ಗ್ರೀನಿಸ್ ರಾಭಟ್ಸನ್

ಗ್ರೀನಿಸ್ ರಾಭಟ್ಸನ್

ಬರಹ

ಕಥೆ-೨

ಗ್ರೀನಿಸ್ ರಾಭಟ್ಸನ್

ಗ್ರೀನ್ಲ್ಯಾನ್ಡ್ ಎಂಬ ಒಂದು ಊರು. ಆ ಊರಿನಲ್ಲಿ ಗ್ರೀನಿಸ್ ಎಂಬ ೧೬ ವರುಷದ ಬಾಲಕನಿದ್ದ. ಆತ ೧೬ ವರುಷದವನಾದರೂ ಸಹ ಅವನ ಬುದ್ದಿ ವಯಸ್ಸಿಗೆ ಅನುಗುನವಾಗಿ ಸರಿಯಾಗಿ ಬೆಳೆದಿರಲಿಲ್ಲ. ಅವನ ತಂದೆ ರಾಭರ್ಟ್ಸನ್ ಪ್ರಸಿದ್ದ ವಿಗ್ನ್ಯಾನಿ. ಅವನ ತಾಯಿ ಡೀನಾ ಪರ್ಸೊನಾಲಿಟಿ ಡೆವಲೊಪ್ಮೆಟ್ ಉಪಾದ್ಯಾಯನಿ ಆಗಿದ್ದಳು. ಆದರೆ ಆ ಹುಡುಗ ಸೋಮಾರಿಯಾಗಿಯು ಹಾಗು ಆತ್ಮವಿಶ್ವಾಸದ ಕೊರತೆಯಿಂದ ಬಳಲುತಿದ್ದ. ಆ ಹುಡುಗನ ವಯಸ್ಸಿನ ಎಲ್ಲ ಮಕ್ಕಳು ಚೆನ್ನಾಗಿ ಬೆಳೆದು ಕಾಲೇಜಿಗೂ ಹೋಗುತಿದ್ದರು. ಅವರೆಲ್ಲರೂ ಈತನನ್ನು ಪೆದ್ದ ಎಂದು ರೇಗಿಸುತಿದ್ದರು. ಗ್ರೀನಿಸನಿಗೆ ವಿದ್ಯೆಯು ಸರಿಯಾಗಿ ಹತ್ತದೆ ಇದ್ದ ಕಾರನ ಅವನು ಫೇಲಾಗುತ್ತ ಇನ್ನು ಮೂರನೆ ತರಗತಿಯಲ್ಲೆ ಇದ್ದ. ಅವನಿಗೆ ಯಾವ ಪಾತಗಲು ಸರಿಯಾಗಿ ಅರ್ಥವಾಗುತಿಲ್ಲದ್ದರಿನ್ದ ಯಾವ ಟೀಚರು ಪಾಟ ಹೇಳಿ ಕೊದಲು ಮುಂದಾಗುತಿರಲಿಲ್ಲ ಹಾಗು ಅವರೆಲ್ಲರು ಈತನಿಗೆ ಬಯ್ಯುತಿದ್ದರು. ಕಂಪ್ಯೂಟರ್ ಕ್ಲಾಸಿಗೆ ಕೂರಲು ಹೋದರೆ ವಪಾಸ್ ಅವನನ್ನು ಹೊಡೆದು ಕಳಿಸುತಿದ್ದರು. ಇದರಿಂದ ಅವನ ಮನ್ಸಿಗೆ ಬಹಳ ಆಘಾತವಾಗುತಿತ್ತು. ಅವನು ಲೆಕ್ಕದಲ್ಲಿ ಬಹಳ ಹಿಂದೆ ಇದ್ದರಿಂದ ಅವನನ್ನು ಎಲ್ಲರು ಟ್ಯ್ಬ್ಲ್ಟ್ ಎಂದು ಗೇಲಿ ಮಾದುತಿದ್ದರು. ಅವನು ಯಾರೊಂದಿಗು ಬೆರೆಯದೆ ಒಬ್ಬನೆ ಸುಮ್ಮನೆ ಕುಳಿತಿರುತಿದ್ದನು. ಇದನ್ನು ನೋದುತಿದ್ದ ಅವನ ತಾಯಿ ಒಬ್ಬ ಪರಿಚಯದ ಮನೋತಗ್ಯ್ನನ ಹತ್ತಿರ ಕರೆದುಕೊಡು ಹೋಗಿ ಇರುವ ವಿಷಯವನ್ನು ಸರಿಯಾಗಿ ಬಿದಿಸಿ ಹೇಳಿದಳು. ಆಗ ಆ ಮನೋತಗ್ನ್ಯ ಅವಳಿಗೆ ಇವನ ಬಾಲ್ಯದಲ್ಲದ ಅಪಘಾತವೇ ಕಾರನವೆಂದು ಮನವರಿಕೆ ಮಾಡಿದರು. ಅದೇನೆಂದರೆ ಗ್ರೀನಿಸ್ ನು ಇನ್ನೂ ಅವನ ತಾಯಿಯ ಗರ್ಭದಲ್ಲಿದ್ದಾಗ ಕಾರು ಅಪಘಾತವಗಿತ್ತು. ಆಗ ಅವನ ತಂದೆ ಅಸುನೀಗಿದ್ದರು ಮತ್ತು ಅವನ ತಾಯಿಗೆ ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದಿತ್ತು. ಆದ್ದರಿಂದ ಅವನು ಈ ರೀತಿಯಾಗಿದ್ದನೆಂದು ಹೇಳಿದ ಮನೋತಗ್ನ್ಯ ನಂತರ ಅವನ ತಾಯಿಗೆ " ನೀವು ಮನಸ್ಸು ಮಾಡಿದರೆ,ಅಂದರೆ ನಿಮ್ಮ ಚ್ಲಾಸಿನಲ್ಲಿ ಹೆಳಿಕೊಡುವ ರೀತಿ ಈತನಿಗೆ ಆತ್ಮವಿಶ್ವಾಸ ಬರೆಸಿದರೆ ಇವನೂ ಸಹ ಎಲ್ಲ ಮಕ್ಕಳಂತೆ ಬುದ್ದಿಶಾಲಿ ಯಾಗುತ್ತನೆ" ಎಂದನು. ಅದರಂತೆ ಅವನ ತಾಯಿ ಅವನನ್ನು ಹತ್ತಿರ ಕೂರಿಸಿಕೊಂಡು ಹಲವಾರು ನೀತಿ ಕಥೆಗಳನ್ನು, ದೆಸಭಕ್ತರ ಕಥೆಗಳನ್ನು ಹಾಗು ಅವನ ತಂದೆಯ ಯಸೋಗಾತೆಯನ್ನು,ಅವನು ಮಾಡಿದ ಸಂಸೋದನೆಯನ್ನು ಹೇಳಿ, "ನೀನು ಇವರಂತೆ ಆಗಬೇಕು, ನಿನ್ನ ತಂದೆಯ ಹೆಸರನ್ನು ಉಳಿಸಬೇಕು, ನೀನು ಬಹಳ ಬುದ್ದಿವಂತ,ಮಹಾ ಸೂರ, ಮತ್ತು ದೊಡ್ಡವನು. ನೀನು ಯಾವ ಕೆಲಸವನ್ನು ಬೇಕಾದರು ಸುಲಭವಾಗಿ ಮಾಡಬಲ್ಲೆ.ನೀನು ನಿನ್ನ ತಂದೆಯಂತೆಯೆ ಬಹಳ ದೊದ್ದ ವಿಗ್ನ್ಯಾನಿಯಾಗಿ ಜಗತ್ತಿಗೆ ನೀನು ಏನದರು ಸಂಸೋದನೆ ಮಾಡಿ ತೋರಿಸಬೇಕು,ನಾನು ನಿನ್ನ ಸಾಧನೆಗೆ ಬೆನ್ನೆಲುಬಾಅಗಿ ಇರುತ್ತೇನೆ, ಮುನ್ನಡೆ,ಯಾವತ್ತು ಹಿಂದೆ ನೋಡಬೇಡ" ಎಂದೆಲ್ಲಾ ಹೆಳಿ ಅವನ ಆತ್ಮಶಕ್ತಿಯನ್ನು ಜಾಗ್ರತಿಗೊಳಿಸಿದಳು. ಇದರಿಂದ ಆತನಿಗೆ ಬಹಳ ಜೀವನೋತ್ಸಾಹ ಬಂದಂತಾಯಿತು.ಅಂದಿನಿಂದ ಅವನಿಗೆ ಅವನ ತಾಯಿಯೆ ವಿದ್ಯೆ ಹೇಳಿಕೊಡುವ ಗುರುವಾದಳು. ಅದರೆ ಅವನು ಶಾಲೆಯನ್ನು ಬಿಡದೆ ಹಲವಾರು ಚಟುವಟಿಕೆಯಲ್ಲಿ ತೊಡಗಿಕೊಡನು. ಇದನ್ನು ಗಮನಿಸುತ್ತಾ ಬಂದಿದ್ದ ಅವನ ಪ್ರಿಯವಾದ ಶಾಲಾ ಗುರುವಾದ ಡೇವಿಸ್ ನು ಸಹ ಇವನಿಗೆ ಎಲ್ಲಾ ರೀತಿಯ ಸಹಾಯ ಮಾಡಲು ಮುಂದಾದ. ಇದರಿಂದ ಈತನಿಗೆ ಆನೆ ಬಲ ಬಂದಂತಾಯಿತು.