ಗ್ರಹಚಲನೆಯ ಸಾಪೇಕ್ಷತೆ

ಗ್ರಹಚಲನೆಯ ಸಾಪೇಕ್ಷತೆ

Comments

ಬರಹ

ಚಲನೆಯೇ ಸಾಪೇಕ್ಷ. ಅದಱಲ್ಲಂತೂ ಗ್ರಹಚಲನೆ ಇನ್ನೂ ಸಾಪೇಕ್ಷ. ಒಂದು ಬಿಂದು (ಮೂರ್ತವೋ ಕಾಲ್ಪನಿಕವೋ) ಚಲನೆಯಾಗಿದೆಯೆಂದು ತಿಳಿಸಲು ಅತ್ಯವಶ್ಯ. ಇಲ್ಲವಾದರೆ ಒಂದು ವಸ್ತು ಸ್ಥಾನಪಲ್ಲಟ ಮಾಡಿರುವುದನ್ನು ಅರ್ಥೈಸಲಸಾಧ್ಯ. ಹಾಗಾಗಿ ಗ್ರಹಗಳ ಚಲನೆಯನ್ನು ಅರ್ಥೈಸಲು ಅವುಗಳ ಹಿಂದಿರುವ ನಕ್ಷತ್ರಗಳೇ ಆಧಾರ. ಸೌರಮಂಡಲದ ಗ್ರಹಗಳಿಗೆ ಹೋಲಿಸಿದರೆ ನಕ್ಷತ್ರಗಳು ಸ್ಥಿರ. ನಿಜವಾಗಿ ನಕ್ಷತ್ರಗಳು ಚಲಿಸುತ್ತಿರಬಹುದು. ಭೂಮಿಯಿಂದ ನೋಡುವಾಗ ಬೇಱೆ ಗ್ರಹಗಳು ಕೆಲವೊಮ್ಮೆ ಮುಂದುಮುಂದಾಗಿಯೂ (ಮಾರ್ಗಿ) ಕೆಲವೊಮ್ಮೆ ಹಿಂದುಹಿಂದಾಗಿಯೂ(ವಕ್ರ) ಚಲಿಸುವುದನ್ನು ಕಾಣುತ್ತೇವೆ. ಇಲ್ಲಿಯೂ ಮಾರ್ಗಗತಿ ಅಥವಾ ವಕ್ರಗತಿ ಭೂಮಿಯ ಹಾಗೂ ನಾವು ನೋಡುತ್ತಿರುವ ಗ್ರಹದ ಚಲನೆಯನ್ನು ಆಧರಿಸಿಯೇ ಹೇೞಬೇಕಾಗುತ್ತದೆ. ಹಾಗಾಗಿ ಗ್ರಹಚಲನೆ ಸಂಪೂರ್ಣ ಸಾಪೇಕ್ಷ. ಇಲ್ಲಿ ಒಂದು ಗ್ರಹ ಚಲಿಸುತ್ತಿರುವ ಕೌನಿಕ ವೇಗ ಅದಱ ವೇಗವನ್ನಷ್ಟೇ ಅಲ್ಲದೆ ಭೂಮಿಯ ಕೌನಿಕವೇಗವನ್ನೂ ಅವಲಂಬಿಸಿರುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet