ಚಾಂದಬೀ ಸರಕಾರ

ಚಾಂದಬೀ ಸರಕಾರ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ.ಚಂದ್ರಶೇಖರ ಕಂಬಾರ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ.೧೫೦.೦೦, ಮುದ್ರಣ : ೨೦೨೧

ಡಾ.ಚಂದ್ರಶೇಖರ ಕಂಬಾರರು ನಂಬಿಕೆಯಲ್ಲಿ ಆಸ್ತಿಕರು. ಕೊನೆಗೂ ಈ ಲೋಕದಲ್ಲಿ ಕೇಡಿನ, ದುಷ್ಟಶಕ್ತಿಗಳ ವಿರುದ್ಧ ಸಾತ್ವಿಕ ಶಕ್ತಿ ಗೆಲ್ಲುತ್ತದೆ ಎಂಬುದು ಅವರ ಪೂರ್ಣ ವಿಶ್ವಾಸ. ಆದರೆ, ಈ ವಿಶ್ವಾಸ ಆಧುನಿಕ ಬದುಕಿನ ಸಂಕೀರ್ಣ ಅನುಭವ, ಕೆಡುಕಿನ ಅಪರಿಮಿತ ಸಾಧ್ಯತೆಗಳಿಗೆ ಕುರುಡಾಗುವುದಿಲ್ಲ. ಸಾತ್ವಿಕ ಶಕ್ತಿಗಳ ಕೊನೆಯ ವಿಜಯದ ಮೆಟ್ಟಿಲೇರುವ ಮೊದಲು ಅನುಭವಿಸಬೇಕಾದ ಸೋಲುಗಳನ್ನು ಕಡೆಗಣಿಸುವುದಿಲ್ಲ. ಚರಿತ್ರೆ ಮತ್ತು ವರ್ತಮಾನ ಮೌಲ್ಯಗಳ ಪರಸ್ಪರ ಸಂಘರ್ಷವನ್ನು ನಿರೂಪಿಸಲು ಡಾ.ಕಂಬಾರರು ಚಾಂದಬೀ ಸರಕಾರದ ಕಥೆಯಾಗಿ, ಮುಖ್ಯಮಂತ್ರಿಯಾಗಿದ್ದಾಗ ದೇವರಾಜು ಅರಸು ಅವರು ಭೂ ಮಸೂದೆ ಕಾಯಿದೆಯನ್ನೂ ಜಾರಿಗೆ ತಂದಾಗ ಉಂಟಾದ ಸಾಮಾಜಿಕ ಸ್ಥಿತ್ಯಂತರವನ್ನು ಬಳಸುತ್ತಾರೆ. ಬಲದೇವ ನಾಯಕ ಆ ತನಕ ಬೆಳೆದು ಬಂದ ಜಮೀನ್ದಾರೀ ಪದ್ಧತಿಯ ಕೊನೆಯ ಕೊಂಡಿ. ಪ್ರೇಯಸಿಯಂತೆ ಆತನ ಮನಗೆದ್ದು ಪತ್ನಿಯಾದವಳು ಚಾಂದಬೀ.

‘ಚಾಂದಬೀ ಸರಕಾರ' ಕಾದಂಬರಿ ಸಮಕಾಲೀನತೆಯ ಸವಾಲುಗಳನ್ನು ಬದಲಾಗುವ ಚರಿತ್ರೆಯ ಸಂಕ್ರಮಣ ಸ್ಥಿತಿಯಲ್ಲಿ ಶೋಧಿಸುತ್ತದೆ. ಭೂ ಮಸೂದೆಯ ಕಾಲದ ಅನುಭವದ ಬಗೆಗಿನ ಅಪರೂಪವಾದೊಂದು ಕಥಾನಕವಿದು. ಎಂದು ಪುಸ್ತಕದ ಬೆನ್ನುಡಿಯಲ್ಲಿ ಬರೆದಿದ್ದಾರೆ ಎಸ್. ಆರ್. ವಿಜಯಶಂಕರ ಇವರು. ಚಂದ್ರಶೇಖರ ಕಂಬಾರರು ಬರೆದ ಕಾದಂಬರಿಯಾದ ಕಾರಣ ‘ಚಾಂದಬೀ ಸರಕಾರ' ಪುಸ್ತಕ ವಿಶೇಷ ಕುತೂಹಲವನ್ನು ಕೆರಳಿಸುತ್ತದೆ.