ಚಾಚಾ ನೆಹರು

ಚಾಚಾ ನೆಹರು

ಕವನ

ಮಕ್ಕಳ ಪ್ರೀತಿಯ ಚಾಚಾ ನೆಹರು

ಜನುಮ ದಿನದ ವಿಶೇಷವು/

ಕೆಂಪಿನ ಗುಲಾಬಿ ನೀಡುತ ಮಗುವು

ಮುಗುಳು ನಗೆಯನು ಬೀರುವುದು//

 

ಮಕ್ಕಳೇ ದೇವರ ಪ್ರಸಾದವೆಂದರು

ಜತನದಿ ರಕ್ಷಿಸಿ ಪೊರೆಯಿರೆಂದರು/

ಮಾನವೀಯತೆಯ ಕಲಿಸುತಲಿ

ಉತ್ತಮ ಗುಣಗಳ ಆಶಿಸುತಲಿ//

 

ನೆಹರೂರವರ ಹುಟ್ಟುಹಬ್ಬವನು

ಮಕ್ಕಳ ದಿನವೆಂದು ಸಾರುತಲಿ/

ಶಾಲೆಗಳಲ್ಲಿ ಸಂಭ್ರಮ ಸಂತಸ

ಮನರಂಜನೆಯ ತೋಷದಲಿ//

 

ಬಣ್ಣ ಬಣ್ಣದ ವೇಷಭೂಷಣ

ಹಾಡು ನೃತ್ಯ ನಾಟಕ ಭಾಷಣ/

ವಿವಿಧ ಸ್ಪರ್ಧೆಗಳ ಹಮ್ಮಿಕೊಳ್ಳುತ

ಬಹುಮಾನ ನೀಡಿ ಅಭಿನಂದಿಸುತ//

 

ಪುಟ್ಟ ಮಕ್ಕಳೆ ನಾಳೆಯ ಪ್ರಜೆಗಳು

ಅಕ್ಕರೆ ಪ್ರೀತಿ ನೀಡುತ ಬೆಳೆಸಿರಿ/

ಶಿಸ್ತು ಸಂಯಮ ಆದರ್ಶಗಳ

ತನುಮನದಲಿ ತುಂಬುತ ಕಲಿಸಿರಿ//

 

ದೇಶದ ಭವಿಷ್ಯದ ಪುಟಾಣಿ ಮಿತ್ರರು

ನಮ್ಮ ಮನೆಯ ಕುಸುಮಗಳು/

ಜೋಪಾನ ಮಾಡಿ ಮಮತೆಯ ನೀಡಿ 

ನಂದನವನದ ಕುಡಿಗಳು ನೋಡಿ//

 

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್