ಜಗದ ಮೊದಲ ಹಾಡು!
ಲಟಾಕಿಯಾ, ಸಿರಿಯಾ ದೇಶದ ಪ್ರಮುಖ ಬಂದರು ನಗರ. ಈ ನಗರಕ್ಕೂ ತಂಬಾಕಿಗೂ ಅವಿನಾಭಾವ ಸಂಬಂಧವಿದೆ. ಸಿರಿಯಾ ದೇಶ ಉತ್ಪಾದಿಸುವ ಉತ್ಕೃಷ್ಟ ತಂಬಾಕಿಗೆ ಈ ನಗರದ ಹೆಸ್ರಿಟ್ಟಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಹೇಳೋದಾದ್ರೆ ಸಿರಿಯಾ ದೇಶದ ಇತಿಹಾಸದ ಬೇರುಗಳು ಇರೋದೆ ಲಟಾಕಿಯಾ ನಗರದಲ್ಲಿ.
ಲಟಾಕಿಯಾದಿಂದ 11 ಕಿ.ಮೀ. ಉತ್ತರಕ್ಕೆ ಸಾಗಿದ್ರೆ ಅಲ್ಲಿ ಸಿಗುತ್ತೆ ರಾಸಾ ಶಾಮ್ರಾ, ಇದರ ಪ್ರಾಚೀನ ಹೆಸ್ರು ಅಗಾರಿಟ್. ಇದು ಕೋಟೆ ಕೊತ್ತಲುಗಳ ನಗರ. ಈ ನಗರ ಸುಮಾರು 6000 ವರ್ಷಗಳಷ್ಟು ಸುದೀರ್ಘ ಇತಿಹಾಸವನ್ನು ಒಳಗೊಂಡಿದೆ.
ಅಗಾರಿಟ್ ತಾಮ್ರಯುಗಕ್ಕೆ ಸೇರಿದ ನಗರ. ಕ್ರಿ. ಪೂ. 1800ರಲ್ಲಿ ಈ ಭಾಗವನ್ನು ಸ್ವಾತಂತ್ರ್ಯ ರಾಜಮನೆತನವೊಂದು ಆಳ್ವಿಕೆ ಮಾಡ್ತಿತ್ತು. ಕ್ರಿ.ಪೂ. 1450-1200ರ ಮಧ್ಯೆ ಆ ರಾಜಮನೆತನ ನಶಿಸಿಹೋಗಿದೆ ಎಂಬುದು ಇತಿಹಾಸಕಾರರ ವಾದ.
ಆ ಕಾಲಕ್ಕೆ ಸೇರಿದ ಅವಶೇಷಗಳಿಂದಾಗಿ ಇದೊಂದು ದೊಡ್ಡ ಕೃತಕ ದಿಣ್ಣೆಯಾಗಿ ಮಾರ್ಪಟ್ಟಿದೆ.
1929ರವರೆಗೆ ಈ ಜಾಗ ರೈತರು ಉತ್ತಿ ಬಿತ್ತುತ್ತಿದ್ದ ಭೂಮಿಯಾಗಿತ್ತು. ಒಮ್ಮೆ ರೈತರು ಉಳುಮೆ ಮಾಡುತ್ತಿದ್ದಾಗ ಸಮಾಧಿಯೊಂದು ಸಿಕ್ಕಿತ್ತು. ಈ ಮೂಲಕ ಪ್ರಾಚೀನ ಅಗಾರಿಟ್ ನಗರದ ಸಂಶೋಧನೆಗೆ ಮೊದಲು ಮುಂದಾದವ್ರು ಪ್ರಾನ್ಸ್ನ ಪ್ರಾಚ್ಯವಸ್ತು ಸಂಶೋಧಕರು.
ಸಂಶೋಧನೆಗೆ ಮುಂದಾದ ಪ್ರಾಚ್ಯವಸ್ತು ಸಂಶೋಧಕರಿಗೆ ಸಿಕ್ಕ ಕುರುಹುಗಳಿಂದಾಗಿ ಅಗಾರಿಟ್ ವಿಶ್ವವನ್ನೇ ತನ್ನತ್ತ ಸೆಳೆದುಕೊಳ್ತು. ಅಗಾರಿಟ್ ಹೊಂದಿದ್ದ ಅಂತಹ ಸೆಳವು ಯಾವುದು ಗೊತ್ತಾ?
