಿದಾನ ನೋಡಿ ಗೌಡಪ್ಪನಿಗೆ ಇನ್ನು ನಾಲ್ಕು ಮಡ್ಗ್ತು . ಏನೋ ಮಾಡೋಕ್ಕೆ ಹೋಗಿ ಏನೋ ಆಯಿತು ಅಂತ ಗೌಡಪ್ಪ ಸುಮ್ಕ್ಕೆ ಆಯಿತು.

ಒತ್ತಾರೆ ಎದ್ದು ಕೆರೆ ಕಡಿಕ್ಕೆ ಓತು ಗೌಡಪ್ಪ. ಕೆರೆ ಮಧ್ಯಕ್ಕೆ ಹೋಗಿ ಸೂರ್ಯ ಉದಯ ವಾಗೋ ಕಡೆ ನಿಂತಕೊತು. ಬೆಳ್ಳಿಗೆ ನೆ ಊರಿನ ಮಂದಿ ಎಲ್ಲ ಅಲ್ಲೇ ಕ್ಲೀನ್ಉ ಮಾಡಿಕೊಳೋಕ್ಕೆ ಬರೋದು , ಊರಿನ ಎಮ್ಮೆ ಗಳೆಲ್ಲ ಅಲ್ಲೇ ಬಾತ್ ಮಾಡೋದು . ಸುಮದರು ವಾದ ವಾಸನೆ ಬೇರೆ ಇತ್ತು ಅಲ್ಲಿ ಇಲ್ಲಿ ಗಲೀಜು ಹಾಕಿದರ ಫಲದಿಂದ. ಮೇಲಿನ ಭಾಗವೆಲ್ಲ ನೀರಿಂದ ಮೇಲೆ ಇತ್ತು ಗೌಡಪ್ಪಂದು. ಗೌಡಪ್ಪ ಮತ್ತೆ ಶುರು ಮಾಡಿದ ಕರಕಾಶ ರಾಗವ , ಕೆರೆಲ್ಲಿ  ಬಾತ್ ಮಾಡುತ್ತಾ ಇದ್ದ ಎಮ್ಮೆಗಳೆಲ್ಲ ಗೌಡಪ್ಪನ ಜೊತೆ ತಮ್ಮ ಗಾನವನು ಶುರು ಮಾಡಿದವು , ಊರಿನ ಮಂದಿ ಎಲ್ಲ ಏನು ಬಂತೋ ಈ ವಯನಿಗೆ , ಹಾಳು ಬಿದ್ದು ಹೋಗ ಅಂತ ಶಾಪ ಹಾಕ್ಕಿದರು. ಗೌಡಪ್ಪ ಆಡುತ್ತ ಇದ್ದಾಗ ಆ ಊರಿನ ಟೀಚರ್ ಅಮ್ಮ ಅಲ್ಲೇ ಪಾತ್ರೆ ತೊಳಿಯೋಕ್ಕೆ ಅಂತ ಬಂತು. ಗೌಡಪ್ಪ ಟೀಚರ್ ಅಮ್ಮ ನ ನೋಡಿ ಹೀಗಿ ಜೋರು ಆಗಿ ಆಡೋಕ್ಕೆ ಶುರು ಮಾಡಿದ. ಗೌಡಪ್ಪನ ಚೆಡ್ಡಿ ಒಳ್ಳಗೆ ಏನೋ ನೀರಲ್ಲಿ ಒತ್ತು. ಗೌಡಪ್ಪ ಕೈ ಹಾಕಿ ಅದನ ತೆಗೆಯೋಕ್ಕೆ ಅಂತ ನೋಡಿದ , ಅದು ಬರಲ್ಲಿಲ್ಲ. ಒಳ್ಳಗೆ ಹೋದ ಜೀವ ಸುಮ್ಮನೆ ಇರದೇ ಗೌಡಪ್ಪನ ಗೌಪ್ಯ ಅಂಗಗಾಂಗ ಗಳಿಗೆ ಇಂಜೆಕ್ಷನ್ ಕೊಟ್ಟಿತು. ಗೌಡಪ್ಪ ಉರಿ ತಾಳದೆ ಅಲ್ಲಿಂದ ಓಟ್ಟ ಕಿತ್ತ. ಕೆರೆ ಕೊಡಿ ಮ್ಯಕ್ಕೆ ಹತ್ತೋಕ್ಕೆ ಅಂತ ಹೋದ , ಟೈಟ್ ಆಗಿ ಇರದ ಅವನ ಚೆಡ್ಡಿ ಜಾರಿ ಕೆರೆಗೆ ಬಿತ್ತು. ಇದ್ದನ ನೋಡಿದ ಊರಿನ ಹೆಣ್ಣು ಮಕಳೆಲ್ಲ ಒಂದೇ ಓಟ್ಟ ಕಿತ್ತರು. ಟೀಚರ್ ಅಮ್ಮ ಅಯ್ಯೋ ದರವೇಸಿ ಅಂತ ಬೈದು ಕೊಂಡು ಊರ ಒಳ್ಳಗೆ ಓಡಿತ್ತು. ಗೌಡಪ್ಪ ನಾಚಿಕ್ಕೆ ಇಂದ ಮತ್ತೆ ನೀರಿಗೆ ದುಮುಕ್ಕಿದ.

                                                 (.. ಮುಂದು ವರಿವುದು )
                                                                                    ಬರೆದ ಬಡಪಾಯಿ ,
                                                                                                           ಹರೀಶ್ ಎಸ್ ಕೆ