ಚಿಂತನ
ಒಂದು ಹಾದಿ
ಸಾಮಾನ್ಯವಾಗಿ ಭಾಷಣಗಳಲ್ಲಿ ಒಂದು ಮಾತು ನಮಗೆ ಕೇಳಿಬರುತ್ತದೆ. ಅದೆಂದರೆ ಹಿಂದೆಂದಿಗಿಂತಲೂ ಇಂದು ಪ್ರಸ್ತುತ ವಿಚಾರವಾದ ಇಂಥದನ್ನು ಕುರಿತು ಚಿಂತಿಸುವುದು ಅಗತ್ಯವೆಂದು ನನಗೆ ತೋರಿಬಂದಿದೆ ಎನ್ನುವುದು. ಯಾವ ಯಾವುದನ್ನೋ ಕುರಿತು ಮಾತಾಡುವವರು ಅದೇಕೆ ನಿನ್ನೆ ಅದು ಅಷ್ಟೊಂದು ಪ್ರಸ್ತುತವಾಗಿರಲಿಲ್ಲ ಎಂದು ಹೇಳುವುದಿಲ್ಲ. ಅಷ್ಟೇಕೆ, ಈಗಿನ ಮಾತಿನ ಅಗತ್ಯ ಅವರಿಗೆ ಬೀಳದೆ ಇದ್ದಿದ್ದರೆ ಅವರು ಇಂದು ಆಡಿದ ಮಾತನ್ನೂ ಆಡುತ್ತಿರಲಿಲ್ಲ ಎನ್ನುವುದು ಮಾತ್ರ ಸತ್ಯ. ಹೀಗೆ ಮೂರುಕಾಸಿಗೂ ಬೆಲೆಯಿರದ ಚಿಂತನೆಗಳನ್ನು ನಾವು ಪುಂಖಾನುಪುಂಖವಾಗಿ ಉಚ್ಚರಿಸುತ್ತ ಇರುತ್ತೇವೆ ಮಾತ್ರವಲ್ಲ, ನಮ್ಮ ಮಾತುಗಳನ್ನು ಕೇಳುವವರ ಕಿವಿಗಳಿಗೆ ಹಾದಿ ತಪ್ಪಿಸುವ ಚಿಂತನೆಗಳನ್ನು ಸುರಿಯುತ್ತಿರುತ್ತೇವೆ.
ಈ ಏನನ್ನಾದರೂ ಕುರಿತು ಚಿಂತಿಸುವುದು ಅಗತ್ಯವೆಂಬ ಮಾತನ್ನು ತಾವೋ ಬಲ್ಲ ಯಾರೊಂದಿಗಾದರೂ ಹೇಳಿದರೆ ಫಕ್ಕನೆ ನಕ್ಕುಬಿಟ್ಟಾರು. ಕಾರಣ ತಾವೋ ಎನ್ನುವುದು ವಿಶ್ವವನ್ನು ಕುರಿತ ಅರಿವು, ಅತ್ತಲಿನ ಹಾದಿ, ಅದರ ಬಗ್ಗೆ ಚಿಂತಿಸುವುದಲ್ಲ. ಇದರ ಹಾದಿಯಲ್ಲಿ ನಡೆಯುವವರು ತಮ್ಮ ಬದುಕನ್ನು ಈ ಪ್ರಕ್ರಿಯೆಯಲ್ಲಿ ಬದುಕಲು ಹಚ್ಚಿಕೊಂಡಿರುತ್ತಾರೆ. ತಾವೋ ಎನ್ನುವುದು ಜ್ಞಾನವೃದ್ಧ ಮಂದಿ ಕೂತು ಚರ್ಚಿಸಿದ ವಿಚಾರ. ಅದಕ್ಕೆ ತಾವೋ ಎಂಬ ಹೆಸರನ್ನು ಕೊಟ್ಟಿದ್ದು ಅನಂತರ ಅದರ ಬಗ್ಗೆ ವಿಚಾರ ಮಾಡಿದ ಹಾನ್ ವಂಶದ ಚರಿತ್ರಕಾರನೊಬ್ಬ (ಊಚಿಟಿ ಜಥಿಟಿಚಿsಣಥಿ - ೨೦೬ ಃ.ಅ.ಇ. ಣo ೨೨೦ ಅ.ಇ.). ಖಿಚಿo ಖಿe ಅhiಟಿg, ಅಂದರೆ "ಖಿhe ಃooಞ oಜಿ ಣhe Pಡಿoಛಿess oಜಿ Poತಿeಡಿ." ಶಕ್ತಿಯ ಪ್ರಕ್ರಿಯೆಯ ಪುಸ್ತಕ. ಈ ಶಕ್ತಿಯ ಪ್ರಕ್ರಿಯೆಯ ಪುಸ್ತಕ ಎನ್ನುವುದು ಹಾಗೆ ಸಂಕಲಿಸಲ್ಪಟ್ಟ ತಾವೋ ಚಿಂಗ್ ಮತ್ತು ತೇವ್ ಚಿಂಗ್ ಎಂಬ ಎರಡು ಪುಸ್ತಕಗಳು ಕೂಡಿದ ಆಧಾರ ಗ್ರಂಥ. ಇವು ಯುದ್ಧನಿರತ ರಾಜ್ಯಗಳ ಕಾಲದಲ್ಲಿ ಹುಟ್ಟಿಕೊಂಡ ತಾತ್ವಿಕ ಜಿಜ್ಞಾಸೆಗಳು ಮತ್ತು ಕಂಡುಕೊಂಡ ಉತ್ತರಗಳು. ಕನ್ಫೂಷಿಯಸ್ನ ಮಾರಲಿಸ್ಟಿಕ್ ತತ್ವಗಳಿಗೆ ವಿರುದ್ಧವಾಗಿ ತಾವೋ ಮನುಷ್ಯನ ಎಲ್ಲ ವಿಷಮ ಸ್ಥಿತಿಗಳಿಗೂ ಅವನು ನಿಸರ್ಗಾನುಸಾರಿಯಾಗಿ ವಿಶ್ವಾನುಸಾರಿಯಾಗಿ ಇಲ್ಲದಿರುವುದೇ ಕಾರಣವೆಂದು ಹೇಳುತ್ತದೆ.