`ಅದು ವರ್ಣಮಾಲೆ ಹುಟ್ಟಿದ ನಗರ'
ಇಂತಹದ್ದೊಂದು ವಾದ ಇತಿಹಾಸಕಾರರಲ್ಲಿದೆ. ಕ್ರಿ.ಪೂ. 1400ರಲ್ಲಿಯೇ ಅಗಾರಿಟ್ ನಗರದ ಜನ ವರ್ಣಮಾಲೆಯನ್ನು ಕಂಡುಹಿಡಿದಿದ್ದರು. ಅವರ ವರ್ಣಮಾಲೆಯಲ್ಲಿ 30 ಅಕ್ಷರಗಳಿದ್ದು, ಈ ಅಕ್ಷರಗಳು ಶಬ್ಧಗಳಿಗೆ ಅನುಗುಣವಾಗಿ ರೂಪುಗೊಂಡಿರುವುದು ಕಂಡು ಬರುತ್ತದೆ. ಅಗಾರಿಟ್ ವರ್ಣಮಾಲೆ ಹೊಂದಿರುವ ಹಲವಾರು ಮಣ್ಣಿನ ಫಲಕಗಳು ಉತ್ಖನನದ ವೇಳೆ ದೊರೆತಿವೆ.
ವರ್ಣಮಾಲೆ ಕಂಡು ಹಿಡಿದಿದ್ದ ಮಂದಿ ಸಾಹಿತ್ಯ ರಚನೆಯನ್ನೂ ಮಾಡಿದ್ದರು. ಇವರ ಸಾಹಿತ್ಯ ಮುಖ್ಯವಾಗಿ ಕಾವ್ಯ ಪ್ರಕಾರದಲ್ಲಿಯೇ ಇದೆ. ಮುಖ್ಯವಾಗಿ ಗುತರ್ಿಸಬಹುದಾದ ಕೃತಿಗಳಂದ್ರೆ `ಲೆಜೆಂಡ್ ಆಫ್ ಕಿಟರ್ು', `ಲೆಜೆಂಡ್ ಆಫ್ ದನೆಲ್' ಹಾಗೂ ಬಾಲ್ ಕಥೆಗಳು. ಈ ಎಲ್ಲಾ ಕೃತಿಗಳು ಮಣ್ಣಿನ ಫಲಕಗಳ ಮೇಲೆ ಮುದ್ರಿತಗೊಂಡಿವೆ. ಇದಕ್ಕಿಂತ ವಿಶಿಷ್ಟ ಅನ್ನಿಸೋದು ಅವರ ದೇವತೆಗಳ ಪರಿಕಲ್ಪನೆ.
ಅಗಾರಿಟ್ ಮಂದಿಯ ಪ್ರಕಾರ ಎಲ್ ದೇವತೆಗಳ ಅಧಿಪತಿ. ಈ ಅಂಶಗಳೂ ಸಹ ರಾಸ್ ಶಾಮ್ರಾ ಪ್ರಾಂತ್ಯದ ಉತ್ಖನನದ ವೇಳೆ ದೊರಕಿವೆ. ಇಂತಹ ಅದೆಷ್ಟೋ ಅಂಶಗಳು ಮಣ್ಣಿನ ಫಲಕಗಳಲ್ಲಿ ಅಡಗಿವೆ. ಅಗಾರಿಟ್ ಭಾಷೆ ಒಂದ್ರೀತಿಯಲ್ಲಿ ಹೀಬ್ರೂ ಭಾಷೆಯನ್ನು ಹೋಲುತ್ತದೆ ಎಂಬುದು ಕೆಲವರ ವಾದ. ಸ್ಕೈ ಗಾಡ್ ಎಲ್, ಮಾನವರ ಹಲವು ದೇವತೆಗಳ ತಂದೆ. ಅಶೀರ ಸ್ಕೈಗಾಡ್ನ ಮಡದಿ. ಅನತ್ ಅಶೀರಳ ಮಗಳು, ಈಕೆ ಪ್ರೇಮ ದೇವತೆ. ಇವಳ ಅಣ್ಣ ಬಾಲ್. ಈತ ಚಂಡಮಾರುತಗಳ ದೈವವಂತೆ. ಈತನ ಬಗ್ಗೆ ಹಲವಾರು ಕಥನಗಳನ್ನು ಅಗಾರಿಟ್ ಮಂದಿ ಬರೆದಿದ್ದಾರೆ.