ಅವನ ಮನೆಯ ಹಿಂದೆ ಒಂದು ಸನ್ನ ರೂಮಿತ್ತು. ಅದು ಅವನ ತಂದೆ ಸಂಶೋದನೆಗೆ ಉಪಯೋಗಿಸುತಿದ್ದ ರೋಮಾಗಿತ್ತು. ಅಲ್ಲಿ ಹಲವಾರು ಸಂಶೋಧನೆಯ ಹಲವಾರು ವಸ್ತುಗಳಿದ್ದವು ಹಾಗು ಅವನ ತಂದೆ ಉಪಯೋಗಿಸುತಿದ್ದ ಒಂದು ಕಂಪ್ಯೂಟರ್ ಇತ್ತು. ಅವನ ತಂದೆ ಅದರಿಂದ ಬೇರೊಂದು ಗ್ರಹದ ಜೀವಿಯ ಹತ್ತಿರ ಕಮ್ಯುನಿಕೇಟ್ ಮಾದುತಿದ್ದನೆಂದು ಈತನಿಗೆ ಅವನ ತಾಯಿ ಹೆಳಿದರು. ಈ ವಿಷಯ ತಿಳಿದ ಆತ ನಾನು ಅ ಜೀವಿಯ ಹತ್ತಿರ ಮತಾಡಬೇಕೆಂಬ ಆಸೆಯಾಗಿ ಅವನು ಅವನ ಗುರುವಾದ ಡೇವಿಸ್ ನಿಗೆ "ನನಗೆ ಕಂಪ್ಯೂಟರ್ ಹೇಳಿಕೊಡಬೇಕೆಂದು" ಕೇಳಿದಾಗ, ಅವನ ಗುರು ಹೆಳಿಕೊಡಲು ಒಪ್ಪಿದರು. ಈಗ ಗ್ರೀನಿಸ್ ನು ಬಹಳ ಬುದ್ದಿವಂತನಾಗುತ್ತ ಸಾಗಿದನು.ಆತ ಅವನ ತಂದೆಯಂತೆ ಅವನೂ ಪಕ್ಕದ ಗ್ರಹದ ಜೊತೆ ಮಾತನಾಡಲು ಮುಂದಾದನು.ಇದನ್ನು ತಿಳಿದ ಅವನ ತಾಯಿ ಕೋಪಗೊಂಡು ಹೀಗೆ ಹೇಳಿದಳು,"ನೋಡು, ನೀನು ನಿನ್ನ ಅಪ್ಪನ ತರ ದೊಡ್ದ ವಿಗ್ನ್ಯಾನಿಯಗಬೇಕು,ಅದು ನಿನ್ನ ಸ್ವಂತ ಬಲದಿಂದ,ನಿನ್ನ ಸ್ವಂತ ಸಂಶೋಧನೆಯಿಂದ? ಎಂದಳು. ಆಗ ಅವನಿನಿಗೆ ಕಾಲೇಜು ಓದುವ ಮನಸಾಗಿ ಅವನ ಗುರುಗಳಿಗೆ ಸಹಾಯ ಕೇಳಿದನು. ಆಗ ಡೇವಿಸ್ ನು ಒಪ್ಪಿ, ಪ್ರಾಂಶುಪಾಲರ ಹತ್ತಿರ ಹೋಗಿ ಹೀಗೆ ಹೇಳಿದನು, "ಗ್ರೀನಿಸ್ ಈಗ ಮೊದಲಿನ ಥರ ಇಲ್ಲ. ಅವನು ಬಹಲ ಬುದ್ದಿವಂತನಾಗಿದ್ದಾನೆ. ನಾನು ಅವನನ್ನು ಮೊದಲು ಎಲ್ಲಾ ರೀತಿಯಿಂದಲೂ ಟೆಸ್ಟ್ ಮಾಡಿದೆ, ಎಲ್ಲದರಲ್ಲೂ ಉತ್ತೀರ್ಣನಾಗಿದ್ದಾನೆ. ಅವನು ಈಗ ಯವ ಲೆಕ್ಕವನ್ನಾದರು ಈಸಿಯಾಗಿ ಬಿಡಿಸುತ್ತಾನೆ. ಅವನಿಗೆ ಕಂಪ್ಯೂಟರ್ ನಾಲೆಡ್ಜ್ ಇದೆ. ಆದ್ದರಿಂದ ತಾವು ಅವನನ್ನು ಕಾಲೇಜಿಗೆ ನೇರವಾಗಿ ಸೆರಿಸಿಕೊಳ್ಳಬೇಕು" ಎಂದು ಹೆಳಿದನು.
