ಚಿಕಾಗೋ ನಗರದ, ’ಗ್ಲೋಬಲ್ ಮಾರುಕಟ್ಟೆ,’ ಯಲ್ಲಿ, ತರಕಾರಿ ಹಣ್ಣು-ಹೂಗಳ ಜೊತೆಯಲ್ಲಿ, ತೆಂಗಿನ ಕಡ್ಡಿಯ ಕಸಬರಿಗೆ ಲಭ್ಯ !

ಚಿಕಾಗೋ ನಗರದ, ’ಗ್ಲೋಬಲ್ ಮಾರುಕಟ್ಟೆ,’ ಯಲ್ಲಿ, ತರಕಾರಿ ಹಣ್ಣು-ಹೂಗಳ ಜೊತೆಯಲ್ಲಿ, ತೆಂಗಿನ ಕಡ್ಡಿಯ ಕಸಬರಿಗೆ ಲಭ್ಯ !

ಬರಹ

ಹಾಗೇ ಚಿಕಾಗೊನಗರದಲ್ಲಿ ಅಲ್ಲಿ-ಇಲ್ಲಿ ಸುತ್ತಿದಮೇಲೆ, ಮನೆಗೆ ವಾಪಸ್ಸಾಗುವ ಮೊದಲು, ’ಗ್ಲೋಬಲ್ ಮಾರ್ಕೆಟ್ ’, ಗೆ ಹೋಗುವ ವಾಡಿಕೆ. ಇಲ್ಲಿ ಚಕ್ಕಲಿ ತುಂಬಾಚೆನ್ನಾಗಿರುತ್ತೆ. ಸೀಮೆಬದನೆಕಾಯಿಯನ್ನು ಹೋಲುವ ತರಕಾರಿ ಅತಿ-ರುಚಿಕರ ! ನಮ್ಮ ಭಾರತೀಯಗೆಳೆಯರು ತಮ್ಮ ಸ್ನೇಹಿತರಿಗೂ ತರಕಾರಿ, ಸಾಮಾನುಗಳನ್ನು ಖರೀದಿಸುತ್ತಾರೆ. ಮೊದಲೇ ಫೋನ್ ಮಾಡಿ ಏನೇನುಬೇಕು ಎನ್ನುವ ಪಟ್ಟಿ ತಯಾರಿಸುತ್ತಾರೆ. ಮತ್ತೆ ಈ ಮಾರ್ಕೆಟ್ ಗೆ ಭೇಟಿಕೊಟ್ಟಾಗ ಮತ್ತೊಬ್ಬರ ಸರದಿ ! ಒಟ್ಟಿನಲ್ಲಿ ಭಾರತೀಯರು ಇಲ್ಲಿಯಾದರೂ ಅನ್ಯೋನ್ಯವಾಗಿರುವಂತೆ ತೋರಿಬಂತು !

ಸರಿ. ನಾವು ಚಿಕಾಗೋನಗರದ ’ಗ್ಲೋಬಲ್ ಮಾರುಕಟ್ಟೆ,’ ಗೆ ನುಗ್ಗಿದೆವು. ವಿಶ್ವದ ಸಮಸ್ತ-ದೇಶಗಳ ಸಾಮಾನುಗಳು, ತರಕಾರಿಗಳು, ತಿಂಡಿತಿನಸುಗಳು, ಆಹಾರ ಪದಾರ್ಥಗಳು, ಕಾಸ್ಮೆಟಿಕ್ಸ್, ಕಟ್ಲರಿ, ದಿನಸಿ-ಸಾಮಾನುಗಳು, ಔಷಧಿಸಾಮಗ್ರಿಗಳು, ಹಣ್ಣು-ಹಂಪಲುಗಳು ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತವೆ. ಭಾರತದೇಶದ ಸಾಮಾನುಗಳ ಜೊತೆಗೆ ಕಸಬರಿಗೆಗಳೂ ಸಿಗುತ್ತವೆ. ಅವನ್ನು ಸ್ವಲ್ಪ ಎತ್ತರದಲ್ಲಿ ಇಟ್ಟಿದ್ದಾರೆ. ತಕ್ಷಣಕಣ್ಣಿಗೆಬೀಳುವುದು ಕಷ್ಟ. ಗಟ್ಟಿನೆಲಗಳನ್ನು ತೆಂಗಿನಕಡ್ಡಿಗಳಿಂದ ಮಾಡಿದ ಕಸಬರಿಗೆಗಳಲ್ಲಿ ಕಸ-ಗುಡಿಸುವ ಕ್ರಿಯೆ ನನಗಂತೂ ಅತಿ-ಪ್ರಿಯ. ದನದ ಕೊಟ್ಟಿಗೆಯ ಕಲ್ಲು ಚಪ್ಪಡಿಯ ಅತಿ-ಗಟ್ಟಿನೆಲವನ್ನು ಗುಡಿಸಿ ಚೊಕ್ಕಟಮಾಡುವುದಕ್ಕೆ ತೆಂಗಿನಕಡ್ಡಿಗಳಿಂದ ಮಾಡಿದ ಕಸಬರಗೆಗಳಿಗಿಂತ ಉತ್ತಮ ಪರಿಕರವಿಲ್ಲ, ಎಂದು ನನ್ನ ನಂಬುಗೆ !

-ಚಿತ್ರ, ನಾನೇ ತೆಗೆದದ್ದು.