ಒಂದು ನಾಗರೀಕತೆಯ ಕುರುಹುಗಳನ್ನು ಹುಡುಕುತ್ತಾ ಹೋದ್ರೆ ಹೀಗೆ ಹಲವಾರು ಅಂಶಗಳು ಬೆಳಕಿಗೆ ಬರ್ತವೆ. ಅಗಾರಿಟ್ ನೆಲದ ಅಚ್ಚರಿಯ ವಿಚಾರಗಳಲ್ಲಿ ಇನ್ನೂ ಒಂದು ಕಾರಣವಿದೆ. ಅದುವೇ ಆ ಕಾಲಕ್ಕೆ ಸೇರಿದ ಒಂದು ಹಾಡು. ಅದು ಅಂತಿಂಥ ಹಾಡಲ್ಲ, ಅದಕ್ಕೊಂದಷ್ಟು ವಿಶೇಷಣಗಳಿವೆ.
ಅಗಾರಿಟ್ ನಗರವನ್ನು ಹಲವು ಮಂದಿ ಸಂಶೋಧನೆ ಮಾಡಿದ್ದಾರೆ. ಹಾಗೆಯೇ ಬಹಳಷ್ಟು ವಿಚಾರಗಳನ್ನು ಪತ್ತೆ ಮಾಡಿದ್ದಾರೆ. ಅವ್ರೆಲ್ಲರಿಗಿಂತ ಸಾಕಷ್ಟು ಶ್ರಮ ವಹಿಸಿದವ್ರು ಅನ್ನೆ ಕಿಲ್ಮೆರ್. ಕ್ಯಾಲಿಪೋನರ್ಿಯಾ ವಿಶ್ವವಿದ್ಯಾಲಯದ ಪ್ರಾಚ್ಯಶಾಸ್ತ್ರದ ಪ್ರಾಧ್ಯಾಪಕಿ. ಒಮ್ಮೆ ಇವ್ರೊಂದು ಮಣ್ಣಿನ ಫಲಕವನ್ನು ಪತ್ತೆ ಮಾಡಿದ್ರು. ಆದ್ರೆ ಅದು ಏನೆಂದು ಗುತರ್ಿಸುವುದು ಅಸಾಧ್ಯವಾಗಿತ್ತು. ಅದಕ್ಕಿಂತ ಮುಖ್ಯವಾಗಿ ಅದನ್ನು ನಕಲು ಮಾಡಿ ಓದುವುದೇ ಕಷ್ಟವಾಗಿತ್ತು.
ಭತರ್ಿ 15 ವರ್ಷಗಳ ಸುದೀರ್ಘ ಅವಧಿಯ ಸಂಶೋಧನೆ ಮಾಡಿದ್ರು. ಸಂಶೋಧನೆಯ ಫಲಿತಗಳು ಆಕೆಗೆ ವಿಶ್ವಮಾನ್ಯತೆಯನ್ನು ತಂದು ಕೊಟ್ಟವು. ಸಂಶೋಧನೆಯ ಫಲಿತಾಂಶಗಳು ಏನು ಗೊತ್ತಾ?
ಅದು 3200 ವರ್ಷಗಳಷ್ಟು ಹಳತ್ತಾದ ಹಾಡು. ಅದು ಜಗತ್ತಿನ ಮೊತ್ತಮೊದಲ ಗೀತೆ ಹೌದು.
