ಚೆಲುವೆಯ ಹಾದಿ...

ಚೆಲುವೆಯ ಹಾದಿ...

ಕವನ

ವೃಷ್ಟಿಯಂತೆಯೆ ಸುರಿದ ಪುಷ್ಪವು

ನಿನ್ನ ಬರುವನು‌ ಸಾರಿದೆ

ಸೃಷ್ಟಿ ಸುಂದರ ಚೆಲುವೆ ಹಾದಿಗೆ

ಹೂವ ಹಾಸಿಗೆ ಹಾಸಿದೆ||

 

ಮೇಘ ರಾಶಿಯು ತಂಪು ಹನಿಗಳ

ಸುರಿಸಿ ಮಡಿಯನು ಮಾಡಿದೆ

ಸೋಗೆಯಲ್ಲವು ಬೀಸಿ ಚಾಮರ

ಸೊಂಪು ಗಾಳಿಯ ಬೀಸಿದೆ||

 

ಹಕ್ಕಿ ಇಂಚರ ಹೊಮ್ಮಿಸುಸ್ವರ

ಸ್ವಾಗತಿಸುತಲಿ ಹಾಡಿವೆ

ಚುಕ್ಕಿಪುಂಜವು ಹರಸಿನಿಲ್ಲುತ

ಶುಭವ ಚೆಲುವೆಗೆ ಕೋರಿವೆ||

 

ಬೆಟ್ಟ ಗುಡ್ಡವು ನದಿಯು ತೊರೆಗಳು

ಇವಳ ನೋಡುತ ನಲಿದಿವೆ

ಇತ್ತ ನವಿಲುವು ಗರಿಯ ಬಿಚ್ಚುತ

ಇವಳ ಅಂದಕೆ ಕುಣಿದಿವೆ||

 

ನೆಟ್ಟ ದೃಷ್ಠಿಯು ಚೆಲುವೆಯಲ್ಲದೆ

ಬೇರೆ ಏನನು ನೋಡದು

ಪಟ್ಟು ಹಿಡಿದಿದೆ ಮನವು ಏಕೋ

ಇವಳ ಸಂಗವ ಬಯಸಿದೆ||

 

-*ಶ್ರೀ ಈರಪ್ಪ ಬಿಜಲಿ* 

 

ಚಿತ್ರ್