ಜನಾರ್ದನ ದುರ್ಗ ಅವರ ಹನಿಗಳು (ಭಾಗ ೩)
ಕವನ
*ಆಗದು ಜಿ..!*
ಅಹಿಂಸೆ ಪರಮೋ ಧರ್ಮ
ಬೋಧಿಸಿದರಂದು ಗಾಂಧೀ *ಜಿ* ..!
ಛಲ ದೃಢತೆಗೆ ಸಾಕ್ಷಿಯಾದರಂದು
ವಿಜಯಂ ಗೈದ ಶಾಸ್ತ್ರಿ *ಜಿ* ...!!
ನಿಮ್ಮ ಆದರ್ಶಗಳೆಲ್ಲ ಹಳಸಲಾಯಿತಿಂದು
ಕಾರಣ ಬಳಸುತ್ತಿರುವೆವು ನಾವು ೫ *ಜಿ* ...!!!
*****
*ಪಾಡು..!*
ಗಾಂಧಿ, ಶಾಸ್ತ್ರಿ
ಬೋಧಿಸಿದಿರಿ
ನಮಗಂದು
ಸತ್ಯ, ಸುಂದರ ಸರಳತೆ...!
ಅದನ್ನೇ ಬಿಟ್ಟು
ಸುಖಭೋಗದಾಸೆಗೆ ಬಿದ್ದು
ಕಾಣುತ್ತಿದ್ದೇವೆ ನಾವಿಂದು
ಸಂಪೂರ್ಣ ವಿಫಲತೆ...!!
- *ಜನಾರ್ದನ ದುರ್ಗ*
ಚಿತ್ರ್
