ಚುಟುಕು
ಬರಹ
ಶವ"ಸಂಸ್ಕಾರ"
ಶವ ಸಂಸ್ಕಾರ
ಬರೀ ದೇಹ ಊಳೂವ ಕ್ರಿಯೆಯಲ್ಲ,
ಶವವಾಗಿರುವಾತನ ಬದುಕ್ಕಿದ್ದಾಗಿನ ಸಂಸ್ಕಾರ ತಿಳಿಸುವ ಕ್ರಿಯೆಯೂ ಹೌದು!!.
ಪ್ರಕೃತಿ-ವಿಕೃತಿ
ಸುಂದರವಾದ ಕೃತಿ
ಈ ಪ್ರಕೃತಿ.
ಇದರ ರಕ್ಷಣೆಯೆ ನಮ್ಮ ಸಂಸ್ಕೃತಿ
ಆದರೂ ನಾವು ಮಾಡುವುದೆಲ್ಲಾ ವಿಕೃತಿ
ಹೀಗೆಯೇ ಸಾಗಿದರೆ ಇದರ ಗತಿ
ನಮಗೇ ವಿನಾಶ ಕಟ್ಟಿಟ್ಟ ಬುತ್ತಿ
ನಾವೆನೇ ಮಾಡಿದರೂ,
ಬರಬೇಕು ನಿಸರ್ಗಕ್ಕೆ ಸುತ್ತಿ-ಸುತ್ತಿ
ಈಗಲಾದರು ನೋಡಬಾರದೆ ನಾವೆಲ್ಲಾ ಕಣ್ಣೆತ್ತಿ.
ಮನುಜ
ಓ ಮನುಜ,
ಖಾಲಿಯಾಯಿತೆ ನಿನ್ನ ಬುದ್ದಿ ಕಣಜ
ತಿದ್ದಿ-ತೀಡಿ ಬುದ್ದಿ ಹೇಳಿದರೂ ಸಹಜ
ಲದ್ದಿ ತಿಂದ ಬುದ್ದಿ ಬಿಡನು ಈ 'ಕಲಿ'ರಾಜ
ಹೇಳುವುದೆಲ್ಲ ಬರೀ ತತ್ವಜ್ಞಾನ ಈ ಸಮಾಜ
ನಮ್ಮ ಈಗಿನ ಸ್ಥಿತಿಯಲ್ಲೆ ಅಡಕವಾಗಿದೆ..ನುಡಿದದ್ದನ್ನ ನಡೆಸಿದ ನಿಜ!!!