ಯುದ್ಧದ ಕಾರಣಗಳನ್ನು, ಪರಿಣಾಮಗಳನ್ನು ಗಮನಿಸಿ ಹಳುವುದಾದರೆ ತಾವೋ ಮನುಷ್ಯನ ಮನಸ್ಸು ಕಂಡುಕೊಂಡ ಅತ್ಯಂತ ಸಂಗತವಾದ ಜೀವನಕ್ರಮ ಎಂದು ಹೇಳಬಹುದು. ಇಲ್ಲಿ ಸೃಷ್ಟಿಯಿದೆ-ಸೃಷ್ಟಿಕರ್ತನಿಲ್ಲ. ಶೂನ್ಯವಿದೆ-ವಿಕಾರ ತುಂಬಿದ ಮನಸ್ಸಿಲ್ಲ. ಇದರಲ್ಲಿ ವ್ಯಕ್ತವಾಗುವ ಶಕ್ತಿಯು ಮನುಷ್ಯನ ಪ್ರವೇಶವಿಲ್ಲದೆ ಉದ್ಭವವಾಗುವ ತನ್ನೊಳಗಿನ ಚೈತನ್ಯ. ಇದರ ಶಕ್ತಿ ಯಾವನೊಬ್ಬ ತಾವೋ ಅನುಸಾರಿಯಾಗಿ ಬದುಕುವ ಪ್ರಕ್ರಿಯೆಯಲ್ಲಿದೆ. ಕಡೆಯದ ಕಾಷ್ಠ ಮತ್ತು ತುಂಬಿರದ ಬಟ್ಟಲು ಇಲ್ಲಿನ ಬಹು ಮುಖ್ಯವಾದ ರೂಪಕಗಳು.
ಉದಾತ್ತ ಗುಣಕ್ಕೆ ಖುಷಿಪಡು/ ವಿಶ್ರಮಿಸು/ಉರುಳುಗಳ ಹೆಣೆಯುವುದನ್ನು ನಿಲ್ಲಿಸು/ಅದು ನಿನ್ನನ್ನೆಲ್ಲಿಗೊಯ್ಯುವುದೋ/ ಹಿಂಬಾಲಿಸು ಅಲ್ಲಿಯವರೆಗೂ/ ಹಾಗೇ/ ಒರಗಲು ಜಾಗ ಹುಡುಕಿ ಒರಗಿಕೋ ಎನ್ನುವ ತಾವೋ ಇಂದಿನ ವೇಗ ಸಂಸ್ಕೃತಿಯ ಉಬ್ಬಸರೋಗಕ್ಕೆ ವಿಶ್ವದತ್ತ ದಿವ್ಯೌಷಧಿ.
ಯುದ್ಧದಾಹಿ, ಅಧಿಕಾರದಾಹಿ, ಧನದಾಹಿಗಳು, ತರತಮವಾದಿಗಳು ಹೀಗೆ ಕಂಟಕರೆಲ್ಲರ ವಂಶಗಳು ದಿನದಿನಕ್ಕೂ ವೃದ್ಧಿಯಾಗುತ್ತಿರುವಾಗ ಕಿವಿಗಳಿಗೆ, ತನ್ಮೂಲಕ ಮನಸ್ಸಿನ ಒಳಕೋಣೆಗಳಿಗೆ ತಲುಪಬೇಕಾದದ್ದು ತುಂಬಿದ ತಾವೋದ ಖಾಲಿ ಬಟ್ಟಲಿನ ವಿವೇಕ, ಹಿಂದನರಿಯದದು ಮುಂದನರಿಯಬಲ್ಲದೇ ಎಂಬ ಅಲ್ಲಮನ ವಿವೇಕ. ಈ ವಿವೇಕಮಧು ಕೊಡಗಟ್ಟಲೆ ನಮ್ಮ ಮುಂದಿದೆ.
ಆಸೆ ಪಡೋದನ್ನ ನಿಲ್ಲಿಸು/ ಸಂಚು ಮಾಡೋದನ್ನ ತಡೆ/ ಬಟ್ಟಲಲ್ಲಿರುವುದನ್ನು ಸುಮ್ಮನೆ ತಗೋ/ಲಿ ಪೋ ಒಬ್ಬ ಸಂತ ಎಂದು ಹೇಳಬೇಡ/ ಲಿಯು ಲಿಂಗ್ನ ಸಮಾಧಿಯ ಕುರಿತು ಮಾತಾಡಬೇಡ/ ಮದಿರೆ ಅವರ ಗೋರಿಗಳಲ್ಲಿ ಇಳಿಯುವುದಿಲ್ಲ ಎನ್ನತ್ತದೆ ತಾವೋ. ನಿಜ. ಇರುವಾಗಲೇ ಸರಿ ಸಂಭ್ರಮಿಸಬೇಕಾದದ್ದು ಬದುಕು.