ಆಗ ಆ ಪ್ರಾಂಶುಪಾಲರು ಗ್ರೀನಿಸ್ ಗೆ ಒಂದು ಪ್ರಶ್ನೆ ಪತ್ರಿಕೆಯನ್ನು ಕೊಟ್ಟರು. ೨ ಗಂಟೆ ಸಮಯದಲ್ಲಿ ೧೦೦ ಅಂಕಗಳಿಗೆ ಉತ್ತರಿಸಬೆಕಾಗಿತ್ತು.ಆ ಪ್ರಶ್ನೆಗಳೆಲ್ಲಾ ಹತ್ತನೆ ತರಗತಿಯ ಪ್ರಶ್ನೆಗಳಾಗಿದ್ದವು. ಬಹಳ ಕಸ್ಟಕರವಾಗಿತ್ತು. ಆತನಿಗೆ ಒಂದು ಕಾಯಿಲೆ ಇತ್ತು, ಅದೆನೆಂದರೆ ಅವನಿಗೆ ಕನ್ನಡಕ ಹಾಕದೆ ಇದ್ದರೆ ಕಣ್ಣು ಕಾಣುತ್ತಿರಲಿಲ್ಲ. ಆ ಪ್ರಶ್ನೆ ಪತ್ರಿಕೆಯು ಗಣಿತ, ಕಂಪ್ಯೂಟರ್, ವಿಘ್ನ್ಯಾನ, ಇಂಗ್ಲೀಷ್, ಹಾಗು ಜನರಲ್ ನಾಲೆಡ್ಜ್ ವಿಷಯಗಲಿದ್ದವು. ಆದರೆ ಗ್ರೀನಿಸ್ ನು ಬಹಳ ಕಷ್ಟಪಟ್ಟು ಓದಿ,ಆತ್ಮವಿಶ್ವಾಸದಿಂದ, ಶ್ರದ್ದೆಯಿಂದ ಕಲಿತ ವಿದ್ಯೆ ಅವನಿಗೆ ಉಪಯೋಗವಾಯಿತು. ಅವನು ಈ ಪರೀಕ್ಷೆಯಲ್ಲಿ ತೇರ್ಗಡೆ ಹೊದಿದ. ಅವನ ಬುದ್ದಿವಂತಿಗೆಯನ್ನು ಕಂಡ ಪ್ರಾಂಶುಪಾಲರು ಅಚ್ಚರಿಗೊಂಡರು. ಅವನ ಶ್ರಮಕ್ಕೆ ತಕ್ಕ ಪ್ರತಿಪಲ ಎಂಬಂತೆ ಅವನಿಗೆ ಕಾಲೇಜಿಗೆ ಸೀಟು ಸಿಕ್ಕಿತು. ಇದರಿಂದ ಅವನ ಬದುಕೆ ಬದಲಾಯಿತು. ಅವನು ಕಷ್ಟಪಟ್ಟು ಓದಿ ವಿಗ್ನ್ಯಾನ ಪದವಿಯನ್ನು ಮುಗಿಸಿದನು. ಅವನು ಬಹಳ ಉತ್ಸಾಹದಿಂದ, ಶ್ರದ್ದೆಯಿಂದ, ಆಸಕ್ತಿಯಿಂದ ಅವನ ಪ್ರಿಯ ಗುರುವಾದ ಡೇವಿಸ್ ನ ನೆರವಿನಿಂದ ಅನೇಕ ಸಂಶೋಧನಾ ಕೇಂದ್ರಗಳಿಗೆ ಭೇಟಿ ಕೊಟ್ಟು ಅವನಿಗೆ ಬೇಕಾದ ಅನೇಕ ವಿಷಗಳನ್ನು ಸಂಗ್ರಹಿಸಿದನು. ಅವನ ಛಲ, ಆಸಕ್ತಿ, ಶ್ರದ್ದೆಗೆ ವಾಗ್ದೇವಿ ಮನಸೋತು ಅವನಿಗೆ ಒಲಿದಳು. ಇದರಿಂದ ಅವನು ಎಲ್ಲದರಲ್ಲು