ಚಿಣ್ಣರೆಲ್ಲ ಬನ್ನಿರೆಲ್ಲ..

ಚಿಣ್ಣರೆಲ್ಲ ಬನ್ನಿರೆಲ್ಲ..

ಕವನ

ಚಿಣ್ಣರೆಲ್ಲ ಬನ್ನಿರೆಲ್ಲ

ಶಾಲೆಯತ್ತ ಹೋಗುವಾ

ಶಾಲೆಯನ್ನು ಸೇರಿ ನಾವು

ಪಾಠವನ್ನು ಕಲಿಯುವಾ.....||

 

ಚಿಣ್ಣರೆಲ್ಲ ಬನ್ನಿರೆಲ್ಲ

ಕೈತೋಟಕೆ ಹೋಗುವಾ

ಕೈತೋಟವ ಸೇರಿ ನಾವು

ಸಸಿಯ ನೆಟ್ಟು ಬೆಳೆಸುವಾ.....||

 

ಚಿಣ್ಣರೆಲ್ಲ ಬನ್ನಿರೆಲ್ಲ

ಬಯಲತ್ತ ಓಡುವಾ

ಬಯಲಲ್ಲಿ ಒಟ್ಟುಗೂಡಿ

ಚೆಂಡಿನಾಟ ಆಡುವಾ.....||

 

ಚಿಣ್ಣರೆಲ್ಲ ಬನ್ನಿರೆಲ್ಲ

ಕೈ ಕೈ ಹಿಡಿಯುವಾ

ಕೈ ಕೈ ಹಿಡಿದು ಸುತ್ತ

ನೃತ್ಯವನ್ನು ಮಾಡುವಾ....||

 

ಚಿಣ್ಣರೆಲ್ಲ ಬನ್ನಿರೆಲ್ಲ

ಸಾಲಾಗಿ ನಿಲ್ಲುವಾ

ಸಾಲಾಗಿ ನಿಂತು ನಾವು

ರಾಷ್ಟ್ರಗೀತೆ ಹಾಡುವಾ....||

 

ಚಿಣ್ಣರೆಲ್ಲ ಬನ್ನಿರೆಲ್ಲ

ಮನೆಯ ಕಡೆಗೆ ತೆರಳುವಾ

ಮನೆಯ ಸೇರಿ ಸ್ನಾನ ಮಾಡಿ

ಮಗ್ಗಿಯನ್ನು ಓದುವಾ....||

 

-ರತ್ನಾ ಕೆ.ಭಟ್ ತಲಂಜೇರಿ

 

ಚಿತ್ರ್