ಚೆಂಬೆಳಕಿನ ಕವಿಯ ಜನ್ಮದಿನ

ಚೆಂಬೆಳಕಿನ ಕವಿಯ ಜನ್ಮದಿನ

ಧಾರವಾಡ ಕನ್ನಡಕ್ಕಿತ್ತ ಕವಿರತ್ನಗಳಲ್ಲಿ ಚೆನ್ನವೀರ ಕಣವಿ ಕೂಡ ಒಬ್ಬರು. ನವೋದಯದ ‘ನಡುಹಗಲ’ಕಾಲದಲ್ಲಿ ಕವಿಯಾಗಿ ಪ್ರಕಟಗೊಂಡವರು ಚೆನ್ನವೀರ ಕಣವಿ ಎಂದು ಎಚ್‍.ಎಸ್‍.ವೆಂಕಟೇಶ ಮೂರ್ತಿಗಳು ಒಂದೆಡೆ ಅವರ ಕಾವ್ಯೋದ್ಯಗದ ಕಾಲವನ್ನು ಗುರುತಿಸುತ್ತಾರೆ. ಕುವೆಂಪು, ಬೇಂದ್ರೆ, ಪು.ತಿ.ನ, ಮಧುರಚೆನ್ನ ಇವರುಗಳ ಪ್ರಭಾವದಲ್ಲಿ ನವೋದಯ ಕಾವ್ಯ ತನ್ನ ಕಸುವನ್ನು ಪಡೆದುಕೊಂಡು ವೃದ್ಧಿಸುತ್ತಿದ್ದ ಸಮಯದಲ್ಲೇ ಕಣವಿ ಕನ್ನಡ ಕಾವ್ಯ ಲೋಕವನ್ನು ಪ್ರವೇಶಿಸುತ್ತಾರೆ. ಧಾರವಾಡದ ಮಣ್ಣಿನ ಸೊಗಡನ್ನು ಹೊತ್ತುಕೊಂಡು ಕಾಲದೆಲ್ಲ ಪ್ರಭಾವಗಳ ನಡುವೆಯೂ ತಮ್ಮತನದ ಛಾಪನ್ನು ಒತ್ತುತ್ತಾರೆ. ಇವರನ್ನು  ‘ಚೆಂಬೆಳಕಿನ ಕವಿ’, ‘ಸಮನ್ವಯದ ಕವಿ’ ಎಂದೆಲ್ಲ ಕನ್ನಡ ಕಾವ್ಯ ಪ್ರಪಂಚ ಗುರುತಿಸಿ ಆದರಿಸಿ ಪ್ರೀತಿಸಿದೆ. ಇವರ ಕವನಗಳು ಭಾವಗೀತೆಗಳಾಗಿ ಕನ್ನಡ ರಸಿಕರ ಮನಗಳಿಗೆ ರಸದೌತಣ ನೀಡಿದೆ. ಇಂದು ಚೆನ್ನವೀರ ಕಣವಿಯವರ 85 ನೆಯ ಜನ್ಮದಿನ. ಈ ಸಂದರ್ಭದಲ್ಲಿ ಇತ್ತೀಚೆಗೆ ಧಾರವಾಡದಲ್ಲಿ ನಡೆದ ಸಾಹಿತ್ಯ ಸಂಭ್ರಮದಲ್ಲಿ ಎಚ್.ಎಸ್.ವೆಂಕಟೇಶಮೂರ್ತಿ ಮತ್ತು ಚೆನ್ನವೀರ ಕಣವಿಯವರ ಮಾತುಕತೆ ಹಾಗೂ ಅವರ ಜನಪ್ರಿಯ ಭಾವಗೀತೆ ‘ಒಂದು ಮುಂಜಾವಿನಲಿ..’ ಇವೆರಡರ ಲಿಂಕ್‍ ಕೆಳಗೆ ಕೊಟ್ಟಿದ್ದೇನೆ. ನಮ್ಮ ನಡುವಿರುವ ಮಿದುಮಾತಿನ, ಮುಗ್ಧನಗುವಿನ ಕವಿಗೆ ಶುಭಾಷಯಗಳನ್ನು ಕೋರೋಣ.

 

ಹೆಚ್‍ ಎಸ್‍. ವೆಂಕಟೇಶಮೂರ್ತಿ ಮತ್ತು ಚೆನ್ನವೀರ ಕಣವಿ ಮಾತುಕತೆ: http://www.youtube.com/watch?v=Yysnwi96tT0

ಒಂದು ಮುಂಜಾವಿನಲಿ.. ಭಾವಗೀತೆ  : http://www.youtube.com/watch?v=l1inXiJC-b8

Comments

Submitted by prasannakulkarni Fri, 06/28/2013 - 17:02

"ಹೂವು ಹೊರಳುವವು ಸೂರ್ಯನ ಕಡೆಗೆ..."ಯ ಕವಿ ಕಣವಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಸಮಯೋಚಿತ ಲೇಖನ... ಕೊ೦ಡಿಗಳಿಗೆ ಧನ್ಯವಾದಗಳು ಹೇಮಾ ಅವರೇ...