ಚುಪ್ಪಾ ಚೂರುಗಳು...
ಕವನ
ಚುಪ್ಪಾ ಚೂರುಗಳು...
-೧-
ನನಗೆ
ಸಂಬಳ ಬಂದಾಗ
ನಗ
ಬೇಕು
ಎನ್ನುತ್ತಾನೆ...
ನಾನು
ಬಿದ್ದು ಬಿದ್ದು ನಗುತ್ತೇನೆ!
********************
-೨-
'ದುಡ್ಡಿಗೆ
ನಿನ್ನ ಬಳಿ
ಬೇಡ
ಬೇಕೆ?'
ಎನ್ನುತ್ತಾನೆ'...
ನಾನು
ಬೇಡ
ಎನ್ನುತ್ತೇನೆ!
**************
-೩-
ಬಹಳ ದಿನಗಳಿಂದ
ನನ್ನ ಇವನ ನಡುವೆ
ಮಾತು ಕತೆ
ಇಲ್ಲವಾಗಿದೆ...
ಅದಕ್ಕೆ ಬದಲಾಗಿ
ಚುಟುಕ, ಹನಿಗವನ
ಮತ್ತು ಕವಿತೆಗಳಿದೆ...!
-ಮಾಲು