ಅದು ಕೇವಲ ಹಾಡು ಮಾತ್ರವೇ ಆಗಿರಲಿಲ್ಲ. ಅದ್ರೊಂದಿಗೆ ಸಂಗೀತದ ಲಯಗಳನ್ನು ಒಳಗೊಂಡಿದ್ದ ಮಣ್ಣಿನ ಮುದ್ರಿಕೆಯಾಗಿತ್ತು. ಸುಮಾರು 3200 ವರ್ಷಗಳ ಹಿಂದಿನ ಮಂದಿಗೆ ಸಂಗೀತ ತಿಳಿದಿತ್ತಾ? ಅವ್ರ ಮಣ್ಣಿನ ಫಲಕಗಳನ್ನ ನೋಡಿದ್ರೆ ಅದು ನಿಜ ಅನ್ನೊದು ಗೊತ್ತಾಗುತ್ತೆ.
ಆ ಹಾಡು ಮತ್ತು ಸಂಗೀತ ಎರಡನ್ನೂ ಒಳಗೊಂಡಿದೆ. ಅಂದ್ಹಾಗೆ ಈ ಹಾಡು ಅಗಾರಿಟ್ ಜನರು ಪೂಜ್ಯ ಭಾವದಿಂದ ಕಾಣುವ ನಿಕ್ಕಾಲ್ ವ ಇಬ್ ದೇವತೆಗಾಗಿ ಬರೆಯಲಾಗಿದೆ. ಇದು ನಿಕ್ಕಾಲ್ ವ ಇಬ್ ದೇವತೆಯನ್ನು ಸ್ತುತಿಸುವ ಹಾಡಾಗಿದೆ. ಅಗಾರಿಟ್ರ ಪ್ರಕಾರ ನಿಕ್ಕಾಲು ದೇವತೆ ಚಂದ್ರ ದೇವನ ಮಡದಿ.
ಈ ಗೀತೆಯನ್ನು ಬರೆದಾತ ಹಮ್ಮರ್ಅಪಿ ಅನ್ನೋದನ್ನ ಕಿಲ್ಮೆರ್ ತಿಳಿಸಿದ್ದಾರೆ. ಅಂದ್ಹಾಗೆ ಈ ಹಮ್ಮರ್ಅಪಿ ಯಾರು ಅನ್ನೋ ಬಗ್ಗೆ ಅನುಮಾನವಿದೆ. ಯಾಕಂದ್ರೆ ಅಗಾರಿಟ್ನ್ನು ಕ್ರಿ.ಪೂ. 1800ರಲ್ಲಿ ಆಳಿದ ಸ್ವಾತಂತ್ರ್ಯ ರಾಜಮನೆತನದ ಕೊನೆಯ ದೊರೆಯ ಹೆಸ್ರು ಸಹ ಅಮ್ಮರ್ಅಪಿ.
ಅಗಾರಟ್ನಲ್ಲಿ ಸಿಕ್ಕಿರುವಂತಹ ಮಣ್ಣಿನ ಫಲಕಗಳು ಬೇರೆಡೆ ಸಿಕ್ಕವುಗಳಿಗಿಂತ ಭಿನ್ನವಾಗಿದ್ದವು. ಆದ್ರೆ ಅಗಾರಿಟ್ನಲ್ಲಿ ಸಿಕ್ಕ ಮಣ್ಣಿನ ಫಲಕಗಳು ಎರಡು ಭಾಗಗಳನ್ನು ಹೊಂದಿದ್ದವು. ಮೇಲ್ಭಾಗದಲ್ಲಿ ಸಾಹಿತ್ಯ ಇದ್ದು, ಕೆಳಭಾಗದಲ್ಲಿ ಸಂಖ್ಯೆಗಳು ಮತ್ತು ತಾಂತ್ರಿಕ ಪದಗಳಿವೆ. ಈ ಕೆಳಗಿನ ಸಾಲುಗಳು ಹೇಳುವಂತಹದ್ದು ಸಂಗೀತದ ಲಯವನ್ನು. ಸುಮಾರು 3200 ವರ್ಷಗಳ ಹಿಂದೆಯೇ ಅಗಾರಿಟ್ ಮಂದಿ ಸಂಗೀತದ ಬಗ್ಗೆ ಎಂತಹ ಜ್ಞಾನ ಹೊಂದಿದ್ದರು ಎಂಬುದನ್ನು ಈ ಮಣ್ಣಿನ ಫಲಕಗಳು ಸಾರಿ ಹೇಳುತ್ತವೆ.
