ಚೋರ ಕಿಶೋರ
ಕವನ
ಚೋರ ಕಿಶೋರ
ಕಳ್ಳ ಹೆಜ್ಜೆಯಿಟ್ಟು ಬಂದ ಗೋಪೀಲೋಲ ನಂದಕಿಶೋರ |
ಕದ್ದು ಕದ್ದು ಬೆಣ್ಣೆಯ ಮೆದ್ದ |
ರಾಧಾ ಮೋಹನನಿವನೇ ಚೋರ ||ಪ||
ಬಾರೆಂದು ಕರೆದರೆ ಬರಲೊಲ್ಲ
ಬರಬೇಕೆಂದರೆ ಬಿಡುವವನಲ್ಲ
ಕಾಣಿಸಿದಾ ಎಡೆ ಕ್ಷಣವಿರಲಿಲ್ಲ
ತನ್ನೆಣಿಕೆಯಲೇ ನಡೆಯಲು ಬಲ್ಲ ||1||
ಗೋಪರ ಮನೆಗಳ ಚಾವಡಿಯಲ್ಲಿ
ಪುಟ್ಟ ಪುಟ್ಟನೆಯ ಪದಚಿಹ್ನೆ
ಒಳಗಡೆ ಬರಿದಾಗಿದೆ ಬೆಣ್ಣೆ |
ಕೊಳಲಿನ ದನಿ ಮತ್ತೆಲ್ಲೋ ಕೇಳಿದೆ
ಚೋರನವನು ಆ ಕೊಳಲಿಗನೇ
ನಂದನ ಕಂದನದೇ ಚಿಹ್ನೆ ||2||
ದೂರಲು ಬರುವ ಗೋಪೀತಂಡಕೆ
ತುಂಟ ಚೋರನ ಸುಳಿವಿಲ್ಲ
ಗಂಟಲ ಮಾತಿಗೆ ಬಲವಿಲ್ಲ |
ಕೇಳು ಯಶೋಧೆ ಈ ಪರಿ ಲೂಟಿಯ
ಮಾಡಿದವರ ನಾವ್ ಕಂಡಿಲ್ಲ
ಕಳ್ಳರ ಕಳ್ಳನು ಸುಳ್ಳಲ್ಲ ||3||
- ಸದಾನಂದ
ಕಳ್ಳ ಹೆಜ್ಜೆಯಿಟ್ಟು ಬಂದ ಗೋಪೀಲೋಲ ನಂದಕಿಶೋರ |
ಕದ್ದು ಕದ್ದು ಬೆಣ್ಣೆಯ ಮೆದ್ದ |
ರಾಧಾ ಮೋಹನನಿವನೇ ಚೋರ ||ಪ||
ಬಾರೆಂದು ಕರೆದರೆ ಬರಲೊಲ್ಲ
ಬರಬೇಕೆಂದರೆ ಬಿಡುವವನಲ್ಲ
ಕಾಣಿಸಿದಾ ಎಡೆ ಕ್ಷಣವಿರಲಿಲ್ಲ
ತನ್ನೆಣಿಕೆಯಲೇ ನಡೆಯಲು ಬಲ್ಲ ||1||
ಗೋಪರ ಮನೆಗಳ ಚಾವಡಿಯಲ್ಲಿ
ಪುಟ್ಟ ಪುಟ್ಟನೆಯ ಪದಚಿಹ್ನೆ
ಒಳಗಡೆ ಬರಿದಾಗಿದೆ ಬೆಣ್ಣೆ |
ಕೊಳಲಿನ ದನಿ ಮತ್ತೆಲ್ಲೋ ಕೇಳಿದೆ
ಚೋರನವನು ಆ ಕೊಳಲಿಗನೇ
ನಂದನ ಕಂದನದೇ ಚಿಹ್ನೆ ||2||
ದೂರಲು ಬರುವ ಗೋಪೀತಂಡಕೆ
ತುಂಟ ಚೋರನ ಸುಳಿವಿಲ್ಲ
ಗಂಟಲ ಮಾತಿಗೆ ಬಲವಿಲ್ಲ |
ಕೇಳು ಯಶೋಧೆ ಈ ಪರಿ ಲೂಟಿಯ
ಮಾಡಿದವರ ನಾವ್ ಕಂಡಿಲ್ಲ
ಕಳ್ಳರ ಕಳ್ಳನು ಸುಳ್ಳಲ್ಲ ||3||
- ಸದಾನಂದ
Comments
ಉ: ಚೋರ ಕಿಶೋರ
In reply to ಉ: ಚೋರ ಕಿಶೋರ by santhosh_87
ಉ: ಚೋರ ಕಿಶೋರ
ಉ: ಚೋರ ಕಿಶೋರ
In reply to ಉ: ಚೋರ ಕಿಶೋರ by ಗಣೇಶ
ಉ: ಚೋರ ಕಿಶೋರ