ಜನಕನ ನೆಚ್ಚಿನ ಬೆನಕ
ಕವನ
ಗಣೇಶ ಚತುರ್ಥಿಯ ಶುಭಾಶಯಗಳು
ಜನಕನ ನೆಚ್ಚಿನ ಬೆನಕ
ನೀನು ನಿನ್ನ ಜನಕನ ಮೆಚ್ಚಿಸೂ ಮೂಢ
ಆಗ ಆ ಬೆನಕನು ನಿನ್ನ ಮೆಚ್ಚುವನು ನೋಡ
ಶಿರವ ಕಡಿದರೂ ಶಿವನ ಆರಾಧನೆ ಬಿಡಲಿಲ್ಲ
ಮಾತೃಭಕ್ತಿಯಲ್ಲಿ ಬೆನಕನಿಗೆ ಸರಿಸಾಟಿ ಯಾರು ಇಲ್ಲ
ಜನಕನ ಅಣತಿಯಂತೆ ತಪವು ಕೇಡಲು ಬಿಡಲಿಲ್ಲ
ಮಾತಾಪಿತರೇ ಸಕಲ ಜಗತ್ತು ಎಂಬ ಸತ್ಯ ಸಾರಿದನಲ್ಲ
!!ನೀನು ನಿನ್ನ ಜನಕನ ಮೆಚ್ಚಿಸೂ ಮೂಢ!!
ಮಾತೆಯೇ ಮೊದಲ ಗುರುವಾದಳು ಬೆನಕನಿಗೆ
ಜನಕನ ಆರಾಧನೆಯೊಂದೆ ಮಾರ್ಗ ಸಾಧನೆಗೆ
ಶಿವಕೃಪೆಯಿಂದ ಅಷ್ಠಸಿದ್ಧಿಗಳನ್ನು ಪಡೆದ ಕೊನೆಗೆ
ಅಷ್ಠಾಸುರರನ್ನು ಅಂತ್ಯಗೊಳಿಸಿದ ಸರ್ವರ ಹಿತಕ್ಕಾಗೆ
!!ನೀನು ನಿನ್ನ ಜನಕನ ಮೆಚ್ಚಿಸೂ ಮೂಢ!!
ವಿದ್ಯೆಗೆ ಅಧಿಪತಿಯಾದ ನಮ್ಮ ಬೆನಕಣ್ಣ
ಬೆನಕನ ನೆನೆದರೆ ಯಾವ ವಿಘ್ನಗಳು ಬರವಣ್ಣ
ಅಯ್ಯಪ್ಪನಿಗೆ ಷಣ್ಮುಖನಿಗೆ ಇವನು ಹಿರಿಯ ಅಣ್ಣ
ಬೆನಕನ ನೆನೆಯುತ್ತಾ ಹಬ್ಬವನ್ನು ಮಾಡೋಣ
!!ನೀನು ನಿನ್ನ ಜನಕನ ಮೆಚ್ಚಿಸೂ ಮೂಢ!!
ರಚನೆ:-ತುಂಬೇನಹಳ್ಳಿ ಕಿರಣ್ ರಾಜು ಎನ್
ಚಿತ್ರ್