ಇಷ್ಟಕ್ಕೂ 3200 ವರ್ಷಗಳಷ್ಟು ಹಳೆಯದಾದ ಅಗಾರಿಟ್ ಹಾಡಿನ ಭಾವಾರ್ಥ ಏನು ಗೊತ್ತಾ? ಇಲ್ಲೊಮ್ಮೆ ನೋಡಿಬಿಡಿ.
ಬಲ ಭಾಗದಲ್ಲಿ ಬೆಳ್ಳಿ ಕತ್ತಿಯ ಲಾಂಛನವಿರುವ ಸಿಂಹಾಸನವನ್ನು ಆಕೆಗಾಗಿ ಅಪರ್ಿಸುತ್ತಿರುತ್ತೇನೆೆ.
ನಾನು ತ್ಯಾಗಕ್ಕೆ ಸಜ್ಜಾಗಿದ್ದೇನೆ: ಅಕೆಯ ಕೈ ಸೇರಲು ಎರಡು ಬಟ್ಟಲು ರೊಟ್ಟಿಯ ತುಣುಕುಗಳು ಸಿದ್ಧವಾಗಿವೆ.
ನಾನು ಅಪರ್ಿಸಿಕೊಳ್ಳುವ ಪಾಪಗಳು ನನ್ನನ್ನು ಮುತ್ತಿಕೊಳ್ಳುತ್ತವೆ.
ನನ್ನ ಪಾಪಗಳನ್ನು ಆಕೆ ತೊಡೆದು ಹಾಕಬಹುದು; ಅವುಗಳು ಆಕೆಯನ್ನು ಆವರಿಸುವುದಿಲ್ಲ ಮತ್ತು ನಿರಾಕರಿಸುವುದಿಲ್ಲ; ಆಕೆಗೆ ನೀಡುತ್ತೇನೆ, ನೀವೂ ಒಪ್ಪುವಂತೆ.
ಪಾಪಗಳು ರಾಜಿ ವ್ಯಾಪ್ತಿಗೆ ಬಂದರೇ ನೀವೂ ಪ್ರೇಮಿಸುತ್ತೀರಿ.
ಆಕೆಗೆ ಸಮಪರ್ಿಸಿಕೊಳ್ಳುವ ಎಳ್ಳಿನ ಎಣ್ಣೆ ನನ್ನ ಬೆನ್ನಿಗೆ ನಿಲ್ಲುತ್ತದೆ.
ನಾನು ವಿಸ್ಮಯದಿಂದ ಬದಲಾಗುತ್ತೇನೆ.
ನಾನು ಆಕೆಗೆ ಪ್ರೀತಿ ಪಾತ್ರನಾದೆ; ಅವಳು ನನ್ನನ್ನು ಹೃದಯದಲ್ಲಿಟ್ಟು ಪ್ರೇಮಿಸುತ್ತಾಳೆ.
ಆಕೆ ನಿಕ್ಕಾಲ್, ಅವರನ್ನು ಬಲಪಡಿಸುತ್ತಾಳೆ. ವಿವಾಹಿತರು ಮಕ್ಕಳನ್ನು ಹೊಂದುವಂತೆ ಮಾಡುತ್ತಾಳೆ.
ಆದ್ರೆ ಆಕೆ ಯಾವೊಬ್ಬ ಮಗುವನ್ನು ಹೆರುವುದಿಲ್ಲ; ಮಕ್ಕಳನ್ನು ಹಡೆಯುವುದು ನಿನ್ನ ಪತ್ನಿ ಮಾತ್ರ.
Comments
ಉ: ಜಗದ ಮೊದಲ ಹಾಡು!
In reply to ಉ: ಜಗದ ಮೊದಲ ಹಾಡು! by lpitnal@gmail.com
ಉ: ಜಗದ ಮೊದಲ ಹಾಡು!
ಉ: ಜಗದ ಮೊದಲ ಹಾಡು!
In reply to ಉ: ಜಗದ ಮೊದಲ ಹಾಡು! by partha1059
ಉ: ಜಗದ ಮೊದಲ ಹಾಡು!