ಪ್ರಥಮ ದರ್ಜೆಯಲ್ಲಿ ಪಾಸಾದನು. ಕೊನೆಯದಾಗಿ ಆತ ಕಷ್ಟಪಟ್ಟಿದ್ದ ಫಲದಿಂದ, ಅವನ ಅಮ್ಮನ ಹಾಗು ಅವನ ಗುರುಗಳ ಮಾತು ಅಂದರೆ "ಕಷ್ಟ ಪಟ್ಟರೆ ಫಲ, ಛಲದಿಂದ, ಶ್ರದ್ದೆಯಿಂದ, ಆತ್ಮವಿಶ್ವಾಸದಿಂದ ಏನು ಬೇಕಾದರೂ ಸಾಧಿಸಬಹುದೆಂದು" ಎಂಬ ಮಾತು ಅವನ ಪಾಲಿಗೆ ಬದುಕಿನ ಮಂತ್ರವಾಯಿತು. ಅದನ್ನೇ ಅವನ ಜೀವನದಲ್ಲಿ ಅನುಕರಿಸಿ ಮುಂದೆ ಬಂದು ಕೊನೆಗೆ ಎಲ್ಲರನ್ನು ಮೆಟ್ಟಿ ನಿಂತ. ಮುಂದೊಂದು ದಿನ ಅವನು ನೀರಿನ ಹಾಗು ಗಾಳಿಯ ಮಹತ್ವವನ್ನು ಜಗತ್ತಿಗೆ ಸಾರಿ ವಿಶ್ವದಲ್ಲೆ ಪ್ರಸಿದ್ದ ವಿಗ್ನ್ಯಾನಿಯಾದ. ಅವನ ಅಮ್ಮನ ಕನಸು ನನಸಾಯಿತು. ಅವನ ಅಮ್ಮ ಹಾಗು ಅವನ ಗುರುಗಳು ಎಲ್ಲರೂ ಅವನನ್ನು ಬಹಳವಾಗಿ ಹೊಗಳಿದರು. ಗ್ರೀನಿಸ್ ಗೆ ಅಲ್ಲಿನ ಸರ್ಕಾರ ಅಲ್ಲಿನ ಅತ್ಯಮೂಲ್ಯ ಪ್ರಶಸ್ತಿಯಾದ ’ಗ್ರೀನ್ ಮಿರಾಕುಲರ್’ ಹಾಗು ’ವಿಗ್ನ್ಯಾನ ಗುರು’ಮತ್ತು ’ ಡಕ್ಟರೇಟ್’ ಪದವಿಯನ್ನು ಕೊಟ್ಟಿತು. ಗ್ರೀನಿಸ್ ನು ಜಗತ್ತಿಗೆ ವಿಗ್ನ್ಯಾನದ ಬಗ್ಗೆ ಸಾರಿ ವಿಗ್ನ್ಯಾನಿಗೆಲ್ಲ ಪಾಟ ಹೇಳಿಕೊಡುವಂತಹ, ಉಪಯೋಗವಾಗುವಂತಹ ’ವಿಗ್ನ್ಯಾನ ಸಂಶೋಧನ ತಂತ್ರ’, ಎಫ಼್ಫ಼ೆಕ್ಟಿವ್ ನೆಸ್ ಅಫ಼್ ಸಕ್ಸಸ್’ ಪುಸ್ತಕವನ್ನು ಬರೆದನು. ಅವನು ಅವನ ಅತ್ಮಕತೆಯನ್ನು ಜಗತ್ತಿಗೆ ಬಿಟ್ಟು ಹೋದನು.

------------------------------------------------------------------------------------------------
-ವಿ.ಹೆಚ್.