ಜಗದ ಕಣ್ಣು

ಜಗದ ಕಣ್ಣು

ಕವನ

ಮಾಡುವ ಕಾರ್ಯಗಳು ಸ್ಪೂರ್ತಿಂದಿರಲಿ

ಹೋಡುವ ಮನಸ್ಸು ಕಟ್ಟಿಹಾಕುಂತಿರಲಿ

ಕಾಲದ ವಿವರಣೆಯ ಪಡೆಯುವಂತಿರಲಿ

ಬಾಳಿಗೆ ಸೂಕ್ತವಾದ ನಿದರ್ಶನವಾಗಿರಲಿ

 

ಕೆಟ್ಟ ದೃಷ್ಟಿಯು ಅನ್ಯರಿಗೆ ಬೀಳದಂತಿರಲಿ

ಪರರ ಸ್ಪರ್ಶವ ಸೋಕಿ ತಾಕದಂತಿರಲಿ

ನಿಮ್ಮ ಜೀವನ ನಿಮಗೆ ಕಾಡದಂತಿರಲಿ

ಯಾವುದರಲ್ಲೂ ಆಲಸ್ಯ ಮಾಡದಂತಿರಲಿ

 

ಕೆಲಸಗಳು ಚಟುವಟಿಕೆಯಿಂದಿರಲಿ

ಸೃಜನಾತ್ಮಕ ಯೋಜನೆಯಾಗಿರಲಿ

ಕಲಿಕೆಗೆ ಅವಕಾಶ ನೀಡಿದಂತಿರಲಿ

ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಇರಲಿ

 

ಸಮಯದ ಹೊಂದಾಣಿಕೆ ಆಗಬೇಕಿದೆ

ಆಗಿನ ಕೆಲಸ ಹಾಗೆ ಮಾಡಬೇಕಿದೆ

ಉತ್ತಮ ವ್ಯಕ್ತಿತ್ವದಿ ನಡೆಯಬೇಕಿದೆ

ಜಗದ ಕಣ್ಣಿಗೆ ಮಾದರಿಯಾಗಬೇಕಾಗಿದೆ.

-ಚಂದ್ರಶೇಖರ ಶ್ರೀನಿವಾಸಪುರ, ಕೋಲಾರ ಜಿಲ್ಲೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್