ಘಾಟ್ಕೊಪರ್ ನಲ್ಲಿ ’ಸ್ಕೈವಾಕ್’ !

ಘಾಟ್ಕೊಪರ್ ನಲ್ಲಿ ’ಸ್ಕೈವಾಕ್’ !

ಬರಹ

ಘಾಟ್ಕೊಪರ್ ನಲ್ಲಿ ’ಮೆಟ್ರೊ ರೈಲ್ ಕೆಲಸ’ ಬಿರುಸಿನಿಂದ ಸಾಗಿದೆ. ಅದಕ್ಕೆ ಹೊಂದಿಕೊಂಡಂತೆ, ’ಸ್ಕೈವಾಕ್’ ರಸ್ತೆಯೂ ಸಹಿತ. ಚಿತ್ರದಲ್ಲಿ ತೋರಿಸಿರುವ ದಾರಿ, ಅಷ್ಟೇನೂ ಅಗಲವಾಗಿಲ್ಲ. ಮುಂಬೈನಗರದಲ್ಲಿ ಪ್ರಯಾಣಿಸುವವರ ರೈಲು ಯಾತ್ರಿಕರಿಗೆ ಈ ವ್ಯವಸ್ಥೆಯಿಂದ, ಓಡಾಡಲು ಜಾಗ ಸಾಲುತ್ತದೆಂದು ನಮಗೆ ಅನ್ನಿಸುತ್ತಿಲ್ಲ !

 

ಕೆಲಸವೇನೋ ಜೋರಾಗಿ ನಡೆಯುತ್ತಿದೆ. ಆದರೆ, ಮೊದಲೇ ಜಾಗವಿಲ್ಲದೆ ಪರಿತಪಿಸುತ್ತಿದ್ದ ಈ ಹೊಸ ವ್ಯವಸ್ಥೆ, ಅದಕ್ಕೆ ತಗುಲಿದ ಖರ್ಚಿಗೆ ಹೋಲಿಸಿದರೆ, ಅದು ಅನಿವಾರ್ಯವಾಗಿತ್ತೆ ಎಂದು ಮುಂಬೈಕರುಗಳಿಗೆ ಅನ್ನಿಸಿದರೆ, ಆಶ್ಚರ್ಯವೇನಲ್ಲ ! ’ಮಳೆಗಾಲ’ ನಿಜವಾಗಿಯೂ ಒಂದು ’ಲಿಟ್ಮಸ್ ಟೆಸ್ಟ್’ ತರಹ. ನೈಜತೆ ಅಲ್ಲಿ ತೋರಿಬರುತ್ತದೆ. ಒಟ್ಟಿನಲ್ಲಿ ಬರೀ ಹಣಸಂಪಾದನೆಯೇ ಎಲ್ಲ ಪಾರ್ಟಿಯವರ ಮನೋಭಾವ ಇರುವುದನ್ನು ನಾವು ಮನಗಂಡಿದ್ದೇವೆ. ಜನಸಾಮಾನ್ಯರ, ವೃದ್ಧರ ಮಕ್ಕಳ, ಮತ್ತು ಕೆಲಸಕ್ಕೆ ಹೋಗುವ ಹೆಣ್ಣುಮಕ್ಕಳಿಗೆ ಬಹುಶಃ ಮೊದಲಿನ ವ್ಯವಸ್ಥೆಯೇ ಉತ್ತಮ ಅನ್ನಿಸಬಹುದೇನೋ !!

 

-ಚಿತ್ರ, ವೆಂಕಟೇಶ್