ಚೈತ್ರೋದಯ ನೃತ್ಯ ಗೀತೆ

ಚೈತ್ರೋದಯ ನೃತ್ಯ ಗೀತೆ

ಕವನ

ಬನ್ನಿ ಬನ್ನಿ ರಿ ಬನ್ನಿ ಚಿಣ್ಣರೆ

   ಹಾಡಿ ಕುಣಿಯುವ ಬನ್ನಿರಿ

ಸುಗ್ಗಿ ಬಂದಿದೆ ಹಿಗ್ಗು ತಂದಿದೆ

   ನೋಡಿ ನಲಿಯುವ ಬನ್ನಿರಿ

 

‌ಸುಗ್ಗಿ ಸಂಜೆಯ ಹೊನ್ನ ಹಬ್ಬಕೆ

   ಜಗವೆ ನೆರೆದಿದೆ ಬಯಲ ಲಿ

ಯಾರೂ ಕಾಣದ ‌ಸ್ವರ್ಗ ತೆರೆದಿದೆ

   ಇಲ್ಲೆ ಕ್ಷಣ ಕ್ಷಣದೊಡಲ ಲಿ

 

ಕಣ್ಣು ತೆರೆದೊಡನೆಲ್ಲ ನಮ್ಮದೆ

    ಭವ್ಯ ಬದುಕಿನ ಐ‌ಸಿರಿ

ಎಲ್ಲೂ ಚಿಮ್ಮುವ ಸುಗ್ಗಿ ‌ಸಡಗರ

   ಎಲ್ಲೆ ಇಲ್ಲದ ಅಚ್ಚರಿ

 

ಬಿಚ್ಚಿ ರೆಕ್ಕೆಯ ಬಾನಸೀಮದಿ

   ಹುಚ್ಚು ಹಿಗ್ಗಿನೊಳಾಡುವ

ಮಣ್ಣ ಬದುಕಲಿ ಕಣ್ಣು ತೆರೆಯುವ

   ದಿವದ ‌ಸಿರಿಮೊಗ ನೋಡುವ

 

ಭುವನದಗಲಕು ವ‌ಸು ವಸಂತದ

   ವಿಶ್ವರೂಪವೆ ತೆರೆದಿದೆ

ಬಣ್ಣ ಬೆಳಕೊಳನಂತ ‌ಸಂತ‌ಸ

   ಸಾಗರವೆ ಮೊರೆಮೊರೆದಿದೆ

 

ಬನ್ನಿ ಚಿಲಿಪಿಲಿ ಚಿಣ್ಣರೆಲ್ಲರು

   ..ಹಾರಿ ಬಯಲಿಗೆ ಬನ್ನಿ ರಿ

ಎದೆಯ ಬಾಗಿಲ ತೆರೆದು ಚೈತ್ರೋ-

    ದಯಕೆ ‌ಸ್ವಾಗತವೆನ್ನಿರಿ!

ಚಿತ್ರ ಕೃಪೆ: ಅಂತರ್ಜಾಲ

ಚಿತ್ರ್