ಚ್ಚು ಚ್ಚು

ಚ್ಚು ಚ್ಚು

ಕವನ

ಹುಚ್ಚು ಮನಸಿನ

ಹಚ್ಚೆ ಬರೆಸಿಕೊಂಡ

ಅಚ್ಚು ಹಾಕಿದ ಅಂಗಗಳ

ಬಿಚ್ಚು ಉಡಿಗೆಯಲ್ಲೂ

ಚುಚ್ಚು ಮಾತಿಗೆ ಅಣಕದೇ

ರೊಚ್ಚೆದ್ದು ಕುಣಿದವಳು

ಮಚ್ಚು ತೊರಿಸಿ ಗದರಿಸಿದಾಗ

ಇಚ್ಚೆ ಇಲ್ಲದಿದ್ದರೂ

ಪಚ್ಚೆ ಉಡುಗೆಗಳನ್ನ ಹಾಕಿ
 
ಕಚ್ಚು ತುಟಿಗಳೊಂದಿಗೆ
 
ಕಿಚ್ಚನೆದುರ ಹಸೆಮಣೆಯಲ್ಲಿ
 

ಪೆಚ್ಚಾಗಿ ಕುಳಿತಳು!!!!